ಹಾಸನ: ಮಕ್ಕಳ ಬುದ್ಧಿ ಕೌಶಲ ಮತ್ತು ಸಮತೋಲನದ ಮನಸ್ಥಿತಿ ಬದಲಾವಣೆಗೆ ಚಿತ್ರಕಲಾ ಸ್ಪರ್ಧೆಯನ್ನು ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.

ಮಕ್ಕಳ ತಜ್ಞೆ ಡಾ. ದಿವ್ಯಶ್ರೀ ಮಾತನಾಡಿ, ಸಂಗೀತ, ಸಾಹಿತ್ಯ, ತರಗತಿಯ ಪಾಠದಷ್ಟೇ ಚಿತ್ರಕಲೆ ಮಕ್ಕಳ ನೆನಪಿನ ಶಕ್ತಿ ಹಾಗೂ ಬುದ್ಧಿ ಕೌಶಲದ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಹೇಳಿದರು.

ಡಾ. ವಿಶ್ವಾಸ್ ಮಾತನಾಡಿ, ಮಕ್ಕಳ ಆರೋಗ್ಯದಷ್ಟೇ ಮಕ್ಕಳ ತಂದೆ– ತಾಯಿಯ ಸ್ವಾಸ್ಥ್ಯವೂ ಪ್ರಮುಖ ಎಂದರು.

ಮೂಳೆ ತಜ್ಞ ಡಾ. ನಯೀಮ್ ಸಿದ್ದಿಕಿ ಮಾತನಾಡಿ, ಪ್ರತಿಯೊಬ್ಬರೂ ಮೂಳೆ ಸಾಂದ್ರತೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಚಿತ್ರಕಲಾ ಸ್ಪರ್ಧೆಯಲ್ಲಿ 130 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

ಮಕ್ಕಳ ಪೋಷಕರಿಗೂ ಉಚಿತ ಬಿಎಂಡಿ, ಇಸಿಜಿ ಪರೀಕ್ಷೆ ಹಾಗೂ ಮಧುಮೇಹ ತಪಾಸಣೆ ಮಡಲಾಯಿತು.

ಚಿತ್ರಕಲಾ ಶಿಕ್ಷಕಿ ಲತಾ, ಆಡಳಿತ ವಿಭಾಗದ ಅಧಿಕಾರಿಗಳಾದ ರಂಗಸ್ವಾಮಿ, ನವೀನ್, ದೊರೇಶ್, ಪುಷ್ಪಾ,ಲಿಖಿತಾ, ರಾಕೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-36-1653524798

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.