ಹಾಸನ: ‘ವೈಶಾಖ ಹುಣ್ಣಿಮೆಯ ಅಂಗವಾಗಿ ಭಗವಾನ್ ಬುದ್ಧರ ಜಯಂತಿಯನ್ನು ನಗರದಲ್ಲಿ ಭಕ್ತಿ ಹಾಗೂ ಗೌರವದಿಂದ ಆಚರಿಸಲು ಸಿದ್ಧತೆಗಳು ಪೂರ್ಣಗೊಂಡಿವೆ’ ಎಂದು ಭಾರತೀಯ ಬೌದ್ಧ ಮಹಾಸಭೆಯ ಮುಖಂಡ ಬಸವರಾಜು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾನವಕುಲಕ್ಕೆ ಶಾಂತಿ, ಸಮಾನತೆ, ಕರುಣೆ ಮತ್ತು ಮೈತ್ರಿಯ ಸಂದೇಶ ನೀಡಿದ ಬುದ್ಧರ ಜೀವನದ ಪ್ರಮುಖ ಘಟನಗಳಾದ ಜನನ, ಜ್ಞಾನೋದಯ ಹಾಗೂ ಮಹಾಪರಿನಿಬ್ಬಾಣ ಎಲ್ಲವೂ ವೈಶಾಖ ಹುಣ್ಣಿಮೆಯಂದೇ ಸಂಭವಿಸಿರುವುದರಿಂದ, ಈ ದಿನವನ್ನು ವಿಶ್ವದಾದ್ಯಂತ ಬೌದ್ಧರು ಪವಿತ್ರ ದಿನವಾಗಿ ಆಚರಿಸುತ್ತಾರೆ’ ಎಂದರು.

‘ಡಾ.ಬಿ.ಆರ್.ಅಂಬೇಡ್ಕರ್ ಅವರು 1935ರಲ್ಲಿ ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ ಎಂದು ಘೋಷಣೆ ಮಾಡಿದ ನಂತರ ವಿವಿಧ ಧರ್ಮಗಳನ್ನು ಅಧ್ಯಯನ ಮಾಡಿ, 1956ರಂದು ನಾಗಪುರದಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಬುದ್ಧ ಮತ್ತು ಅವರ ಧಮ್ಮ ಕೃತಿ ರಚಿಸಿದ್ದು, 1954ರಲ್ಲಿ ಭಾರತೀಯ ಬೌದ್ಧ ಮಹಾಸಭೆಯನ್ನು ಸ್ಥಾಪಿಸಿದರು’ ಎಂದರು.

‘ಹಾಸನ ಜಿಲ್ಲಾ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಮೇ 1ರಂದು ಬುದ್ಧ ಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ಕಲಾಭವನದವರೆಗೆ ಬುದ್ಧರ ರಥದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬುದ್ಧ ಜಯಂತಿ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದರು.

ಮಲ್ಲೇಶ್ ಎ.ಟಿ., ಎನ್.ಬಿ. ವೀರಭದ್ರಯ್ಯ, ಜೆ. ರಂಗಪ್ಪ, ಕುಮಾರ್ ಗೌರವ್, ಕೆ.ಸಿ. ಶ್ರೀಧರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-36-1061898938

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.