ಹಾಸನ: ಬುದ್ಧ, ಜ್ಯೋತಿ ಬಾ ಫುಲೆ ಮತ್ತು ಸಂತ ಕಬೀರರ ವಿಚಾರಗಳಿಂದ ಹೆಚ್ಚು ಪ್ರಭಾವಿತರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಜಾತಿ ವಿನಾಶಗೊಳಿಸುವುದೇ ಅಂತಿಮ ಗುರಿಯಾಗಿತ್ತು ಎಂದು ಲೇಖಕಿ ಕೆ.ಎಸ್. ರವಿಕುಮಾರ್ ಹೇಳಿದರು.

ಡಾ.ಬಿ.ಆರ್ ಅಂಬೇಡ್ಕರ್ 135ನೇ ಜಯಂತಿ ಅಂಗವಾಗಿ ಡಿಎಚ್ಎಸ್, ಎಸ್ಎಫ್ಐ, ಡಿವೈಎಫ್ಐ, ಬಿಜಿವಿಎಸ್, ಸಿಐಟಿಯು, ಜೆಎಂಎಸ್, ಕೆ.ಪಿಆರ್.ಎಸ್ ಸಂಘಟನೆಗಳ ವತಿಯಿಂದ ಮಂಗಳವಾರ ನಗರದ ಆರ್.ಸಿ ರಸ್ತೆಯ ಶ್ರಮ ಕಚೇರಿಯಲ್ಲಿ ಆಯೋಜಿಸಿದ್ದ ಅಂಬೇಡ್ಕರರ ‘ಜಾತಿ ವಿನಾಶ’ ಕೃತಿಯ ಸಾಮೂಹಿಕ ಓದು ಮತ್ತು ಸಮಕಾಲೀನ ವಿಶ್ಲೇಷಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿರುವ ಅನಾಗರಿಕ ಜಾತಿ ವ್ಯವಸ್ಥೆ ಬೇರೆ ಯಾವ ದೇಶದಲ್ಲೂ ಇಲ್ಲ. ಮಾನವ ಸಮಾಜದಲ್ಲಿ ದ್ವೇಶ, ಅಸೂಯೆ, ಶೋಷಣೆ ಮತ್ತು ಅಸಮಾನತೆ ಸೃಷ್ಟಿಸಿರುವ ಜಾತಿ ಪದ್ಧತಿ ಅತ್ಯಂತ ಅವೈಜ್ಞಾನಿಕವಾಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವತಃ ಇದರಿಂದ ಶೋಷಣೆ, ಅವಮಾನ ಅನುಭವಿಸಿ ಜಾತಿ ಅಸ್ಪೃಶ್ಯತೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿದರು ಎಂದರು.

ಕೆಪಿಆರ್ಎಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್ ಮಾತನಾಡಿ, ಅಸ್ಪೃಶ್ಯತೆ, ಜಾತಿ ತಾರತಮ್ಯಗಳ ವಿರುದ್ಧ ನಿರಂತರ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ಮಾತನಾಡಿ, ಅಂಬೇಡ್ಕರ್ ಅವರು ಜಾತಿ ವಿನಾಶ ಕೃತಿಯನ್ನು ರಚಿಸಿ 90 ವರ್ಷಗಳಾಗಿವೆ. ದೇಶಕ್ಕೆ ಉತ್ತಮ ಸಂವಿಧಾನವನ್ನು ರಚಿಸಿದ್ದಾರೆ. ಇಂದು ಜಾತೀಯತೆ ಆಳವಾಗಿ ಬೇರೂರುತ್ತ, ಅಸ್ಪೃಶ್ಯತೆ ಬೇರೆ ಬೇರೆ ಆಯಾಮಗಳಲ್ಲಿ ಸಮಾಜವನ್ನು ಆವರಿಸಿದೆ ಎಂದರು.

