ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಾಡಿಗಿಂತ ನಾಡಿನಲ್ಲಿಯೇ ಹೆಚ್ಚಾಗಿ ಬೀಡು ಬಿಟ್ಟಿರುವ ಆನೆಗಳಿಂದಾಗಿ ಕೃಷಿಕರು, ಕಾಫಿ ಬೆಳೆಗಾರರ ಸಂಕಷ್ಟ ಎದುರಿಸುವಂತಾಗಿದೆ.

ಜಿಲ್ಲೆಯಲ್ಲಿ ಈ ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದೆ. ಕಳೆದ ವರ್ಷ ಕಾಡಾನೆ–ಮಾನವ ಸಂಘರ್ಷದಲ್ಲಿ ಆರು ಮಂದಿ ಮೃತಪಟ್ಟಿದ್ದರು. ಈ ವರ್ಷ ಇದುವರೆಗೆ ಒಂದು ಸಾವು ಸಂಭವಿಸಿದೆ. ಇನ್ನು ಬೆಳೆ ಹಾನಿಯಂತೂ ಲೆಕ್ಕಕ್ಕೇ ಇಲ್ಲದಂತಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ 33 ಕಿ.ಮೀ. ಬ್ಯಾರಿಕೇಡ್ ಅಳವಡಿಸಲಾಗಿದ್ದು, ಅಗತ್ಯ ಪ್ರದೇಶಗಳಲ್ಲಿ ಮತ್ತಷ್ಟು ವಿಸ್ತರಣೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಕಾಡಾನೆ ಚಲನವಲನ ನಿಖರವಾಗಿ ಪತ್ತೆಹಚ್ಚಲು 165 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ರಾತ್ರಿ ಮತ್ತು ಹಗಲು ಕಾಡಾನೆಗಳ ಮೇಲೆ ನಿಗಾ ಇಡಲು ಥರ್ಮಲ್ ಡ್ರೋನ್ ವ್ಯವಸ್ಥೆಯೂ ಲಭ್ಯವಿದೆ.

ಕಾಡಾನೆ ಗುಂಪುಗಳನ್ನು ಗುರುತಿಸಿ, ಅವುಗಳ ಚಲನೆಯ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ. ಅಗತ್ಯ ಪ್ರದೇಶಗಳಲ್ಲಿ ಸೌರ ವಿದ್ಯುತ್ ಬೇಲಿ ಹಾಕಲಾಗಿದ್ದು, ಕೆಲವು ಸಂವೇದನಾಶೀಲ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಅದಾಗ್ಯೂ ಕಾಡಾನೆಗಳ ಹಾವಳಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಕೊಡಗು ಭಾಗದಿಂದ ಯಸಳೂರು ಹಾಗೂ ಅರಕಲಗೂಡು ಕಡೆಗೆ, ಚಿಕ್ಕಮಗಳೂರು ಜಿಲ್ಲೆಯಿಂದ ಜಿಲ್ಲೆಯ ಬೇಲೂರು ಭಾಗಕ್ಕೆ ಕಾಡಾನೆಗಳು ಪ್ರವೇಶಿಸುತ್ತಿವೆ. ಹೇಮಾವತಿ ನದಿಯನ್ನು ದಾಟಿ ಬರುವ ಆನೆಗಳ ಚಲನವಲನಗಳನ್ನೂ ಪತ್ತೆ ಹಚ್ಚಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

ಆನೆ ಕಾರಿಡಾರ್ಗೆ ಸ್ಪಂದಿಸದ ಸರ್ಕಾರಗಳು: ಕೊಡಗು ಹಾಗೂ ಹಾಸನ ಜಿಲ್ಲೆಯಲ್ಲಿರುವ ಆನೆಗಳಿಗಾಗಿ ಸಕಲೇಶಪುರ ತಾಲ್ಲೂಕಿನಲ್ಲಿ ಆನೆ ಕಾರಿಡಾರ್ ನಿರ್ಮಿಸಬೇಕೆಂಬ ಬೇಡಿಕೆಗೆ ದಶಕಗಳಾದರೂ ಕೇಂದ್ರ, ರಾಜ್ಯ ಸರ್ಕಾರಗಳು ಗಮನ ಹರಿಸಿಲ್ಲ ಎಂಬುದು ಇಲ್ಲಿನ ಜನರ ದೂರು.

ಸಮಸ್ಯೆ ನಿವಾರಣೆಗೆ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಭಾಗದ 8 ಗ್ರಾಮಗಳ 416 ರೈತರು, ಒಟ್ಟು 2261.21 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ. ರಕ್ಷಿತಾರಣ್ಯದ ಅಂಚಿನ ಸುಮಾರು 3,300 ಎಕರೆ ಹಿಡುವಳಿ ಖಾಸಗಿ ಪ್ರದೇಶ ಹಾಗೂ ಸುತ್ತಲಿನ 15 ಸಾವಿರ ಎಕರೆ ಡೀಮ್ಡ್ ಫಾರೆಸ್ಟ್ ಜಾಗವೂ ಸೇರಿದಂತೆ 20 ಸಾವಿರ ಎಕರೆ ಪ್ರದೇಶದಲ್ಲಿ ಅರಣ್ಯ ವಿಸ್ತರಿಸಬೇಕೆಂಬ ಸಲಹೆಗಳು ಮಲೆನಾಡಿನ ಜನರಿಂದ ಕೇಳಿ ಬರುತ್ತಿವೆ.

