ಹಳೇಬೀಡು: ಉಪ ವಿಭಾಗವಾಗಿ ಹಳೇಬೀಡಿನ ಸೆಸ್ಕ್ ಶಾಖಾಧಿಕಾರಿ ಕಚೇರಿ ಮೇಲ್ದರ್ಜೆಗೆ ಪರಿವರ್ತನೆಯಾಗಿದ್ದರೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ. ಹಳೇಬೀಡು ಸೆಸ್ಕ್ ಕಚೇರಿ ಹೆಸರಿಗಷ್ಟೇ ಉಪ ವಿಭಾಗ ಆಗಿದ್ದು, ವಿದ್ಯುತ್ ಬಳಕೆದಾರರಿಗೆ ಉಪಯೋಗ ಆಗುತ್ತಿಲ್ಲ.

2026 ಏಪ್ರಿಲ್ 1 ರಿಂದಲೇ ಉಪ ವಿಭಾಗ ಕಚೇರಿಯ ಕಾರ್ಯಾರಂಭ ಆಗಬೇಕಾಗಿತ್ತು. ಮೇ ಮುಗಿಯುವ ಹಂತಕ್ಕೆ ಬಂದರೂ ಸಾರ್ವಜನಿಕರು ಹಾಗೂ ಗುತ್ತಿಗೆದಾರರು ಸೆಸ್ಕ್ ಉಪ ವಿಭಾಗ ಕೆಲಸಕ್ಕೆ ಬೇಲೂರಿಗೆ ಓಡಾಡುವುದು ಮುಂದುವರಿದಿದೆ.

ಉಪ ವಿಭಾಗ ಕಚೇರಿ ಆರಂಭಿಸುವ ಉದ್ದೇಶದಿಂದ ಸೆಸ್ಕ್ ಶಾಖಾಧಿಕಾರಿ ಕಚೇರಿ ಹಾಗೂ ಕಂದಾಯ ವಿಭಾಗವನ್ನು ಶಾಖಾಧಿಕಾರಿಗಳ ವಸತಿಗೃಹಕ್ಕೆ ಫೆಬ್ರುವರಿಯಲ್ಲಿ ಸ್ಥಳಾಂತರ ಮಾಡಲಾಯಿತು. ಬಣ್ಣ ಮಾಸಿದ್ದ ಶಾಖಾಧಿಕಾರಿ ಕಚೇರಿ ಹಾಗೂ ಕಂದಾಯ ವಿಭಾಗದ ಕಟ್ಟಡ ಸುಣ್ಣ ಬಣ್ಣ ಪಡೆಯಿತು. ಆದರೆ ಉಪ ವಿಭಾಗದ ಕೆಲಸ ಮಾತ್ರ ಆರಂಭವಾಗಿಲ್ಲ. ಉಪವಿಭಾಗ ಆರಂಭಿಸುವುದು ಇದೇ ರೀತಿ ತಡವಾದರೆ, ಮತ್ತೊಮ್ಮೆ ಕಟ್ಟಡದ ಬಣ್ಣ ಮಾಸುತ್ತದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಇಬ್ಬರು ಸಹಾಯಕ ಎಂಜಿನಿಯರ್, ವಿದ್ಯುತ್ ನಿರ್ವಹಣೆಯ ಸಹಾಯಕ ಎಂಜಿನಿಯರ್, ವರ್ಕ್ ಯೂನಿಟ್ ಎಂಜಿನಿಯರ್ ಹಾಗೂ ಕಚೇರಿ ಸಿಬ್ಬಂದಿಯನ್ನು ಹೊಸ ಉಪ ವಿಭಾಗಕ್ಕೆ ನಿಯೋಜಿಸಿಲ್ಲ.

ಹೊಸ ಉಪ ವಿಭಾಗಕ್ಕೆ ಹಳೇಬೀಡು, ಮಾದಿಹಳ್ಳಿ ಹೋಬಳಿಗಳು ಸೇರುತ್ತವೆ. ಎರಡೂ ಹೊಬಳಿಗಳಲ್ಲಿ ಅಂದಾಜು 12ಸಾವಿರ ಪಂಪ್ಸೆಟ್ಗಳಿವೆ. 8 ಸಾವಿರ ಪರಿವರ್ತಕಗಳಿವೆ. ಪಂಪ್ಸೆಟ್ ಸೇರಿದಂತೆ 15 ಸಾವಿರ ತ್ರಿಫೇಸ್ ವಿದ್ಯುತ್ ಬಳಕೆದಾರರಿದ್ದಾರೆ. ಗೃಹ, ವಾಣಿಜ್ಯ ಬಳಕೆಗಾಗಿ ಹೊಸ ಸಂಪರ್ಕ ಪಡೆಯುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಬೇಲೂರು ಉಪ ವಿಭಾಗ ಕಚೇರಿಗೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಹಳೇಬೀಡು, ಮಾದಿಹಳ್ಳಿ ಹೋಬಳಿಗಳಿಗಾಗಿ ಇಂಧನ ಇಲಾಖೆ ಪ್ರತ್ಯೇಕ ಉಪ ವಿಭಾಗ ಮಂಜೂರು ಮಾಡಿದೆ. ಆದರೆ ಉಪ ವಿಭಾಗ ಕಾರ್ಯಾರಂಭ ತೀರಾ ವಿಳಂಬವಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ. ನಿಂಗಪ್ಪ ಹೇಳಿದರು.

ಹಳೇಬೀಡು ಸೆಸ್ಕ್ ಉಪ ವಿಭಾಗ ಬಹುತೇಕ ಆರಂಭವಾಗಿದೆ. ಉನ್ನತ ಅಧಿಕಾರಿಗಳು ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಸೆಸ್ಕ್ನ ಬೇಲೂರು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಸವರಾಜು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-36-1901175705

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.