ಹಾಸನ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ತೆಂಗು, ಇದೀಗ ರೋಗ ಬಾಧೆಯಿಂದ ತತ್ತರಿಸಿದ್ದು, ಪ್ರಮುಖವಾಗಿ ಕಪ್ಪು ತಲೆ ಹುಳು ಬಾಧೆ ತೀವ್ರವಾಗಿದೆ. ಸುಮಾರು 10,500 ಹೆಕ್ಟೇರ್ನಲ್ಲಿ ಈ ಬಾಧೆ ಕಂಡು ಬಂದಿದ್ದು, 2 ಸಾವಿರ ಹೆಕ್ಟೇರ್ನಲ್ಲಿ ನಿಯಂತ್ರಣ ಸಾಧಿಸಲಾಗಿದೆ.

ಇನ್ನೂ 8 ಸಾವಿರ ಹೆಕ್ಟೇರ್ನಲ್ಲಿ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದ್ದು, ಇದಕ್ಕಾಗಿ ಪರೋಪಜೀವಿಗಳನ್ನು ಉತ್ಪಾದಿಸಿ, ತೋಟಗಳಲ್ಲಿ ಬಿಡಲಾಗುತ್ತಿದೆ. ಆದರೆ, ಪರೋಪಜೀವಿಗಳ ಉತ್ಪಾದನೆಗೆ ಹೆಚ್ಚಿನ ಅನುದಾನದ ಅಗತ್ಯವಾಗಿದೆ.

ಕಪ್ಪು ತಲೆ ಹುಳು ನಿಯಂತ್ರಣಕ್ಕಾಗಿ ಚನ್ನರಾಯಪಟ್ಟಣ ಸೇರಿದಂತೆ ವಿವಿಧ ಕಡೆ ಪ್ರಯೋಗಾಲಯಗಳಲ್ಲಿ ಹುಳು ಉತ್ಪಾದಿಸಿ, ತೋಟಗಳಲ್ಲಿ ಬಿಡಲಾಗುತ್ತಿದೆ. ಆದರೆ, ಸದ್ಯದ ಸ್ಥಿತಿಯಲ್ಲಿ ಪರೋಪಜೀವಿಗಳ ಉತ್ಪಾದನೆ ಹೆಚ್ಚಿಸುವುದು ಅನಿವಾರ್ಯವಾಗಿದೆ.

ಕಾಂಡ ರಸ ಸೋರುವ ರೋಗ, ಗರಿ ನುಸಿ ರೋಗ, ಕಪ್ಪು ತಲೆ ಹುಳು ರೋಗಗಳು ಹೆಚ್ಚಿದ್ದು, ತೆಂಗು ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ಒಂದು ಮರದಲ್ಲಿ ನೂರು ತೆಂಗಿನ ಬದಲಿಗೆ 10 ತೆಂಗಿನ ಕಾಯಿ ಇದೆ. ಹೊಂಬಾಳೆ ಬಿಡುವ ಸಂದರ್ಭದಲ್ಲಿಯೇ ಉದುರಿ ಹೋಗುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚಾಗುತ್ತಿದೆ.

ಜಿಲ್ಲೆಯ 8 ತಾಲ್ಲೂಕುಗಳ ವ್ಯಾಪ್ತಿಯ ಸುಮಾರು 1,18,792 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದ್ದು, ಮಳೆ ಕೊರತೆ, ಅತಿವೃಷ್ಟಿಯಿಂದ ಮರದಲ್ಲಿ ರೋಗಲಕ್ಷಣಗಳು ಕಾಣಿಸುತ್ತಿವೆ. ರೋಗ ಉಲ್ಬಣವಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಸಂಭವಿಸುವ ಸಾಧ್ಯತೆಗಳಿವೆ.