ಆದರೆ, ಖಾಸಗಿ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಒಪ್ಪಿಗೆ ದೊರೆಯದೇ 2014 ರಲ್ಲಿ ಆನೆ ಕಾರಿಡಾರ್ ಯೋಜನೆ ಕೈಬಿಡಲಾಗಿತ್ತು.

ಕಾಡಾನೆ ಸಮಸ್ಯೆ ಪರಿಶೀಲಿಸಲು ಮೇ ಅಂತ್ಯದೊಳಗೆ ಕೇಂದ್ರ ಅರಣ್ಯ ಇಲಾಖೆ ತಂಡ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕಿದೆ.
ಶ್ರೇಯಸ್ ಪಟೇಲ್, ಸಂಸದ

ಆನೆ ಕಾರ್ಯಪಡೆಗೆ 13 ಹೊಸ ವಾಹನ

ಆನೆಗಳ ಹಾವಳಿ ಹೆಚ್ಚಿರುವ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಮತ್ತು ಆನೆಗಳನ್ನು ಕಾಡಿಗೆ ಮರಳಿಸಲು ಜಿಲ್ಲಾ ಆನೆ ಕಾರ್ಯಪಡೆಗೆ 13 ಹೊಸಗಳು ಸೇರ್ಪಡೆಯಾಗಿವೆ.

1 ಸ್ಕಾರ್ಪಿಯೋ, 2 ಕ್ಯಾಂಪರ್ ಹಾಗೂ 10 ದ್ವಿಚಕ್ರ ವಾಹನಗಳನ್ನು ನೀಡಲಾಗಿದೆ. ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಇದು ಹೊಸ ಉಪಕ್ರಮವಾಗಿದೆ. ಈ ಎಲ್ಲ ವಾಹನಗಳಿಗೆ ವಾಕಿಟಾಕಿ ಮತ್ತು ಧ್ವನಿವರ್ಧಕ ಅಳವಡಿಸಲಾಗಿದ್ದು, ಜಿಲ್ಲಾ ಆನೆ ಕಾರ್ಯಪಡೆ ಸಿಬ್ಬಂದಿ ವಾಹನಗಳಲ್ಲಿ ಗಸ್ತು ಮಾಡುತ್ತಾ, ಆನೆಗಳು ತೋಟ ಅಥವಾ ವಸತಿ ಪ್ರದೇಶಗಳ ಬಳಿ ಬಂದಾಗ ಸ್ಥಳೀಯರಿಗೆ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡುತ್ತಾರೆ. ಈ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ಸಿಎಸ್.ಆರ್. ನಿಧಿಯಿಂದ ಅರಣ್ಯ ಇಲಾಖೆಗೆ ನೀಡಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಒಂದೆಡೆ ಪಶ್ಚಿಮ ಘಟ್ಟದ ತಮಿಳುನಾಡಿನಿಂದ ಮೈಸೂರಿನ ಮೂಲಕ ಆನೆಗಳು ಜಿಲ್ಲೆಯನ್ನು ಪ್ರವೇಶಿಸುತ್ತಿವೆ. ಇನ್ನೊಂದೆಡೆ ಕೇರಳ ಭಾಗದ ಆನೆಗಳು, ಕೊಡಗಿನ ಮೂಲಕ ಜಿಲ್ಲೆಗೆ ಬರುತ್ತಿವೆ. ಇತ್ತ ಭದ್ರಾ ಅಭಯಾರಣ್ಯದಲ್ಲಿರುವ ಆನೆಗಳೂ ಜಿಲ್ಲೆಯತ್ತ ಮುಖ ಮಾಡುತ್ತಿವೆ. ಕಾಡನಿಂದ ಹೊರಬಂದಿರುವ ಸುಮಾರು 200 ಕ್ಕೂ ಹೆಚ್ಚು ಆನೆಗಳು ಜಿಲ್ಲೆಯಲ್ಲಿ ಸುತ್ತಾಡುತ್ತಿವೆ ಎನ್ನುವ ಮಾಹಿತಿ ಸ್ಥಳೀಯರು ನೀಡುತ್ತಿದ್ದಾರೆ. ಜಿಲ್ಲೆಯ ಬೇಲೂರು ಭಾಗದಲ್ಲಿ 60–70 ಕಾಡಾನೆಗಳಿವೆ. ಆಲೂರು ಭಾಗದಲ್ಲಿ 10, ಪಶ್ಚಿಮ ಘಟ್ಟದ ಯಸಳೂರು, ಬಿಸ್ಲೆ ಘಾಟ್ ಪ್ರದೇಶಗಳಲ್ಲಿ 100ಕ್ಕೂ ಅಧಿಕ ಆನೆಗಳಿವೆ. ಬೇಲೂರು ಭಾಗದ ಆನೆಗಳು ಕೆಲವೊಮ್ಮೆ ಚಿಕ್ಕಮಗಳೂರು ಜಿಲ್ಲೆಗೆ ಹೋಗುತ್ತಿದ್ದು, ಮತ್ತೆ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಗೆ ಮರಳುತ್ತವೆ. ಯಸಳೂರು, ಬಿಸ್ಲೆ ಘಾಟ್ ಪ್ರದೇಶದ ಆನೆಗಳು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಚಾರ್ಮಾಡಿ, ಕೊಡಗು ಜಿಲ್ಲೆಗಳಲ್ಲಿ ಓಡಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.