ಹಾಸನ: ಬೇಲೂರಿನ ಗುರುಪ್ಪಗೌಡ ಬೀದಿಯ ಮನೆಗೆ ನುಗ್ಗಿ ನಗದು, ಚಿನ್ನಾಭರಣ ಸೇರಿ ₹5 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ.

ರಮೇಶ ಅವರು ಏಪ್ರಿಲ್ 19 ರಂದು ಕುಟುಂಬ ಸಮೇತರಾಗಿ ತಮ್ಮ ಅಕ್ಕನ ಮಗನ ಮದುವೆಗೆ ಕೆ.ಆರ್.ಪೇಟೆಗೆ ಹೋಗಿದ್ದರು. ಏ.23 ರಂದು ಮನೆಗೆ ಬಂದು ನೋಡಿದಾಗ, ಮನೆಯ ಪಕ್ಕದ ಕಬ್ಬಿಣದ ಗೇಟ್ಗೆ ಹಾಕಿದ್ದ ಬೀಗವನ್ನು ಒಡೆಯಲಾಗಿತ್ತು. ಗೇಟ್ ಮುಂದೆ ನಿಲ್ಲಿಸಿದ್ದ ಸ್ಕೂಟಿಯನ್ನು ಹಿಂದಕ್ಕೆ ನಿಲ್ಲಿಸಿ, ಮನೆಯ ಹಿಂಬಾಗಿಲಿಂದ ಮನೆಯ ಒಳಗೆ ನುಗ್ಗಿರುವ ಕಳ್ಳರು, ಬೀರುವಿನಲ್ಲಿಟ್ಟಿದ್ದ 12 ಗ್ರಾಂ ಚಿನ್ನಾಭರಣ, ₹2 ಲಕ್ಷ ನಗದು, ದೇವರ ಮನೆಯ ಡಬ್ಬಿಯಲ್ಲಿದ್ದ ₹1.50 ಲಕ್ಷ ನಗದು, 1 ಬೆಳ್ಳಿಯ ಉಂಗುರ, 1 ಬೆಳ್ಳಿಯ ಸರ, 4 ಬೆಳ್ಳಿ ಬಳೆಗಳು, 2 ಉಡುದಾರಗಳು ಹಾಗೂ ಮನೆಯಲ್ಲಿದ್ದ ಇತರೆ ದಾಖಲಾತಿಗಳನ್ನು ಕಳವು ಮಾಡಿದ್ದಾರೆ. ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-36-198539878

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.