ಹಾಸನ: ತಾಲ್ಲೂಕಿನ ಚಿಕ್ಕಬಸವನಹಳ್ಳಿಯಲ್ಲಿ ಮನೆಯ ಬೀಗ ಮುರಿದು ಬೆಳ್ಳಿಯ ಆಭರಣ, ನಗದು, ಟಿವಿ ಕಳವು ಮಾಡಲಾಗಿದೆ.

ಗ್ರಾಮದ ದಿನೇಶ್ ಸಿ.ಎಸ್. ಅವರು ಏ.17ರಂದು ಸಂಜೆ ಹಳೆಯ ಮನೆಗೆ ಬೀಗ ಹಾಕಿ, ಹೊಸ ಮನೆಗೆ ಬಂದು ಅಲ್ಲಿಯೇ ಊಟ ಮಾಡಿ ಮಲಗಿದ್ದರು. 18ರಂದು ಬೆಳಿಗ್ಗೆ ಹಳೆಯ ಮನೆಗೆ ಬಂದು ನೋಡಿದಾಗ, ಬಾಗಿಲು ತೆರೆದಿತ್ತು. ತಿಜೋರಿ ಒಳಗಿದ್ದ ₹32ಸಾವಿರ ನಗದು, ₹45 ಸಾವಿರ ಮೌಲ್ಯದ 200 ಗ್ರಾಂ ಬೆಳ್ಳಿಯ ಸರ ಮತ್ತು ಪದಕ (ದೇವರ ಪದಕ) ಹಾಗೂ ₹12 ಸಾವಿರ ಮೌಲ್ಯದ ಟಿವಿ ಕಳವು ಮಾಡಲಾಗಿದೆ. ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ: ನಗರದ ಸತ್ಯಮಂಗಲದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಬಡಾವಣೆ ಠಾಣೆ ಪೊಲೀಸರು, 917 ಗ್ರಾಂ ಗಾಂಜಾ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ.

ಬಡಾವಣೆ ಠಾಣೆಯ ಸಿಬ್ಬಂದಿ ಶಿವಕುಮಾರ್ ಗಸ್ತಿನಲ್ಲಿದ್ದಾಗ, ಗಾಂಜಾ ಮಾರಾಟದ ಬಗ್ಗೆ ಮಾಹಿತಿ ದೊರೆತಿತ್ತು. ಬಡಾವಣೆ ಠಾಣೆ ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸತ್ಯಮಂಗಲದ ಸಾರ್ವಜನಿಕ ಸ್ಥಳಕ್ಕೆ ಬಂದು ನೋಡಿದಾಗ, ಹೇಮಾವತಿ ನಗರದ ಸುಜಯ್ ಕುಮಾರ್ ಎಚ್.ಎಲ್., ಮುಜಾಮಿಲ್ ಹಾಗೂ ಹರ್ಷ ಆರ್. ಗಾಂಜಾ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಮೂವರನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-36-1053434223

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.