ಹಾಸನ: ನಗರದ ಸ್ವಾಮಿ ವಿವೇಕಾನಂದ ಆದರ್ಶ ಸಾಧನ ಕೇಂದ್ರ ಟ್ರಸ್ಟ್ ಹಾಗೂ ವೇದ ಭಾರತೀ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲೆಯ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ತಲುಪಿಸುವ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣೆ, ಆಪ್ತ ಸಲಹೆ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಸಂಯೋಜಕ ಹರಿಹರಪುರ ಶ್ರೀಧರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 28ರಂದು ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಹಾಗೂ ಮಾ. 29 ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಶಿಬಿರ ನಡೆಯಲಿದೆ ಎಂದರು.

ಯೋಗ ಗುರುಗಳಾದ ಉಮಾ ಮಹೇಶ್ವರ್ ಗುರೂಜಿ ಮಾತನಾಡಿ, ಒತ್ತಡದ ಜೀವನ ಶೈಲಿಯಲ್ಲಿ ಯೋಗ ಅಭ್ಯಾಸ ಹೆಚ್ಚು ಪ್ರಯೋಜನಕಾರಿ. ಮಧುಮೇಹ, ರಕ್ತದ ಒತ್ತಡ ಸೇರಿ ಅನೇಕ ಕಾಯಿಲೆಗಳಿಗೆ ಯೋಗ ಪರಿಣಾಮಕಾರಿಯಾಗಿದ್ದು, ನಗರದ ಸಾರ್ವಜನಿಕರು ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.

ಶಿಬಿರದಲ್ಲಿ ದೈಹಿಕ, ಮಾನಸಿಕ ಹಾಗೂ ಕೌಟುಂಬಿಕ ಆರೋಗ್ಯ ಸಮಸ್ಯೆಗಳಿಗೆ ಉಚಿತ ಆಪ್ತ ಸಮಾಲೋಚನೆ ಹಾಗೂ ಆರೋಗ್ಯ ಮಾರ್ಗದರ್ಶನ ನೀಡಲಾಗುವುದು ಎಂದರು.

ಆಯುರ್ವೇದ ಕಣ್ಣಿನ ಔಷಧಿ ಚಿಕಿತ್ಸೆ ಶಿಬಿರದ ಆಕರ್ಷಣೆಯಾಗಿದ್ದು, ದೃಷ್ಟಿದೋಷ, ತಲೆನೋವು, ಅರ್ಧ ತಲೆನೋವು, ಮೂಗು-ಗಂಟಲಿನ ಸಮಸ್ಯೆಗಳು, ಥೈರಾಯ್ಡ್ ತೊಂದರೆಗಳು, ಮಹಿಳೆಯರ ಮುಟ್ಟಿನ ಹೊಟ್ಟೆನೋವು ಹಾಗೂ ಗರ್ಭಕೋಶ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಚಿಕಿತ್ಸೆಗೆ ಪ್ರತಿ ವ್ಯಕ್ತಿಗೆ ₹50 ಶುಲ್ಕ ನಿಗದಿಪಡಿಸಲಾಗಿದೆ ಎಂದರು.

ಹೆಚ್ಚಿನ ಮಾಹಿತಿಗಾಗಿ ಸಂಯೋಜಕ ಶ್ರೀಧರ್ (ಮೊ. 7892940096, 9663572406) ಸಂಪರ್ಕಿಸಲು ಕೋರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-36-1554543924

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.