ಇದೀಗ ಕೊಬ್ಬರಿಗೆ ಉತ್ತಮ ಧಾರಣೆ ಬರುತ್ತಿದ್ದು, ಬರುವ ದಿನಗಳಲ್ಲಿ ಹೆಚ್ಚಿನ ಲಾಭ ಪಡೆಯಬೇಕು ಎನ್ನುವ ಇರಾದೆಯಲ್ಲಿದ್ದ ತೆಂಗು ಬೆಳೆಗಾರರು, ರೋಗದಿಂದ ಕಂಗೆಟ್ಟಿದ್ದಾರೆ. ತೆಂಗು ಬೆಳೆಗಾರರ ಹಿತರಕ್ಷಣೆಗೆ ಸರ್ಕಾರ ಮುಂದಾಗಬೇಕು. ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎನ್ನುವ ಬೇಡಿಕೆ ಬೆಳೆಗಾರರದ್ದಾಗಿದೆ.

3 ವರ್ಷಗಳಿಂದ ಹೆಚ್ಚುತ್ತಿರುವ ರೋಗ

ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ರೋಗ ಉಲ್ಬಣಿಸುತ್ತಲೇ ಸಾಗಿದೆ. ಹಲವಾರು ಕ್ರಮ ಕೈಗೊಂಡರೂ, ರೋಗ ನಿಯಂತ್ರಣ ಸಾಧ್ಯವಾಗುತ್ತಿಲ್ಲ.

ಕಾಂಡ ಸೋರುವ ರೋಗ, ಅಣಬೆ ರೋಗ ಹಾಗೂ ಕಪ್ಪು ತಲೆ ಹುಳು, ರುಗೋಸ್ ಬಿಳಿನೊಣ ಕೀಟಗಳು ಹೆಚ್ಚಾಗಿ ಕಂಡು ಬಂದಿವೆ. ಇದಕ್ಕೆ ತೋಟಗಾರಿಕೆ ಇಲಾಖೆಯಿಂದ ಔಷಧಿ ವಿತರಿಸಲಾಗುತ್ತಿದೆ. ಜೊತೆಗೆ ಇಲಾಖೆಯಿಂದ ರೈತರಲ್ಲಿ ಜಾಗೃತಿ ಮೂಡಿಸಲು ತೆಂಗು ಕಾಯಕಲ್ಪ ರಥ ಯಾತ್ರೆ ನಡೆಸಲಾಗಿದೆ. ತೆಂಗು ಬೆಳೆಯನ್ನು ಹೆಚ್ಚಾಗಿ ಬಾಧಿಸುವ ಕಪ್ಪು ತಲೆ ಹುಳು ಹಾಗೂ ರೋಗಗಳು ನಿಯಂತ್ರಣಕ್ಕೆ ಪರೋಪಜೀವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಿ, ಜಿಲ್ಲೆಯ ರೈತರಿಗೆ ಉಚಿತವಾಗಿ ವಿತರಿಸಲಾಗುತ್ತಿದ್ದು, ಅರಸೀಕೆರೆ ಮತ್ತು ಹೊಳೆನರಸೀಪುರ ಪ್ರಯೋಗಾಲಯಗಳ ಉನ್ನತೀಕರಣಕ್ಕೆ ₹ 3 ಕೋಟಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

ಹುಳು ಉತ್ಪಾದನೆಗೆ ಲ್ಯಾಬ್ ತೆರೆಯಲು ಹೆಚ್ಚುವರಿ ಅನುದಾನ ಕೋರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ

–ಯೋಗೇಶ್,ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

ಕೊಬ್ಬರಿ, ತೆಂಗಿಗೆ ಬೆಲೆ ಇದ್ದರೂ ರೈತರಿಗೆ ಪ್ರಯೋಜನ ಸಿಗದಾಗಿದೆ. ಬೆಳೆ ಉಳಿಸುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಮಸ್ಯೆ ಆಲಿಸಬೇಕು

–ಕೆ.ಎಂ. ಶಿವಲಿಂಗೇಗೌಡ, ಶಾಸಕ

–1.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದ್ದು, ವಿವಿಧ ರೋಗ ಕಾಣಿಸಿಕೊಂಡಿದೆ. ಕೇಂದ್ರ ಸರ್ಕಾರ ತೆಂಗು ಬೆಳೆಯನ್ನು ಸಸ್ಯ ಸಂರಕ್ಷಣಾ ಯೋಜನೆಗೆ ಸೇರ್ಪಡೆ ಮಾಡಬೇಕು

ಶ್ರೇಯಸ್ ಪಟೇಲ್, ಸಂಸದ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-36-122803175

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.