ಸಮಾಜವನ್ನು ವಿಭಜಿಸುವ ಅಮಾನವೀಯ ಮನುಸ್ಮೃತಿ ಆಡಳಿತ ಚಾಲ್ತಿಯಲ್ಲಿದ್ದು, ಸಂವಿಧಾನವನ್ನೇ ಅಪಮೌಲ್ಯಗೊಳಿಸಲಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಅಂಬೇಡ್ಕರ್ ಅವರ 'ಜಾತಿ ವಿನಾಶ' ಕೃತಿಯು ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿರುವ ಪುರೋಹಿತಶಾಹಿ, ಬಂಡವಾಳಶಾಹಿ ಮನುವಾದಿಗಳ ವಿರುದ್ಧದ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಪ್ರಬಲವಾದ ಜಾತಿವಿನಾಶದ ಚಳವಳಿಯನ್ನು ಕಟ್ಟಬೇಕಾಗಿದೆ ಎಂದರು.

ಅಂಬೇಡ್ಕರ್ ಅವರು ನಡೆಸಿದ ಮಹಾಡನ ಚೌಡಾರ್ ಕೆರೆ ಸತ್ಯಾಗ್ರಹಕ್ಕೆ ಮತ್ತು ಮನುಸ್ಮೃತಿ ದಹಿಸುವ ಹೋರಾಟಕ್ಕೆ ನೂರು ವರ್ಷಗಳಾಗುತ್ತಿದ್ದು, ಇದರ ಹಿನ್ನೆಲೆಯಲ್ಲಿ ಈ ಎರಡೂ ಮಹತ್ವದ ಹೋರಾಟಗಳ ಶತಮಾನೋತ್ಸವ ಕಾರ್ಯಕ್ರಮವನ್ನು ಇಡೀ ವರ್ಷ ನಡೆಸಬೇಕು ಎಂದು ಹೇಳಿದರು.

ದಲಿತ ಮುಖಂಡ ಕೃಷ್ಣದಾಸ್, ಮಾದಿಗ ದಂಡೋರ ಮುಖಂಡ ಟಿ.ಆರ್. ವಿಜಯ್ ಕುಮಾರ್ ಮಾತನಾಡಿ, ಅಂಬೇಡ್ಕರ್ ಅವರ ಜಾತಿ ವಿನಾಶ ಕೃತಿಯ ಓದು ಹಾಗೂ ಸಮಕಾಲೀನ ವಿಶ್ಲೇಷಣೆ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ. ಇದನ್ನು ಇನ್ನೂ ಹೆಚ್ಚು ಇಂದಿನ ತಲೆಮಾರಿನ ಯುವಜನರ ನಡುವೆ ವಿಸ್ತರಿಸಬೇಕು ಎಂದು ಅಭಿಪ್ರಾಯಪಟ್ಟರು.

ಡಿಎಚ್ಎಸ್ ಜಿಲ್ಲಾ ಸಂಚಾಲಕ ಎಂ.ಜಿ ಪೃಥ್ವಿ ಕಾರ್ಯಕ್ರಮ ನಿರ್ವಹಿಸಿದರು. ಅಂಬೇಡ್ಕರ್ ಅವರ ಜಾತಿ ವಿನಾಶ ಕೃತಿಯನ್ನು ಸಾಮೂಹಿಕವಾಗಿ ಸಂಜೆವರೆಗೆ ಸಂಪೂರ್ಣವಾಗಿ ಓದಿ, ಸಮಕಾಲೀನ ಸಂದರ್ಭಕ್ಕೆ ವಿಶ್ಲೇಷಣೆ ಮಾಡಲಾಯಿತು.

ಸಾಹಿತಿ ಹರೀಶ್ ಕಟ್ಟೆಬೆಳಗುಲಿ, ಸಿಐಟಿಯು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ, ಉಪನ್ಯಾಸಕ ರೋಹಿತ್ ಅಗಸರಹಳ್ಳಿ, ಅಹಮದ್ ಹಗರೆ, ಡಿವೈಎಫ್ಐ ಮುಖಂಡ ಶಶಿ ತಟ್ಟೆಕೆರೆ, ಎಸ್ಎಫ್ಐ ಜಿಲ್ಲಾ ಸಮಿತಿ ಕಾರ್ಯದರ್ಶಿ ರಮೇಶ್, ಬಿಜಿವಿಎಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ, ಜಗದೀಶ್ ಬಾಬು, ಮುನಿಸ್ವಾಮಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-36-1491110258

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.