ಹಾಸನ: ಆಲೂರು ತಾಲ್ಲೂಕಿನ ಮಣಿಪುರ ಗ್ರಾಮದ ತೋಟದ ಒಂಟಿ ಮನೆಗೆ ಮಂಗಳವಾರ ತಡರಾತ್ರಿ ನುಗ್ಗಿರುವ ದುಷ್ಕರ್ಮಿಗಳು, ₹25 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ₹2 ಲಕ್ಷಕ್ಕೂ ಅಧಿಕ ನಗದು ದೋಚಿ ಪರಾರಿಯಾಗಿದ್ದಾರೆ.

ನಿವೃತ್ತ ತಹಶೀಲ್ದಾರ್ ಅವರ ಕಾರು ಚಾಲಕರಾಗಿದ್ದ ಚಂದ್ರು ಹಾಗೂ ಪತ್ನಿ ವಾಸವಾಗಿರುವ ಮನೆಗೆ ಮೂವರು ದರೋಡೆಕೋರರು ಹಿಂದಿನ ಬಾಗಿಲು ಒಡೆದು ನುಗ್ಗಿದ್ದಾರೆ. ಲಾಂಗು ಹಾಗೂ ಮಚ್ಚು ತೋರಿಸಿ ದಂಪತಿಗೆ ಬೆದರಿಕೆ ಹಾಕಿರುವ ಆರೋಪಿಗಳು, ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ.

ಘಟನೆ ವೇಳೆ ಮನೆಯಲ್ಲಿ ಚಂದ್ರು ದಂಪತಿ ಮಾತ್ರ ಇದ್ದರು. ತೋಟದ ಮಧ್ಯೆ ಮನೆ ಇರುವುದರಿಂದ ಸಹಾಯಕ್ಕೆ ಯಾರೂ ಬರಲಾಗಲಿಲ್ಲ. ದರೋಡೆಕೋರರ ಚಲನವಲನಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ದೃಶ್ಯಾವಳಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

ಆಲೂರು ಠಾಣೆ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿವೈಎಸ್ಪಿ ಮಾಲತೇಶ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ‘ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ, ಶ್ವಾನದಳದ ಸುಳಿವು ಆಧರಿಸಿ ತನಿಖೆ ಚುರುಕುಗೊಳಿಸಲಾಗಿದೆ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಡರಾತ್ರಿ ನಡೆದ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಒಂಟಿ ಮನೆಗಳಲ್ಲಿ ವಾಸಿಸುವವರು ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.

ಹಾಸನ: ಗಂಡಸಿ ಹೋಬಳಿ ಮೂತಿಕೆರೆ ಗ್ರಾಮದಲ್ಲಿ ತಡರಾತ್ರಿ ಮನೆಯ ಹೊರಗೆ ಕಟ್ಟಿದ್ದ ಎರಡು ಸಿಂಧಿ ಹಸುಗಳನ್ನು ಕಳವು ಮಾಡಲಾಗಿದೆ.

ಗ್ರಾಮದ ಬೂದೇಶ ಅವರು ಸೋಮವಾರ ಗಂಡಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ‘ಭಾನುವಾರ ರಾತ್ರಿ ಹಾಲು ಕರೆದು ಹಸುಗಳನ್ನು ಮನೆಯ ಹೊರಗೆ ಕಟ್ಟಲಾಗಿತ್ತು. ಸೋಮವಾರ ಬೆಳಿಗ್ಗೆ ಹಸುಗಳು ಕಾಣಲಿಲ್ಲ. ಕಳವಾದ ಹಸುಗಳ ಅಂದಾಜು ಮೌಲ್ಯ ₹90 ಸಾವಿರ ಆಗಿದ್ದು, ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-36-861221602

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.