ಗುರುವಾರ , ನವೆಂಬರ್ 21, 2019
26 °C
ಹನ್ನೊಂದು ದಿನ ಅಹೋರಾತ್ರಿ ದರಶುನ

ಹಾಸನ: ದರ್ಶನ ಕರುಣಿಸಿದ ಹಾಸನಾಂಬೆ

Published:
Updated:
Prajavani

ಹಾಸನ: ವರ್ಷಕ್ಕೆ ಒಂದು ಬಾರಿಯಷ್ಟೇ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ಅಧಿದೇವತೆ ಹಾಸನಾಂಬೆಯ ಗರ್ಭಗುಡಿ ಬಾಗಿಲನ್ನು ಗುರುವಾರ ಶಾಸ್ತ್ರೋಕ್ತವಾಗಿ ತೆರೆಯಲಾಯಿತು.

ಸಂಪ್ರದಾಯದಂತೆ ಅಶ್ವಯುಜ ಮಾಸದ ಪೂರ್ಣಿಮೆಯ ನಂತರದ ಮೊದಲ ಗುರುವಾರ ಮಧ್ಯಾಹ್ನ 12.35ಕ್ಕೆ ತಳವಾರ ವಂಶದ ನರಸಿಂಹ ರಾಜ ಅರಸ್‌ ಬಾಳೆ ಕಂದು ಕಡಿದ ಕೂಡಲೇ ಭಕ್ತರ ಜಯಘೋಷ ಮೊಳಗಿತು.

ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಜಿಲ್ಲಾಧಿಕಾರಿ ಆರ್‌.ಗಿರೀಶ್‌, ತಹಶೀಲ್ದಾರ್‌ ಮೇಘನಾ, ದೇವಸ್ಥಾನದ ಆಡಳಿತಾಧಿಕಾರಿ ಎಚ್‌.ಎಲ್.ನಾಗರಾಜ್‌ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಬಾಗಿಲು ತೆರೆಯಲಾಯಿತು. ಹಾಸನಾಂಬ, ಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ದೇವಾಲಯವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು.

ಮೊದಲ ದಿನ ದೇವಿಯ ಗರ್ಭಗುಡಿ ಸ್ವಚ್ಛತೆ, ಸುಣ್ಣ ಬಳಿಯುವುದು ಹಾಗೂ ಪೂಜಾ ಕಾರ್ಯ ನಡೆಯಿತು. ಬಂದಿದ್ದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿ ಬಾಗಿಲು ಮುಚ್ಚಿದರು.

ಅ.28ರ ವರೆಗೆ ಅಹೋರಾತ್ರಿ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 29ರ ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳ ಅನ್ವಯ ಪೂಜೆ ನೆರವೇರಿಸಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ.

ಸಚಿವ ಮಾಧುಸ್ವಾಮಿ ಮಾತನಾಡಿ, ’ದೇವಿಯ ಆಶೀರ್ವಾದದಿಂದ ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿದ್ದು, ಇದೇ ವಾತಾವರಣ ಮುಂದುವರಿಯಲಿ ಎಂದು ಬೇಡಿಕೊಂಡಿದ್ದೇನೆ’ ಎಂದರು. 

ಇದನ್ನೂ ಓದಿ... ಹಾಸನಾಂಬೆ ದರ್ಶನೋತ್ಸವ: ಹನ್ನೊಂದು ದಿನ ಅಹೋರಾತ್ರಿ ದರ್ಶನ

ಪ್ರತಿಕ್ರಿಯಿಸಿ (+)