ಹಾಸನ: ನಗರದ ಹೊರವಲಯದ ಹನುಮಂತಪುರ ರಸ್ತೆಯ ಕೊಕ್ಕನಘಟ್ಟ ಗ್ರಾಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿಗೆ ಶುಭ ಕೋರಿ ಹಾಕಲಾಗಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದು, ಈ ಬಗ್ಗೆ ಗ್ರಾಮಸ್ಥರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಅಟ್ರಾಸಿಟಿ ಸಮಿತಿಯ ಸದಸ್ಯೆ ಶಿವಮ್ಮ ಮಾತನಾಡಿ, ಕೊಕ್ಕನಘಟ್ಟ ಗ್ರಾಮದಲ್ಲಿ ಭಾನುವಾರ ರಾತ್ರಿ ಕಿಡಿಗೇಡಿಗಳು ಬೀದಿ ದೀಪ ಆರಿಸಿ, ಚಾಕು ಅಥವಾ ಹರಿತವಾದ ಆಯುಧದಿಂದ ಅಂಬೇಡ್ಕರ್ ಜಯಂತಿ ಬ್ಯಾನರ್ ಹರಿದು ಹಾಕಿರುವುದು ಖಂಡನೀಯ. ಇದು ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ. ಕೆಲ ಕಿಡಿಗೇಡಿಗಳು ಇಂದಿಗೂ ಅವರನ್ನು ದ್ವೇಷಿಸುವ ಅಥವಾ ಅವರಿಗೆ ಪದೇ ಪದೇ ಅಪಮಾನ ಮಾಡುವ ಕೆಲಸ ಮಾಡುತ್ತಿದ್ದು, ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೊಕ್ಕನಘಟ್ಟ ಗ್ರಾಮದಲ್ಲಿ ನಡೆದಿರುವ ಅಹಿತಕರ ಘಟನೆ ಇದೇ ಮೊದಲ ಬಾರಿಗೆ ಅಲ್ಲ. ಮೂರು ವರ್ಷಗಳಿಂದ ಇದೇ ರೀತಿಯ ದುಷ್ಕೃತ್ಯ ಎಸಗುತ್ತಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಮದಲ್ಲಿ ಅಶಾಂತಿ ವಾತಾವರಣ ಸೃಷ್ಟಿ ಆಗಬಾರದು ಎಂಬ ದೃಷ್ಟಿಯಿಂದ ಎರಡು ವರ್ಷಗಳಿಂದ ಮಾತುಕತೆ ಮಾಡಿ, ಶಾಂತಿ ಕಾಪಾಡಿಕೊಂಡು ಬಂದಿದ್ದೇವೆ. ಆದರೆ ಈ ಬಾರಿ ಅಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಬೇಕು. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮಸ್ಥರಾದ ಕುಮಾರಿ, ಸ್ವಾಮಿ, ಅರುಣ್, ಸಾಗರ್, ಗಿರೀಶ್, ರವಿ, ಪ್ರಮೋದ್, ಸ್ವಾಮಿ, ದೇವರಾಜ್, ಭಾರತ್, ಗೌತಮ್, ಸಚಿನ್, ಕಿರಣ್, ಶ್ರೀನಿವಾಸ್, ಸಾಗರ್, ಪಾಪಣ್ಣ, ಸುನೀಲ್ ಆನಂದ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-36-1351579633

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.