ಹಳೇಬೀಡು: ದೂರದ ಮಹಾರಾಷ್ಟ್ರದಿಂದ 600 ಕಿ.ಮೀ ಕಾಲ್ನಡಿಗೆಯಲ್ಲಿ ಶುಕ್ರವಾರ ಜೈನರಗುತ್ತಿ ಕ್ಷೇತ್ರಕ್ಕೆ ಆಗಮಿಸಿದ ದಿಗಂಬರ ಜೈನ ಮುನಿ ವೀರಸಾಗರ ಮುನಿ ಮಹಾರಾಜರನ್ನು ವೈಭವದಿಂದ ಸ್ವಾಗತಿಸಲಾಯಿತು.

1 ಕಿ.ಮೀ. ದೂರದಿಂದ ವೈವಿಧ್ಯಮಯ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ವೀರಸಾಗರ ಮುನಿ ಮಹಾರಾಜರನ್ನು ಜೈನರಗುತ್ತಿಗೆ ಆಹ್ವಾನಿಸಲಾಯಿತು. ಮೆರವಣಿಗೆಯಲ್ಲಿ ಭಕ್ತರ ಜಯಘೋಷ ಮೊಳಗಿತ್ತು. ಅಲಂಕರಿಸಿದ್ದ ಜೋಡಿ ಹೋರಿಗಳನ್ನು ಮೆರವಣಿಗೆಗೆ ಕರೆತರಲಾಗಿತ್ತು. 100 ಕ್ಕೂ ಹೆಚ್ಚು ಮಂದಿ ಜೈನ ಶ್ರಾವಕಿಯರು ಕಳಸ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.

ಜೈನರಗುತ್ತಿ ಪ್ರವೇಶಿಸಿದ ತಕ್ಷಣ ಸಾಲಾಗಿ ಜೋಡಿಸಿದ್ದ 108 ತಟ್ಟೆಗಳ ಮೇಲೆ ಮುನಿಗಳನ್ನು ನಡೆಸಿಕೊಂಡು ಕರೆತರಲಾಯಿತು. ಪ್ರತಿ ತಟ್ಟೆಯಲ್ಲಿಯೂ ನಿಲ್ಲಿಸಿ ಪಾದಪೂಜೆ ಸಲ್ಲಿಸಿದರು. ನಂತರ ನೆರೆದಿದ್ದ ಭಕ್ತರು ಮುನಿಗಳ ಆಶೀರ್ವಾದ ಪಡೆದು ಆರತಿ ನೆರವೇರಿಸಿದರು.

ಕಳೆದ ವರ್ಷ ಜೈನರಗುತ್ತಿ ಕ್ಷೇತ್ರದಲ್ಲಿ ಬೃಹತ್ ಪಂಚಕಲ್ಯಾಣ ಹಾಗೂ 24 ಅಡಿ ಎತ್ತರದ ಪದ್ಮಾಸನ ಭಂಗಿಯ ಶೀಥಲನಾಥ ತೀರ್ಥಂಕರ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿಸಿದ ನಂತರ ವೀರಸಾಗರ ಮುನಿಮಹಾರಾಜರು ವಿಹಾರ ಕೈಗೊಂಡಿದ್ದರು. ದೂರದ ಮಹಾರಾಷ್ಟ್ರದ ಕೊಲ್ಲಾಪುರ ಬಳಿಯ ಜೇಸಿಂಗಪುರ ಪೋತಳಿಗೆ 600 ಕಿ.ಮೀ ಕಾಲ್ನಡಿಗೆಯಲ್ಲಿ ತೆರಳಿದ್ದರು. ಪೋತಳಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿದ್ದರು. ನಂತರ ಜೈನರ ವಿವಿಧ ಕ್ಷೇತ್ರಗಳಿಗೆ 300 ಕಿ.ಮೀ ಪಾದಯಾತ್ರೆ ನಡೆಸಿದರು. ಪುನಃ 600 ಕಿ.ಮೀ ಕಾಲ್ನಡಿಗೆಯಲ್ಲಿ ಜೈನರಗುತ್ತಿ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಒಂದು ವರ್ಷದಲ್ಲಿ 1,500 ಕಿ.ಮೀ. ಪಾದಯಾತ್ರೆ ನಡೆಸಿದ್ದಾರೆ ಎಂದು ಜೈನರಗುತ್ತಿ ಟ್ರಸ್ಟ್ ಅಧ್ಯಕ್ಷ ಅಡಗೂರು ಶಶಿಕುಮಾರ್ ಹೇಳಿದರು.

