ಹಾಸನ: ನಗರದ ಬೂವನಹಳ್ಳಿ, ಗೇಕರವಳ್ಳಿ, ಸಮುದ್ರವಳ್ಳಿ ಹಾಗೂ ಕೆಂಚಟ್ಟಹಳ್ಳಿ ವ್ಯಾಪ್ತಿಯಲ್ಲಿ ಹುಡಾ ನಿರ್ಮಾಣ ಮಾಡುತ್ತಿರುವ ಬಿಜಿಎಸ್ಕೆ ಬಡಾವಣೆಯಲ್ಲಿ ಜೂನ್ 18ರಂದು ನಿವೇಶನ ಹಂಚಿಕೆಗೆ ರೈತರು ಆಕ್ಷೇಪ ವ್ಯಕ್ತಪಡಿಸಿದರು.

ಬಡಾವಣೆಗೆ ಭೂಮಿ ನೀಡಿದ ಹಲವಾರು ರೈತರು ಸೋಮವಾರ ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ ಅವರನ್ನು ಭೇಟಿ ಮಾಡಿ, ಭೂಮಿ ನೀಡಿದ ನಮ್ಮೊಂದಿಗೆ ಯಾವುದೇ ಚರ್ಚೆ ಮಾಡಿಲ್ಲ. ಮೊದಲು ನಮಗೆ ನಿವೇಶನ ನೀಡದೇ ಸಾರ್ವಜನಿಕರಿಗೆ ಹಂಚಲು ದಿನಾಂಕ ಘೋಷಣೆ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.

ನಮ್ಮೊಂದಿಗೆ ಮಾತುಕತೆ ನಡೆಸದೇ, ಜಮೀನು ಕೊಟ್ಟವರಿಗೆ ಮೊದಲು ನಿವೇಶನ ಕೊಡದೇ ಜನರಿಗೆ ಕೊಡುವುದು ಸರಿಯಲ್ಲ. ನಮ್ಮ ಸಮಕ್ಷಮದಲ್ಲೇ ಮತ್ತೊಮ್ಮೆ ದಿನಾಂಕ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಇನ್ನೂ ಸುಮಾರು 80 ಎಕರೆ ಭೂಸ್ವಾಧೀನ ಆಗಿಲ್ಲ. ಮೂಲಸೌಕರ್ಯ ಕಾಮಗಾರಿಗಳು ಸಂಪೂರ್ಣ ಮುಗಿದಿಲ್ಲ. ಆರು ತಿಂಗಳು ತಡವಾದರೂ ಪರವಾಗಿಲ್ಲ. ಕೃಷ್ಣನಗರದಲ್ಲಿ ಈಗಲೂ ಅನೇಕ ಸಮಸ್ಯೆಗಳು ಬಗೆಹರಿದಿಲ್ಲ. ಈ ಬಡಾವಣೆಯನ್ನೂ ಹಾಗೆ ಮಾಡಬೇಡಿ ಎಂದು ಎಚ್ಚರಿಸಿದರು.

ಇನ್ನೂ ಕೆಲವರು ನಮಗೆ ಕಾರ್ನರ್ ಸೈಟ್ ಕೊಡಬೇಕು ಎಂದು ಆಗ್ರಹಿಸಿದರು. ಬಿಜಿಎಸ್ಕೆ ಬಡಾವಣೆಯಲ್ಲಿ ಮೂಲಸೌಕರ್ಯಗಳನ್ನು ಪೂರ್ಣಗೊಳಿಸಿದ ಬಳಿಕವೇ ನಿವೇಶನ ಹಂಚಿಕೆ ಮಾಡಬೇಕು. ಹಂಚಿಕೆ ತಡವಾದರೂ ಪರವಾಗಿಲ್ಲ, ಆದರೆ ಜನರು ಮತ್ತೆ ಸಮಸ್ಯೆ ಎದುರಿಸಬಾರದು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ಜೂನ್ 18ರಂದು ನಿವೇಶನ ಹಂಚಿಕೆ ನಡೆಯುವುದಿಲ್ಲ. ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವರು ಯಾವ ದಿನಾಂಕ ಕೊಡುತ್ತಾರೋ ಅಂದು ವಿತರಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ನಾವು ರೈತರನ್ನು ಕಡೆಗಣಿಸಿಲ್ಲ. ರೈತರಿಗೇ ಮೊದಲ ಆದ್ಯತೆ. ರೈತರ ಊರುಗಳಿಗೆ ಬಂದು ನಿಮ್ಮ ಸಮಸ್ಯೆಗಳನ್ನು ಆಲಿಸಿ, ಪರಸ್ಪರ ಚರ್ಚಿಸಿ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಜೂನ್ 2ರಂದು ಪ್ರತಿಯೊಂದು ಹಳ್ಳಿಗೂ ಬರುತ್ತೇವೆ. ಅಲ್ಲೇ ಚರ್ಚೆ ಮಾಡುತ್ತೇವೆ. ರೈತರನ್ನು ಕೇಳದೇ ಮುಂದುವರಿಯುವುದಿಲ್ಲ. ಈಗಾಗಲೇ ಬೂವನಹಳ್ಳಿ ಬಳಿ ಒಂದು ಸ್ಮಶಾನ ಮಾಡಿದ್ದೇವೆ. ಬೇಕಿದ್ದರೆ ಮತ್ತೊಂದು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಮೂಲ ಸೌಕರ್ಯಗಳನ್ನು ಹಂತ ಹಂತವಾಗಿ ಮಾಡುತ್ತೇವೆ. ರೈತರು ಕೇಳುತ್ತಿರುವುದು ಸರಿ ಇದೆ. ಕಂಪನಿಯವರು ಬೇಗ ಕೆಲಸ ಮಾಡಲಿ ಎಂದು ದಿನಾಂಕ ಘೋಷಣೆ ಮಾಡಿದ್ದೇವೆ. ದಿನಾಂಕದಲ್ಲಿ ವ್ಯತ್ಯಾಸ ಆಗಬಹುದು. ರೈತರಿಗೆ ಕಾರ್ನರ್ ಸೈಟ್ ನೀಡುವ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-36-653863671

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.