ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ವಳಗೇರಹಳ್ಳಿಯಲ್ಲಿ ಜೂಜಾಡುತ್ತಿದ್ದ 12 ಜನರನ್ನು ಬಂಧಿಸಿರುವ ಪೊಲೀಸರು, ₹47,450 ನಗದು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಸೆನ್ ಠಾಣೆಯ ಡಿವೈಎಸ್ಪಿ ಪರಮಶಿವಮೂರ್ತಿ ಅವರು ಡಿಎಆರ್ ವಾಹನ ಮತ್ತು ಸಿಬ್ಬಂದಿಯೊಂದಿಗೆ ಗ್ರಾಮದ ಚಿಕ್ಕಣ ಎಂಬುವವರಿಗೆ ಸೇರಿದ ತೆಂಗಿನ ತೋಟದಲ್ಲಿ ಜೂಜಾಡುತ್ತಿರುವವರ ಮೇಲೆ ದಾಳಿ ನಡೆಸಿದ್ದಾರೆ.

ದೇವರಾಜು, ಸುನೀಲ್ ಕುಮಾರ್, ಮೋಹನ್ಕುಮಾರ್, ಮಹೇಶ, ರಂಗಸ್ವಾಮಿ, ಮುರುಳಿ, ಬೆಟ್ಟೇಗೌಡ, ಚಿಕ್ಕೇಗೌಡ, ಪ್ರದೀಪ್, ಚರಣ್, ಜಯರಂಗಶೆಟ್ಟಿ, ಸುರೇಶ್ ಬಂಧಿಸಲಾಗಿದೆ. ನುಗ್ಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ: ಅರಸೀಕೆರೆಯ ಬಿ.ಎಚ್. ರಸ್ತೆಯಲ್ಲಿ ಮನೆಯ ಬೀಗ ಮುರಿದು ₹1.49 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ನಾಗಜ್ಯೋತಿ ಎಂಬುವವರು ಮೇ 26 ರಂದು ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದು, ಮೇ 27ರಂದು ಬೆಳಿಗ್ಗೆ ಬೆಂಗಳೂರಿನಿಂದ ತಿರುಪತಿಗೆ ಹೊರಟಿದ್ದರು. ಈ ವೇಳೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ಎಂಬುವವರು ಕರೆ ಮಾಡಿ, ಮನೆಯ ಬಾಗಿಲು ತೆರೆದಿರುವುದಾಗಿ ತಿಳಿಸಿದ್ದಾರೆ.

ದೇವರ ದರ್ಶನಕ್ಕೆ ಹೋಗದೇ ವಾಪಸ್ ಅರಸೀಕೆರೆಗೆ ಬಂದು ನೋಡಿದಾಗ, ಮನೆಯ ಪಕ್ಕದಲ್ಲಿರುವ ಬಾಗಿಲನ್ನು ಮುರಿದು ಒಳನುಗ್ಗಿರುವ ಕಳ್ಳರು 5 ಗ್ರಾಂ ಓಲೆ, 6 ಗ್ರಾಂ ಓಲೆ, 4 ಗ್ರಾಂ ಓಲೆ, 6 ಗ್ರಾಂ ವಜ್ರದ ಉಂಗುರ, 1 ಕೆ.ಜಿ. ಬೆಳ್ಳಿಯ ತಟ್ಟೆ, ನಾಲ್ಕು ಬೆಳ್ಳಿ ತಟ್ಟೆಗಳು, 250 ಗ್ರಾಂ ಬೆಳ್ಳಿಯ ತಟ್ಟೆ, 150 ಗ್ರಾಂ ಬೆಳ್ಳಿ ತಟ್ಟೆ, 2 ದೀಪದ ಕಂಬಗಳು, 1 ಕೆ.ಜಿಯ 2 ಚೊಂಬುಗಳು, ಹೂವಿನ ಬುಟ್ಟಿ ಸೇರಿದಂತೆ 21 ಗ್ರಾಂ ಚಿನ್ನಾಭರಣ, 3 ಕೆ.ಜಿ. 900 ಗ್ರಾಂ ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ. ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ: ನಗರದ ಕೆಐಎಡಿಬಿ ವೃತ್ತದ ಬಳಿ ಡಿವೈಡರ್ಗೆ ಬೈಕ್ ಡಿಕ್ಕಿ ಹೊಡೆದು, ಬೈಕ್ ಸವಾರ ಬಾಲಕ ಜಗನ್ ಬಿ.ಡಿ. ಮೃತಪಟ್ಟಿದ್ದಾನೆ.

