ಬುಧವಾರ, ಸೆಪ್ಟೆಂಬರ್ 18, 2019
25 °C

ನಮ್ಮ ಕಾರ್ಖಾನೆಯಲ್ಲಿ ಬೆಳೆದು ಮೇವು ಸಿಕ್ಕಲ್ಲಿ ಹೋಗುತ್ತಾರೆ: ಎಚ್‌.ಡಿ.ರೇವಣ್ಣ

Published:
Updated:

ಬೇಲೂರು (ಹಾಸನ): ‘ಜೆಡಿಎಸ್‌ ಪಕ್ಷವು ಮುಖಂಡರನ್ನು ತಯಾರಿಸುವ ಕಾರ್ಖಾನೆಯಾಗಿದೆ. ಅವರು ಬೆಳೆದ ಮೇಲೆ ಮೇವು ಎಲ್ಲಿ ಸಿಗುತ್ತದೆಯೋ ಅಲ್ಲಿಗೆ ಹೋಗುತ್ತಾರೆ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಕುಟುಕಿದರು.

ಪಟ್ಟಣದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದಲ್ಲಿ ತಿಂದುಂಡು ಬೆಳೆದ ಶಾಸಕರನ್ನು ಸೆಳೆದು, ಬಿಜೆಪಿ ನಾಯಕರು ಅಧಿಕಾರ ಗಿಟ್ಟಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಬೀಳಿಸಲು ಸಾವಿರಾರು ಕೋಟಿ ಹಣ ವೆಚ್ಚ ಮಾಡಿದ್ದಾರೆ’ ಎಂದು ಕಿಡಿಕಾರಿದರು.

ಇದನ್ನೂ ಓದಿ... ಹುಣಸೂರಿನಲ್ಲಿ ಜೆಡಿಎಸ್‌ ಗೆಲ್ಲದು: ಜಿ.ಟಿ.ದೇವೇಗೌಡ

₹ 50 ಕೋಟಿ ಆಮಿಷ– ಆರೋಪ: ಬಿಜೆಪಿ ಸೇರುವಂತೆ ಆ ಪಕ್ಷದ ಮುಖಂಡರು ತಮಗೆ ₹ 50 ಕೋಟಿ ಹಾಗೂ ಶಾಸಕ ಎಚ್‌.ಡಿ. ರೇವಣ್ಣ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಆಮಿಷವೊಡ್ಡಿದ್ದರು. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಅವರಿಗೂ ಅವರ ಪತ್ನಿ ಚಂಚಲಾ ಮೂಲಕ ಆಫರ್‌ ನೀಡಿದ್ದರು ಎಂದು ಶಾಸಕ ಕೆ.ಎಸ್‌. ಲಿಂಗೇಶ್ ಆರೋಪಿಸಿದರು.

ಇದನ್ನೂ ಓದಿ... ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ಸಿದ್ಧತೆ?

Post Comments (+)