ಹಾಸನ: ಗುತ್ತಿಗೆ ಕಾರ್ಮಿಕರ ಮೇಲಿನ ದಾಳಿಯನ್ನು ಖಂಡಿಸಿ ಹಾಗೂ ಅವರ ಹೋರಾಟಕ್ಕೆ ಸೌಹಾರ್ದ ಬೆಂಬಲ ಸೂಚಿಸಿ ಸಿಐಟಿಯು ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮುಖಂಡರು ಮಾತನಾಡಿ, ‘ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ವಿಶೇಷವಾಗಿ ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ್ ಸೇರಿದಂತೆ ವಿವಿಧೆಡೆ (ಎನ್ಸಿಆರ್) ಕಾರ್ಮಿಕರ ಹೋರಾಟಗಳ ದಮನವನ್ನು ಸಿಐಟಿಯು ಖಂಡಿಸಿದೆ. ಇದು ಕೇವಲ ಕೈಗಾರಿಕಾ ವಿವಾದವಲ್ಲ. ನೇರ ವರ್ಗ ಸಂಘರ್ಷವೆಂದು ಪರಿಗಣಿಸಿದೆ. ಕಾರ್ಮಿಕರ ಹಕ್ಕುಗಳನ್ನು ಕುಗ್ಗಿಸಲು ಸರ್ಕಾರದ ಇತರೆ ಮೂಲವನ್ನು ಬಳಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಏಪ್ರಿಲ್ 9ರಂದು ನೋಯ್ಡಾದಲ್ಲಿ ಆರಂಭವಾದ ಈ ಹೋರಾಟವು ಈಗ ಸಾವಿರಾರು ಕಾರ್ಮಿಕರನ್ನು ಒಳಗೊಂಡಂತೆ ವಿವಿಧ ಕೈಗಾರಿಕಾ ಪ್ರದೇಶಗಳಿಗೆ ವಿಸ್ತರಿಸಿದ್ದು, ದೇಶವ್ಯಾಪಿ ಚಳವಳಿಯ ರೂಪ ಪಡೆದುಕೊಂಡಿದೆ. ಕಡಿಮೆ ವೇತನ, ಅಮಾನವೀಯ ಕೆಲಸದ ಪರಿಸ್ಥಿತಿ, ಕಾರ್ಮಿಕ ವಿರೋಧಿ ನೀತಿಗಳು ಮತ್ತು ಒಪ್ಪಂದ ಕಾರ್ಮಿಕ ವ್ಯವಸ್ಥೆಯ ವಿರುದ್ಧ ಕಾರ್ಮಿಕರು ಏಕೀಕೃತ ಹೋರಾಟ ನಡೆಸುತ್ತಿದ್ದಾರೆ’ ಎಂದರು.

‘ಕಾರ್ಮಿಕರು ತಿಂಗಳಿಗೆ ಕನಿಷ್ಠ ₹26ಸಾವಿರ ವೇತನ, 8 ಗಂಟೆಗಳ ಕೆಲಸದ ದಿನ, ಡಬಲ್ ಓವರ್ಟೈಮ್, ಸುರಕ್ಷತಾ ಸೌಲಭ್ಯಗಳು ಹಾಗೂ ಗುತ್ತಿಗೆ ಕಾರ್ಮಿಕರಿಗೆ ಸಮಾನ ಹಕ್ಕುಗಳನ್ನು ನೀಡುವಂತೆ ಒತ್ತಾಯಿಸಿದ ಅವರು, ಬಂಧಿತ ಕಾರ್ಮಿಕರನ್ನು ಷರತ್ತಿಲ್ಲದೇ ಬಿಡುಗಡೆ ಮಾಡಬೇಕು. ಸುಳ್ಳು ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆಪಿಆರ್ಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ, ಖಜಾಂಚಿ ಅರವಿಂದ, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕರು ಪೃಥ್ವಿ, ಎಸ್ಎಫ್ಐ ಜಿಲ್ಲಾ ಸಮಿತಿ ಕಾರ್ಯದರ್ಶಿ ರಮೇಶ್, ಆಸ್ಪತ್ರೆ ನೌಕರರ ಸಂಘಟನೆಯ ಮಹದೇವ, ಜ್ಯೋತಿ, ವನಜಾಕ್ಷಿ, ಪದ್ಮಲತಾ, ಪದ್ಮ, ನಾಗರತ್ನಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-36-1529437519

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.