ಮೇ 26 ರಂದು ಜಗನ್, ತನ್ನ ಸ್ನೇಹಿತರಾದ ಮನೀಶ್ ಹಾಗೂ ಸಿದ್ದಿಕ್ ಎಂಬುವವರನ್ನು ಸ್ಕೂಟರ್ನಲ್ಲಿ ಕೂಡಿಸಿಕೊಂಡು ಹೋಗುತ್ತಿದ್ದಾಗ, ನಿಯಂತ್ರಣ ತಪ್ಪಿ ರಸ್ತೆಯ ಮಧ್ಯಭಾಗದ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಜಗನ್ ತಲೆಗೆ ತೀವ್ರ ರಕ್ತಗಾಯಗಳಾಗಿದ್ದು, ಮನೀಶ್ ಮುಖ, ತಲೆಗೆ ಮತ್ತು ಇತರ ಭಾಗಗಳಿಗೆ ಮತ್ತು ಸಿದ್ದಿಕ್ಗೂ ಗಾಯಗಳಾಗಿದ್ದವು.

ಅಪಘಾತವನ್ನು ನೋಡಿದ ಅಭಿಷೇಕ್ ಎಂಬುವವರು ಆಂಬುಲೆನ್ಸ್ನಲ್ಲಿ ಗಾಯಾಳುಗಳನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಆಸ್ಪತ್ರೆಗೆ ಬಂದು ನೋಡಿದಾಗ ಜಗನ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಅಪ್ರಾಪ್ತ ಬಾಲಕರಿಗೆ ಸ್ಕೂಟರ್ ಕೊಟ್ಟ ಮಾಲೀಕರಾದ ಆಶಾ ಚಂದ್ರನಾಯಕ ಮತ್ತು ಸ್ಕೂಟರ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಜಗನ್ ತಂದೆ ದಿನೇಶ್ ದೂರು ನೀಡಿದ್ದಾರೆ.

ಹಾಸನ: ಚನ್ನರಾಯಪಟ್ಟಣ ಬಸ್ ನಿಲ್ದಾಣದಿಂದ ಅರಸೀಕೆರೆಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಬ್ಯಾಗ್ನಲ್ಲಿದ್ದ ₹3,93,630 ನಗದು ಕಳವು ಮಾಡಲಾಗಿದೆ.

ಅರಸೀಕೆರೆಯ ಕುಮಾರಸ್ವಾಮಿ ಎಂಬುವವರು ಜೇನುಕಲ್ ಆಯಿಲ್ಸ್ ಸಂಸ್ಥೆಯಲ್ಲಿ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಮೇ 26ರಂದು ಸಂಸ್ಥೆಯ ಸರಕು ಸರಬರಾಜು ಮಾಡಿದ್ದ ಹಣ ವಸೂಲಾತಿಗಾಗಿ ಚನ್ನರಾಯಪಟ್ಟಣಕ್ಕೆ ಹೋಗಿದ್ದರು.

ಚನ್ನರಾಯಪಟ್ಟಣದ 12 ಪ್ರಾವಿಜನ್ ಸ್ಟೋರ್ನಿಂದ ₹3,93,630 ಸಂಗ್ರಹಿಸಿದ್ದು, ಸಂಜೆ 7 ಗಂಟೆಯಲ್ಲಿ ಚನ್ನರಾಯಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಅರಸೀಕೆರೆಗೆ ಹೋಗುವ ಬಸ್ ಹತ್ತಿದ್ದರು. ಬ್ಯಾಗ್ ನೋಡಿಕೊಂಡಾಗ ಅದು ಹರಿದಿತ್ತು. ಬ್ಯಾಗಿನಲ್ಲಿಟ್ಟಿದ್ದ ನಗದು ಕಳವಾಗಿತ್ತು. ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-36-1994189390

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.