ಹಾಸನ: ಮನೆಗೆ ಕನ್ನ ಹಾಕಿ ಚಿನ್ನಾಭರಣ, ನಗದು ದೋಚುತ್ತಿರುವ ಕಳ್ಳರು, ಇದೀಗ ಜಮೀನಿನಲ್ಲಿ ಬೆಳೆದ ಬಾಳೆಗೊನೆಗಳನ್ನೂ ಕಳವು ಮಾಡಿದ್ದಾರೆ.

ಅರಸೀಕೆರೆ ತಾಳ್ಲೂಕಿನ ಮುದ್ದನಹಳ್ಳಿ ಗ್ರಾಮದ ಚಂದ್ರಶೇಖರ್ ನಾಯ್ಕ ಅವರು ಗೀಜಿಹಳ್ಳಿಯ ಜಮೀನಿನಲ್ಲಿ ಬಾಳೆ ತೋಟ ಮಾಡಿದ್ದು, ಫಸಲು ಕಟಾವಿಗೆ ಬಂದಿತ್ತು. ಮೇ 3 ರಂದು ಬಾಳೆಗಿಡಗಳಿಗೆ ನೀರು ಹಾಯಿಸಿ ಮನೆಗೆ ಬಂದಿದ್ದರು.

ಮೇ 4 ರಂದು ಜಮೀನಿಗೆ ಹೋಗಿ ನೋಡಿದಾಗ, ಬೆಳೆದಿದ್ದ 200 ಬಾಳೆಗೊನೆಗಳನ್ನು ಕಳವು ಮಾಡಲಾಗಿದ್ದು, ಇವುಗಳ ಅಂದಾಜು ಬೆಲೆ ₹1.40 ಲಕ್ಷ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಕತ್ತರಿಘಟ್ಟ ಗೇಟ್ ಬಳಿ ರಸ್ತೆ ಪಕ್ಕದ ಮೈಲಿ ಗಲ್ಲಿಗೆ ಡಿಕ್ಕಿ ಹೊಡೆದ ಕಾರು ಉರುಳಿ ಬಿದ್ದಿದ್ದು, ವ್ಯಕ್ತಿ ಮೃತಪಟ್ಟಿದ್ದಾರೆ.

ಬೆಳ್ಳಂದೂರಿನ ಆನಂದ್ ಗುರು ಮತ್ತು ದೀಪನ್ವಿತ್ ಗುರು ಎಂಬುವವರು ಧರ್ಮಸ್ಥಳದಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ತೀವ್ರ ಗಾಯಗೊಂಡಿದ್ದ ಇಬ್ಬರನ್ನೂ ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದೀಪನ್ವಿತ ಗುರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಆನಂದ್ ಗುರು ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-36-1921506769

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.