ಹಾಸನ: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವುಗಳ ಅಕ್ರಮ ಸಾಗಾಣಿಕೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗೋಹತ್ಯೆ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಗೋರಕ್ಷಾ ವಿಭಾಗವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಈ ವೇಳೆ ಮಾತನಾಡಿದ ವಿಎಚ್ಪಿ ಮುಖಂಡ ದೀಕ್ಷಿತ್, ಜಿಲ್ಲೆಯಲ್ಲಿ ಬೀಟ್ ಪೊಲೀಸರನ್ನು ಬಳಸಿಕೊಂಡು ಅಕ್ರಮ ಕಸಾಯಿಖಾನೆಗಳನ್ನು ಗುರುತಿಸಿ, ದಾಳಿ ನಡೆಸುವ ಮೂಲಕ ಶಾಶ್ವತವಾಗಿ ಮುಚ್ಚಬೇಕು. ಜಾನುವಾರು ಹತ್ಯೆ ನಡೆದ ಮನೆ, ಕಟ್ಟಡ, ಖಾಲಿ ಜಮೀನುಗಳನ್ನು ಜಪ್ತಿ ಮಾಡಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಬೇಕು ಎಂದು ಒತ್ತಾಯಿಸಿದರು.

ಆರೋಪಿಗಳಿಗೆ 7 ವರ್ಷ ಶಿಕ್ಷೆ ಹಾಗೂ ಜಾನುವಾರು ವಧೆ ಅಥವಾ ವಧೆ ಪ್ರಯತ್ನಕ್ಕೆ ಪ್ರತಿಯೊಂದು ಜಾನುವಾರಿಗೆ ₹1 ಲಕ್ಷ ದಂಡ ವಿಧಿಸಬೇಕು. ಅನಧಿಕೃತ ಸ್ಥಳಗಳಲ್ಲಿ ಕಟ್ಟಿ ಹಾಕಿದ ಜಾನುವಾರುಗಳನ್ನು ವಧೆಗೆ ತಯಾರಿ ಎಂದು ಪರಿಗಣಿಸಿ, ವಶಪಡಿಸಿಕೊಂಡು ಸರ್ಕಾರಿ ಗೋಶಾಲೆಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.

ಸಣ್ಣಪುಟ್ಟ ಚಿನ್ನ ಕಳ್ಳತನ ಮಾಡುವವರನ್ನು ಬಂಧಿಸಲು ಸಾಧ್ಯವಿರುವ ಪೊಲೀಸರಿಗೆ ದೊಡ್ಡ ಗಾತ್ರದ ಜಾನುವಾರುಗಳ ಕಳ್ಳತನ, ಅಕ್ರಮ ಕಸಾಯಿಖಾನೆಗಳಲ್ಲಿ ವಧೆ ತಡೆಯಲು ಸಾಧ್ಯವಿದೆ. ಅಕ್ರಮ ಕಸಾಯಿಖಾನೆ, ಜಾನುವಾರು ವಧೆ ಪ್ರಕರಣಗಳಲ್ಲಿ ಬೀಟ್ ಪೊಲೀಸರಿಗೆ ಮಾಹಿತಿ ಏಕೆ ಸಿಗಲಿಲ್ಲ ಎಂಬುದನ್ನು ಇಲಾಖಾ ತನಿಖೆ ನಡೆಸಿ ದೋಷಗಳನ್ನು ಸರಿಪಡಿಸಬೇಕು ಎಂದರು.

ಅಕ್ರಮ ಕಸಾಯಿಖಾನೆಗಳಲ್ಲಿ ಮಾಂಸ ಖರೀದಿಸುವವರನ್ನೂ ಅಪರಾಧಿ ಎಂದು ಪರಿಗಣಿಸಿ ಶಿಕ್ಷಿಸಬೇಕು. ಪ್ರತಿಯೊಂದು ಮಾಂಸದ ಮಳಿಗೆಗಳಲ್ಲಿ ಮಾರಾಟದ ಬಗ್ಗೆ ತನಿಖೆ ನಡೆಸಬೇಕು. ಪರ ರಾಜ್ಯಗಳಿಂದ ಮಾಂಸ ತಂದಿರುವುದಾಗಿ ಹೇಳಿದರೆ, ಎಫ್ಎಸ್ಎಸ್ಎಐ ನಿಯಮಾವಳಿ ಉಲ್ಲಂಘನೆಯಾಗಿದೆಯೇ ಎಂದು ಪರಿಶೀಲಿಸಿ ಮಾಂಸ ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಅಕ್ರಮ ಗೋ ಸಾಗಾಟ, ವಧೆ ಪ್ರಕರಣಗಳಲ್ಲಿ ಜಾಮೀನು ಪಡೆದಿರುವ ಆರೋಪಿಗಳನ್ನು ಕರೆಸಿ, ಎಚ್ಚರಿಕೆ ನೀಡಿ ನಿಗಾ ಇಡಬೇಕು

ಅಕ್ರಮ ಜಾನುವಾರು ಸಾಗಾಟ ತಡೆಯಲು ಠಾಣಾ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಮಾಡಿ 24 ಗಂಟೆ ಗಸ್ತು ಸ್ಕ್ವಾಡ್ ನಿಯೋಜಿಸಬೇಕು. ಕಾರುಗಳು, ಖಾಸಗಿ ವಾಹನಗಳು, ಹಾಲಿನ ಟ್ಯಾಂಕರ್, ಕ್ಲೋಸ್ಡ್ ಕಂಟೈನರ್ಗಳಲ್ಲಿ ಅಕ್ರಮ ಸಾಗಾಟ ನಡೆದಿರುವುದರಿಂದ ತೀವ್ರ ತಪಾಸಣೆ ನಡೆಸಬೇಕು ಎಂದು ಮನವಿ ಮಾಡಿದರು.

ಶರತ್, ವಿಕಾಸ್, ಮಂಜು, ಶಶಿ, ವಿಜಿ, ಜೀವನ್, ಅಪ್ಪು, ಧನು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-36-956553481

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.