ಹಾಸನ: ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿಯಲ್ಲಿ ಗೃಹಿಣಿ ಭವ್ಯಾ, ಕಲ್ಯಾಣಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಗಂಡನ ಮನೆಯವರ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಭವ್ಯಾ ಅವರ ತಾಯಿ ಅನುಸೂಯಾ ದೂರು ನೀಡಿದ್ದಾರೆ.

ಸಬ್ಬನಹಳ್ಳಿಯ ಅನುಸೂಯ ಅವರ ಮಗಳು ಎಸ್.ಕೆ.ಭವ್ಯಾ, ಸಿಗರನಹಳ್ಳಿಯ ಶಿವರಾಜು ಎಸ್.ಆರ್. ಜೊತೆಗೆ 4 ವಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಎರಡೂವರೆ ವರ್ಷದ ಹೆಣ್ಣು ಮಗು ಇದೆ.

ಶಿವರಾಜು ವರದಕ್ಷಿಣೆ ತರುವಂತೆ ಭವ್ಯಾಗೆ ಕಿರುಕುಳ ನೀಡುತ್ತಿದ್ದ. ಈ ಕುರಿತು ಮಗಳು ನನ್ನ ಬಳಿ ಹೇಳಿದ್ದಳು. ಅದರಂತೆ ಸಿಗರನಹಳ್ಳಿಗೆ ತೆರಳಿ ರಾಜಿ–ಪಂಚಾಯಿತಿ ಮಾಡಲಾಗಿತ್ತು. ಆದರೆ, ಏ.16ರಂದು ಕುಡಿದು ಬಂದ ಶಿವರಾಜು, ಪತ್ನಿ ಭವ್ಯಾಗೆ ನಿಂದಿಸಿದ್ದು, ವರದಕ್ಷಿಣೆ ತರುವಂತೆ ಕಿರುಕುಳ ಮುಂದುವರಿಸಿದ್ದ. ಇದನ್ನು ಭವ್ಯಾ ನನ್ನ ಬಳಿ ಹೇಳಿಕೊಂಡಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದರಿಂದ ಮನನೊಂದ ಭವ್ಯಾ ಮನೆ ಬಿಟ್ಟು ತೆರಳಿದ್ದರು. 17ರಂದು ಸಿಗರನಹಳ್ಳಿ ಗ್ರಾಮಕ್ಕೆ ಬಂದು ನೋಡಿದಾಗ, ಗ್ರಾಮದ ಕಲ್ಯಾಣಿಯಲ್ಲಿ ಭವ್ಯಾ ಮೃತದೇಹ ಪತ್ತೆಯಾಗಿದೆ. ಅಳಿಯ ಶಿವರಾಜನ ಕಿರುಕುಳದಿಂದ ಮಗಳು ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಕ್ರಮ ಕೈಗೊಳ್ಳುವಂತೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-36-1019892543

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.