ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಕ್ಷೇತ್ರ- ಗೌಡರ ಕುಟುಂಬ ಕಣಕ್ಕಿಳಿಯಲ್ಲ: ಕುಮಾರಸ್ವಾಮಿ

ಒಂದೂವರೆ ತಿಂಗಳಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ಕುಮಾರಸ್ವಾಮಿ
Last Updated 14 ಫೆಬ್ರುವರಿ 2022, 14:11 IST
ಅಕ್ಷರ ಗಾತ್ರ

ಹಾಸನ: ‘ಒಂದೂವರೆ ತಿಂಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ ಮಾಡಲಾಗುವುದು. ಆಗ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನೂಘೋಷಿಸಲಾಗುವುದು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನವಿಧಾನಸಭೆ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ನಮ್ಮಕುಟುಂಬದವರು ಸ್ಪರ್ಧೆ ಮಾಡುತ್ತಾರೆ ಎಂಬುದು ಕೇವಲ ಊಹಾಪೋಹ ಎಂದು ಹೇಳುವ ಮೂಲಕ ಭವಾನಿ ರೇವಣ್ಣ ಸೇರಿದಂತೆ ದೇವೇಗೌಡರ ಕುಟುಂಬದವರೇ ಸ್ಪರ್ಧಿಸುತ್ತಾರೆ’ ಎಂಬ ವದಂತಿಗೆ ತೆರೆ ಎಳೆದರು.

‘ಈವರೆಗೂಹಾಸನ ಜಿಲ್ಲೆಯ ರಾಜಕೀಯದಲ್ಲಿ ಮೂಗು ತೂರಿಸಿಲ್ಲ. ಆದರೆ, ಈ ಬಾರಿ ಹಾಸನಕ್ಷೇತ್ರವನ್ನು ಸೂಕ್ಷ್ಮವಾಗಿ ತೆಗೆದುಕೊಳ್ಳುತ್ತೇನೆ. ಮುಖ್ಯಮಂತ್ರಿ ಆಗಿದ್ದ ವೇಳೆ ವೇಳೆಜಿಲ್ಲೆಗೆ ದೊಡ್ಡಮಟ್ಟದಲ್ಲಿ ಕೆಲಸ ಮಾಡಿದ್ದೇನೆ. ಹಾಸನ ವಿಧಾನಸಭಾ ಕ್ಷೇತ್ರದ ಬಗ್ಗೆಸಲಹೆ ನೀಡುತ್ತೇನೆ. ಈ ಕ್ಷೇತ್ರದಲ್ಲಿ ಅನೇಕ ನಿಷ್ಠಾವಂತ ಮುಖಂಡರಿದ್ದಾರೆ.ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನಮಾಡುತ್ತೇನೆ’ ಎಂದು ತಿಳಿಸಿದರು.‌

‘ಹಾಸನದಲ್ಲಿ ಯಾವ ರೀತಿಯ ವ್ಯವಸ್ಥೆ ಇದೆ ಎಂದು ಎಲ್ಲರಿಗೂ ತಿಳಿದಿದೆ.ಎಚ್.ಎಸ್.ಪ್ರಕಾಶ್ ಇದ್ದ ಕಾಲದಲ್ಲಿ ಈ ರೀತಿ ವ್ಯವಸ್ಥೆ ಇರಲಿಲ್ಲ. ಅದಲ್ಲವನ್ನೂಗಮನದಲ್ಲಿಟ್ಟುಕೊಂಡು ಕಾರ್ಯಕರ್ತರ ಜೊತೆ ಚರ್ಚಿಸಿ ಟಿಕೆಟ್ ನೀಡುತ್ತೇನೆ’ ಎಂದು
ಹೇಳಿದರು.

‘ಅರಕಲಗೂಡು ಕ್ಷೇತ್ರದಲ್ಲಿ ಕೆಲ ಮುಖಂಡರು ಶಾಸಕರ ನಡುವೆ ಹೊಂದಾಣಿಕೆ ಕೊರತೆವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಮೊದಲಿನಿಂದಲೂ ಜಿಲ್ಲೆಯ ರಾಜಕಾರಣ ಸಂಬಂಧನೇರವಾಗಿ ಪಾತ್ರ ವಹಿಸಿಲ್ಲ. ಬದಲಾಗಿ ಸಲಹೆ ಕೊಡುವೆ ಅಷ್ಟೇ’ ಎಂದುಸ್ಪಷ್ಟಪಡಿಸಿದರು.

‘ಜನರ ಭಾವನೆಗಳಿಗೆ ತಕ್ಕಂತೆ ತೀರ್ಮಾನ ಮಾಡಬೇಕಾಗುತ್ತದೆ. ಜಿಲ್ಲೆಯಅಭಿವೃದ್ಧಿಗೆ ಎಲ್ಲಾ ಸಹಕಾರ ಕೊಟ್ಟಿದ್ದೇನೆ. ಈ ಮಣ್ಣಿನಲ್ಲಿ ಹುಟ್ಟಿದ ಮಗನಾಗಿಅಭಿವೃದ್ಧಿಗೆ ನೆರವಾಗಿದ್ದೇನೆ’ ಎಂದರು.

‘ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಬಗ್ಗೆ ಇನ್ನೂ ಪ್ರವಾಸಮಾಡುತ್ತಿದ್ದಾರೆ. ಅವರ ಹಿತೈಷಿಗಳ ಅಭಿಪ್ರಾಯ ಪಡೆಯುತ್ತಿದ್ದಾರೆ. ಅಂತಿಮಅಭಿಪ್ರಾಯ ಏನು ಹೇಳ್ತಾರೆ ನೋಡೋಣ. ಅವರ ಜೊತೆ ಮಾತಾಡಿದ್ದು, ಪಕ್ಷಕ್ಕೆಸ್ವಾಗತ ಎಂದೂ ಹೇಳಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಸರ್ಕಾರದ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವೇ ಇಲ್ಲ. ನರೇಂದ್ರ ಮೋದಿಅವರು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ, ಎಲ್ಲವನ್ನೂ ನಿಲ್ಲಿಸಿದ್ದೇವೆ ಅಂತಾರೆ.ಆದರೆ, ನಡೆಯುತ್ತಿವುದೇ ಬೇರೆ. ಈ ವರ್ಷ ₹ 50 ಸಾವಿರ ಕೋಟಿಸಾಲಕ್ಕೆಅರ್ಜಿಹಾಕಿಕೊಂಡಿದಾರೆ. ರಾಜ್ಯದ ಪಾಲಿನ ಜಿಎಸ್‍ಟಿ ಹಣ ಕೊಡದೆ ಕೇಂದ್ರ ಸರ್ಕಾರ ಸಾಲ
ಮಾಡಿ ಎನ್ನುತ್ತಿದೆ. ರಾಜ್ಯ, ಕೇಂದ್ರದಲ್ಲಿ ಆರ್ಥಿಕ ಶಿಸ್ತು ಕಾಣುತ್ತಿಲ್ಲ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT