ಸೋಮವಾರ, ಅಕ್ಟೋಬರ್ 21, 2019
25 °C
ಶ್ರವಣಬೆಳಗೊಳ ಹೋಬಳಿ ಮೇಲೆ ಕರುಣೆ ತೋರಿದ ವರುಣ, ರೈತರ ಮೊಗದಲ್ಲಿ ಮಂದಹಾಸ

ಹಾಸನ: ಉತ್ತಮ ಮಳೆ, ಹೆಚ್ಚಿನ ಇಳುವರಿ ನಿರೀಕ್ಷೆ

Published:
Updated:
Prajavani

ಶ್ರವಣಬೆಳಗೊಳ: ಹೋಬಳಿಯಾದ್ಯಂತ ಬಹು ವರ್ಷಗಳ ಬಳಿಕ ಉತ್ತಮ ಮಳೆಯಾಗಿರುವುದರಿಂದ ಈ ಭಾಗದ ರೈತರು ಸಂತಸಗೊಂಡಿದ್ದು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. 

ಸತತವಾಗಿ ಮಳೆ ಸುರಿದಿದ್ದು ಎಲ್ಲ ಬೆಳೆಗಳು ಉತ್ತಮವಾಗಿ ಬಂದಿವೆ. ಹೊಲ, ಗದ್ದೆ, ತೋಟಗಳಲ್ಲಿ ಓಡಾಡಲು ಸಂತಸವಾಗುತ್ತಿದ್ದು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದೇವೆ ಎಂದು ಚಲ್ಯಾ ಗ್ರಾಮದ ರೈತರಾದ ಹೊನ್ನೇಗೌಡ, ಕೃಷ್ಣಮೂರ್ತಿ, ಬಾಳಪ್ಪ, ಮೂರ್ತಿ ಹೇಳಿದರು.

ರೈತರಿಗೆ ಮುಂಗಾರು ಹಂಗಾಮಿನಿಂದ ಹಿಡಿದು ಹಿಂಗಾರಿನವರೆಗೂ ಅಗತ್ಯವಿರುವ ಬಿತ್ತನೆ ಬೀಜಗಳು, ಗೊಬ್ಬರ, ಔಷಧ ಮತ್ತು ಅಗತ್ಯ ಪರಿಕರಗಳನ್ನು ಕೃಷಿ ಇಲಾಖೆ ದಾಸ್ತಾನು ಮಾಡಿದ್ದು, ಹೋಬಳಿಯ ಎಲ್ಲಾ 7 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸಕ್ತ ರೈತರಿಗೆ ವಿತರಿಸಲಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಿ.ಎನ್‌.ಶಿಲ್ಪಾ ತಿಳಿಸಿದರು.

ಈಗಾಗಲೇ ರೈತರಿಗೆ ಕೃಷಿ ಇಲಾಖೆಯ ವತಿಯಿಂದ ಸಬ್ಸಿಡಿ ಬಿತ್ತನೆ ಬೀಜಗಳನ್ನು ಒದಗಿಸಿದ್ದು, ಮೆಕ್ಕೇಜೋಳ 12.02 ಟನ್‌ ವಿತರಿಸಿದ್ದು, 550 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.  10.98 ಟನ್‌ ರಾಗಿ  3900 ಹೆಕ್ಟೇರ್‌ನಲ್ಲಿ , 7 ಟನ್‌ ಅಪ್‌ಸೆಣಬು 250 ಹೆಕ್ಟೇರ್‌ನಲ್ಲಿ , 600 ಕೆ.ಜಿ.ಅಲಸಂದೆ 120 ಹೆಕ್ಟೇರ್‌ನಲ್ಲಿ , 100 ಕೆ.ಜಿ ಹೆಸರುಕಾಳು 10 ಹೆಕ್ಟೇರ್‌ನಲ್ಲಿ  32 ಕೆ.ಜಿ ಉದ್ದಿನಕಾಳು 5 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದರು.

ಪ್ರಾಯೋಗಿಕವಾಗಿ ಈ ಭಾಗದ ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ ಧನದಲ್ಲಿ 120 ಕೆ.ಜಿ. ನವಣೆಯನ್ನು ವಿತರಿಸಿದ್ದು, 12 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ನವಣೆ ಬೆಳೆಯಲು ಉತ್ತೇಜಿಸುವ ಕಾರಣದಿಂದ ಕೃಷಿ ಇಲಾಖೆ ಹೆಸರು ನೋಂದಾಯಿಸಿದ ರೈತರಿಗೆ  2 ಹಂತದಲ್ಲಿ ಬೆಳೆಯ ಪ್ರಗತಿಯನ್ನು ಪರಿಶೀಲಿಸಿ ಕಟಾವು ಸಮಯದಲ್ಲಿ ಎಕರೆ ಒಂದಕ್ಕೆ ₹4,000 ಸಾವಿರ ಪ್ರೋತ್ಸಾಹ ಧನವನ್ನು ರೈತರ ಖಾತೆಗೆ ನೇರವಾಗಿ ಹಣವನ್ನು ಸಂದಾಯ ಮಾಡಲಾಗುತ್ತದೆ ಎಂದು ಸಹಾಯಕ ಕೃಷಿ ಅಧಿಕಾರಿ ಸಿ.ದೊರೆಸ್ವಾಮಿ ಹೇಳಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)