ಹಾಸನ: ಜಿಲ್ಲೆಗೂ ಕ್ಯಾನ್ಸರ್ ಚಿಕಿತ್ಸಾ ಸೇವೆಗಳ ಲಭ್ಯತೆಯನ್ನು ವಿಸ್ತರಿಸುವ ಮಹತ್ವದ ಹೆಜ್ಜೆಯಾಗಿ ಕ್ಲಿಯರ್ಮೆಡಿ ರೇಡಿಯಂಟ್ ಕ್ಯಾನ್ಸರ್ ಸೆಂಟರ್ ಸಂಸ್ಥೆಯು, ಚೈತನ್ಯ ಎನ್ಡಿಆರ್ಕೆ ಆಸ್ಪತ್ರೆ ಸಹಯೋಗದಲ್ಲಿ ಅಂಕೊಲಾಜಿ ಸೇವೆಗಳನ್ನು ಪ್ರಾರಂಭಿಸಿದೆ ಎಂದು ಕ್ಯಾನ್ಸರ್ ಸೆಂಟರ್ ನಿರ್ದೇಶಕ, ಕ್ಯಾನ್ಸರ್ ತಜ್ಞ ಡಾ.ಶ್ರೀನಿವಾಸ್ ಕೆ.ಜಿ. ತಿಳಿಸಿದರು.

ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿ ಬುಧವಾರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಚೈತನ್ಯ ಎನ್ಡಿಆರ್ಕೆ ಆಸ್ಪತ್ರೆಯಲ್ಲಿ ವಿಶೇಷ ಹೊರ ರೋಗಿ ವಿಭಾಗ (ಒಪಿಡಿ) ಕಾರ್ಯನಿರ್ವಹಿಸಲಿದ್ದು, ಅನುಭವಿ ಕ್ಯಾನ್ಸರ್ ತಜ್ಞರಿಂದ ಸಮಾಲೋಚನೆ, ಮೌಲ್ಯಮಾಪನ ಹಾಗೂ ಮುಂದಿನ ಚಿಕಿತ್ಸೆಗೆ ಮಾರ್ಗದರ್ಶನ ನೀಡಲಾಗುತ್ತದೆ’ ಎಂದರು.

ಉದ್ಘಾಟನೆ ಪ್ರಯುಕ್ತ ಈ ತಿಂಗಳ ಅಂತ್ಯದವರೆಗೆ ಸಮಾಲೋಚನೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಸರ್ಜಿಕಲ್ ಅಂಕಾಲಾಜಿಸ್ಟ್ ಡಾ.ರಕ್ಷಿತ್ ಶೃಂಗೇರಿ ಪ್ರತಿ ಬುಧವಾರ ಲಭ್ಯರಾಗಲಿದ್ದಾರೆ ಎಂದು ವಿವರಿಸಿದರು.

‘ಕ್ಯಾನ್ಸರ್ ಚಿಕಿತ್ಸೆಯ ಲಭ್ಯತೆಯಲ್ಲಿರುವ ಅಂತರವನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ. ಆರಂಭಿಕ ಹಂತದಲ್ಲೇ ಪತ್ತೆ ಮತ್ತು ಚಿಕಿತ್ಸೆ ಪಡೆಯಲು ಈ ಸೇವೆಗಳು ಸಹಕಾರಿಯಾಗಲಿವೆ. ಪುರುಷರು ಮತ್ತು ಮಹಿಳೆಯರಿಬ್ಬರಿಗೂ ತಪಾಸಣೆ ಹಾಗೂ ಸಮಾಲೋಚನೆ ಸೌಲಭ್ಯ ಒದಗಿಸಲಾಗಿದೆ’ ಎಂದು ಹೇಳಿದರು.

ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6ರಿಂದ 8ರವರೆಗೆ ಚೈತನ್ಯ ಎನ್ಡಿಆರ್ಕೆ ಆಸ್ಪತ್ರೆಯಲ್ಲಿ ವಿಶೇಷ ಸಂಜೆ ಕ್ಯಾನ್ಸರ್ ಕ್ಲಿನಿಕ್ ಕೂಡ ಕಾರ್ಯನಿರ್ವಹಿಸಲಿದೆ. ಇಲ್ಲಿ ರೋಗನಿರ್ಣಯ, ಚಿಕಿತ್ಸಾ ಯೋಜನೆ ಮತ್ತು ಚಿಕಿತ್ಸೆಯ ನಂತರದ ಆರೈಕೆ ಸೇರಿದಂತೆ ಇತರೆ ಸೇವೆಗಳು ಲಭ್ಯವಿರುತ್ತವೆ ಎಂದು ತಿಳಿಸಿದರು.

ಡಾ. ರಕ್ಷಿತ್ ಶೃಂಗೇರಿ ಮಾತನಾಡಿ, ‘ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಬಲಪಡಿಸುವ ಬದ್ಧತೆ ಹೊಂದಿದ್ದೇವೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-36-1859553480

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.