‘ಜೈನ ಮುನಿಗಳು ಮಾನವರು ಮಾತ್ರವಲ್ಲ ಸಕಲ ಜೀವಿಗಳ ಶ್ರೇಯಸ್ಸು ಬಯಸುತ್ತಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕ್ಷೇತ್ರದ ಅಭಿವೃದ್ದಿ ಮಾಡುತ್ತಿದ್ದೇವೆ’ ಎಂದು ವೀರಸಾಗರ ಮುನಿ ಮಹಾರಾಜ್ ಹೇಳಿದರು.

ಜೈನರಗುತ್ತಿ ಟ್ರಸ್ಟ್ ಅಧ್ಯಕ್ಷ ಶಶಿಕುಮಾರ್, ಕಾರ್ಯದರ್ಶಿ ಬ್ರಹ್ಮಪಾಲ ಜೈನ್, ನಿರ್ದೇಶಕರಾದ ದೇವೇಂದ್ರ ಹೊಂಗೇರಿ, ಪದ್ಮಿಣಿ, ನಾಗಶ್ರೀ ಮುಪ್ಪಾನೆ, ನಾಗೇಂದ್ರ ಪ್ರಸಾದ್, ಧವನ್ ಜೈನ್, ಜಯೇಂದ್ರ ಕುಮಾರ್, ಜಿನೇಂದ್ರಬಾಬು, ಕೀರ್ತಿಕುಮಾರ್, ನಾಗಚಂದ್ರ, ಜೈನ ಮಂಡಳಿ ಸಹಕಾರ ಸಂಘದ ಅಧ್ಯಕ್ಷ ಸುಕುಮಾರ್, ಮುಖಂಡರಾದ ಹಾಸನದ ಪಾರ್ಶ್ವನಾಥ, ಎಚ್.ವೈ.ರತ್ನರಾಜು, ಅರ್ಚಕ ಶೀತಲ ಪಂಡಿತ್ ಪಾಲ್ಗೊಂಡಿದ್ದರು.

ಬಿಸಿಲು, ಚಳಿಗೆ ಜಗ್ಗುವುದಿಲ್ಲ: ಪಾದಯಾತ್ರೆಯ ವಿಹಾರದಲ್ಲಿ ಮುಂಜಾನೆ ಮೈ ಕೊರೆಯುವ ಚಳಿ, ಹಗಲು ವೇಳೆಯಲ್ಲಿ ನೆತ್ತಿ ಸುಡುವ ಬಿಸಿಲು ಸಹಿಸಿಕೊಂಡು ಮಹಾರಾಜರು ಪಾದಯಾತ್ರೆ ನಡೆಸಿಕೊಂಡು ಬಂದಿದ್ದಾರೆ. ವೀರಸಾಗರ ಮಹಾರಾಜರ ಸಲಹೆ, ಮಾರ್ಗದರ್ಶನದಲ್ಲಿ ಆಮೆ ಆಕೃತಿಯ ಭವ್ಯವಾದ ಕೂರ್ಮ ಮಂದಿರ ಹಾಗೂ ಪದ್ಮಾವತಿ ಹಾಗೂ ಜ್ವಾಲಮಾಲಿನಿ ಯಕ್ಷಿಯರ ಮಂದಿರ ನಿರ್ಮಿಸುವ ಗುರಿ ಹೊಂದಲಾಗಿದ್ದು, ಭಕ್ತರನ್ನು ಒಗ್ಗೂಡಿಸುವ ಕಾರ್ಯದಲ್ಲಿ ಮುನಿ ಮಹಾರಾಜರು ಪ್ರವೃತ್ತರಾಗುತ್ತಾರೆ ಎಂದು ಕಾರ್ಯದರ್ಶಿ ಬ್ರಹ್ಮಪಾಲ ಜೈನ್ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260307-36-1879880812

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.