ಹಾಸನ: ‘ಜಿಲ್ಲೆಯ ಅರಸೀಕೆರೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದಾದ ಅಗ್ನಿ ಅವಘಡದ ಸಂತ್ರಸ್ತ ಗ್ರಾಹಕರಿಗೆ ವಿಮೆ ಕಂಪನಿ ಹಾಗೂ ಅನಿಲ ಕಂಪನಿಗಳು ₹29 ಲಕ್ಷ ಪರಿಹಾರ ನೀಡಬೇಕು’ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.

ಗ್ರಾಹಕ ಚನ್ನಬಸಪ್ಪ ಅವರ ಮನೆಯಲ್ಲಿ 2023ರ ಅ. 6ರಂದು ಭಾರತ್ ಗ್ಯಾಸ್ ಏಜೆನ್ಸಿಯ ಸಿಲಿಂಡರ್ ಸ್ಫೋಟಿಸಿ ಅವರ ಪತ್ನಿಗೆ ಗಾಯವಾಗಿತ್ತು. ಸಹೋದರ ಎಸ್.ಸಿ.ರಾಮಣ್ಣ ಅವರ ಮನೆಗೂ ಬೆಂಕಿ ವ್ಯಾಪಿಸಿತ್ತು. 15 ಸಾವಿರ ತೆಂಗಿನಕಾಯಿಗಳು, 3 ಅಲ್ಮೇರಾ, ಟಿ.ವಿ., ರೆಫ್ರಿಜಿರೇಟರ್, ಪೀಠೋಪಕರಣ, ಪಾತ್ರೆ, 105 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ, ₹1 ಲಕ್ಷ ನಗದು ಬೆಂಕಿಗೆ ಆಹುತಿಯಾಗಿ, ಮನೆ ಗೋಡೆಗಳು ಬಿರುಕುಬಿಟ್ಟಿದ್ದವು.

‘ಗ್ಯಾಸ್ ಏಜೆನ್ಸಿ ಪೂರೈಸಿರುವ ಕಳಪೆ ಸಿಲಿಂಡರ್, ರೆಗ್ಯುಲೇಟರ್ ಮತ್ತು ಪೈಪ್ನಿಂದ ಅವಘಡ ಸಂಭವಿಸಿದೆ’ ಎಂದು ರಾಮಣ್ಣ ಅವರು ಬಾಣಾವಾರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ‘ಅವಘಡದಲ್ಲಿ ಅಂದಾಜು ₹29 ಲಕ್ಷ ನಷ್ಟವಾಗಿದೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ವರದಿ ನೀಡಿದ್ದರು.

ಸೇವಾ ನ್ಯೂನತೆಯಿಂದ ಆದ ಅವಘಡಕ್ಕೆ ಪರಿಹಾರ ನೀಡದ ಗ್ಯಾಸ್ ಏಜೆನ್ಸಿ, ವಿಮೆ ಕಂಪನಿ ಹಾಗೂ ಗ್ಯಾಸ್ ಕಂಪನಿಯಿಂದ ₹49,75,000 ಪರಿಹಾರ ಕೊಡಿಸುವಂತೆ ಕೋರಿ ರಾಮಣ್ಣ ಅವರು 2025 ರ ಮೇ 27 ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಚಂಚಲಾ ಸಿ.ಎಂ. ಹಾಗೂ ಸದಸ್ಯೆ ಅನುಪಮಾ ಆರ್. ಅವರನ್ನು ಒಳಗೊಂಡ ಪೀಠವು, ಎಸ್.ಬಿ.ಐ. ಜನರಲ್ ಇನ್ಶುರೆನ್ಸ್ ಕಂಪನಿಯು ₹2 ಲಕ್ಷ, ಮತ್ತು ಮೆ. ಮಂಗಳೂರು ಎಲ್.ಪಿ.ಜಿ. ಟೆರಿಟೋರಿಟಿ ಸಂಸ್ಥೆಯು ₹27 ಲಕ್ಷ ಪರಿಹಾರವನ್ನು 2023ರ ಅಕ್ಟೋಬರ್ 6 ರಿಂದ ಪೂರ್ವಾನ್ವಯ ಆಗುವಂತೆ ಶೇ 10ರ ಬಡ್ಡಿಯೊಂದಿಗೆ ನೀಡಬೇಕು’ ಎಂದು ಆದೇಶಿಸಿದೆ.

ಸೇವಾ ನ್ಯೂನತೆಗಾಗಿ ₹5 ಸಾವಿರ, ಮಾನಸಿಕ ಹಿಂಸೆಗಾಗಿ ₹5 ಸಾವಿರ, ಶುಲ್ಕ₹5 ಸಾವಿರ ಭರಿಸಬೇಕು. ತಪ್ಪಿದರೆ ಈ ಮೊತ್ತದ ಮೇಲೆ ಶೇ 10 ರ ಬಡ್ಡಿಯೊಂದಿಗೆ ಹಣ ಪಾವತಿಸಬೇಕು ಎಂದು ಏಪ್ರಿಲ್ 22ರಂದು ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.