ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC ಹಾಸನ: 19 ವಿದ್ಯಾರ್ಥಿಗಳಿಗೆ ಪೂರ್ಣಾಂಕ

ಎಸ್ಸೆಸ್ಸೆಲ್ಸಿ: ಜಿಲ್ಲೆಗೆ ‘ಎ’ ಗ್ರೇಡ್‌ ಮಾನ್ಯತೆ, ಶೇ 95.60 ಫಲಿತಾಂಶ
Last Updated 19 ಮೇ 2022, 15:37 IST
ಅಕ್ಷರ ಗಾತ್ರ

ಹಾಸನ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿಫಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳುಗಮನಾರ್ಹ ಸಾಧನೆ ಮಾಡಿದ್ದು, 19 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ.ಇವರಲ್ಲಿ 14 ಬಾಲಕಿಯರು, ಐವರು ಬಾಲಕರು ಸೇರಿದ್ದಾರೆ.

ಸಾಧಕರಲ್ಲಿ ಖಾಸಗಿ ಶಾಲೆ ಮಾತ್ರವಲ್ಲದೆ ಸರ್ಕಾರಿ ಹಾಗೂ ಮೊರಾರ್ಜಿ ಶಾಲೆಯವಿದ್ಯಾರ್ಥಿಗಳೂ ಸೇರಿದ್ದಾರೆ. ಪರೀಕ್ಷೆಗೆ ಹಾಜರಾದ 19,994 ವಿದ್ಯಾರ್ಥಿಗಳ ಪೈಕಿ19,115 ಮಂದಿ ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಫಲಿತಾಂಶ 95.60 ಲಭಿಸಿದ್ದು, ‘ಎ’ ಗ್ರೇಡ್ ಮಾನ್ಯತೆ ಪಡೆದಿದೆ.

2019–20ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ 9ನೇಸ್ಥಾನ, 2020–21ರಲ್ಲಿ ಜಿಲ್ಲೆಗೆ ‘ಎ’ ಗ್ರೇಡ್‌ಹಾಗೂ2021–22ರಲ್ಲಿ ‘ಎ’ ಗ್ರೇಡ್‌ ಲಭಿಸಿದೆ.

ಪ್ರತಿಭಾವಂತ 19 ವಿದ್ಯಾರ್ಥಿಗಳಲ್ಲಿ ವಿಜಯ ಆಂಗ್ಲ ಮಾಧ್ಯಮ ಶಾಲೆಯ 7ವಿದ್ಯಾರ್ಥಿಗಳು ಪೂರ್ಣಾಂಕ ಪಡೆದಿದ್ದಾರೆ. ಪ್ರಥಮ ಭಾಷೆಯಲ್ಲಿ 726, ದ್ವಿತೀಯ ಭಾಷೆಯಲ್ಲಿ 770, ತೃತೀಯ ಭಾಷೆಯಲ್ಲಿ 1311, ಗಣಿತ ವಿಷಯದಲ್ಲಿ 342, ಸಮಾಜವಿಜ್ಞಾನ ವಿಷಯದಲ್ಲಿ 2011 ವಿದ್ಯಾರ್ಥಿಗಳು ಪೂರ್ಣಾಂಕ ಪಡೆದಿದ್ದಾರೆ. ಮಕ್ಕಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದರೆ,ಪೋಷಕರು ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಜಿಲ್ಲೆಯ ಗುಣಾತ್ಮಕ ಫಲಿತಾಂಶ ಶೇಕಡಾ 87.37 ಬಂದಿದ್ದು, ರಾಜ್ಯದ ಸರಾಸರಿಫಲಿತಾಂಶಕ್ಕಿಂತ ಶೇ 1.74 ಹೆಚ್ಚಾಗಿದೆ. 9828 ಬಾಲಕರ ಪೈಕಿ 9294 ಮಂದಿಉತ್ತೀರ್ಣರಾಗಿದ್ದು, ಶೇ 94.57 ಫಲಿತಾಂಶ ಇದೆ. 10166 ಬಾಲಕಿಯರ ಪೈಕಿ 9821ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಶೇ 96.61 ಫಲಿತಾಂಶ ಬಂದಿದೆ.

ಸರ್ಕಾರಿ ಶಾಲೆಯ ಫಲಿತಾಂಶ ಶೇ 95.09, ಅನುದಾನಿತ ಶಾಲೆಯ ಫಲಿತಾಂಶ ಶೇ92.86 ಮತ್ತು ಅನುದಾನ ರಹಿತ ಶಾಲೆಯ ಫಲಿತಾಂಶ ಶೇ 98.81 ಬಂದಿದೆ.

ರಾಜ್ಯಕ್ಕೆ ಮೊದಲ ಹತ್ತು ಸ್ಥಾನಗಳನ್ನು ವಿಜಯ ಶಾಲೆಯ 46 ವಿದ್ಯಾರ್ಥಿಗಳುಪಡೆದುಕೊಂಢಿದ್ದು, 600ಕ್ಕಿಂತಲೂ ಹೆಚ್ಚು ಅಂಕಗಳನ್ನು 88 ವಿದ್ಯಾರ್ಥಿಗಳು ಪಡೆದಿದ್ದಾರೆ.ಎಸ್.ಆರ್.ಎಸ್. ಪ್ರಜ್ಞಾ ವಿದ್ಯಾಶಾಲೆಯ ವಿದ್ಯಾರ್ಥಿನಿ ಎಚ್.ಡಿ ಲಿಖಿತ ಪೂರ್ಣಾಂಕಪಡೆದಿದ್ದಾರೆ. ಮಾನ್ಯ ಡಿ. ಹಾಗೂ ತ್ರಿಶಾ ಆರ್. ಶೇಖರ್ ಅವರು 624,ಎಂ.ಎಸ್.ಸಿಂಚನ 622 ಅಂಕ ಪಡೆದಿದ್ದಾರೆ.ಶೇ 100 ಫಲಿತಾಂಶ ಬಂದಿದೆ.

ಟೈಮ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಸತತ ನಾಲ್ಕು ವರ್ಷಗಳಿಂದ ಶೇಕಡಾ 100ರಷ್ಟು ಫಲಿತಾಂಶ ಪಡೆದಿದ್ದು, ಇಬ್ಬರು 625 ಕ್ಕೆ 624 ಅಂಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT