ಹಾಸನ: ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ನಿರ್ಮಿಸುತ್ತಿರುವ ಬಿಜಿಎಸ್ಕೆ ಬಡಾವಣೆಯಲ್ಲಿ ಪೂರ್ಣ ಪ್ರಮಾಣದ ಮೂಲಸೌಕರ್ಯ ಕಲ್ಪಿಸಿದ ಬಳಿಕವೇ ನಿವೇಶನ ಹಂಚಿಕೆ ಮಾಡಬೇಕು ಎಂದು ಬೂವನಹಳ್ಳಿ, ವರಲಿಕೊಪ್ಪಲು, ಗೇಕರವಳ್ಳಿ, ಕೆಂಚಟ್ಟಹಳ್ಳಿ ಹಾಗೂ ಸಮುದ್ರವಳ್ಳಿ ಗ್ರಾಮದ ರೈತರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥರು, ಜೂನ್ 18ರಂದು ಇ–ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡುವುದಾಗಿ ಹುಡಾ ಅಧ್ಯಕ್ಷರು ಹಾಗೂ ಆಯುಕ್ತರು ಘೋಷಿಸಿದ್ದಾರೆ. ಆದರೆ ಬಡಾವಣೆಯಲ್ಲಿ ಇನ್ನೂ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿಲ್ಲ. ಈ ಪರಿಸ್ಥಿತಿಯಲ್ಲಿ ನಿವೇಶನ ಹಂಚಿಕೆ ಮಾಡುವುದು ಅನ್ಯಾಯವಾಗುತ್ತದೆ ಎಂದು ಆರೋಪಿಸಿದರು.

ಕೆಲವು ರೈತರ ಜಮೀನುಗಳನ್ನು ಇನ್ನೂ ಸಂಪೂರ್ಣವಾಗಿ ವಹಿಸಿಕೊ ಳ್ಳದೇ ಬಡಾವಣೆ ಅಭಿವೃದ್ಧಿ ಕೈಗೊಳ್ಳ ಲಾಗಿದೆ. ರಸ್ತೆಗಳು, ಕುಡಿಯುವ ನೀರು, ವಿದ್ಯುತ್, ಯುಜಿಡಿ, ಮಳೆ ನೀರು ಹರಿವಿಗೆ ಸೇತುವೆ, ಪಾರ್ಕ್, ಆಟದ ಮೈದಾನ, ಸ್ಮಶಾನ ಸೇರಿದಂತೆ ಅನೇಕ ಸೌಲಭ್ಯಗಳ ಕೊರತೆ ಇದೆ. ಜಮೀನು ಸಮತಟ್ಟು ಮಾಡದೇ ನಿವೇಶನಗಳನ್ನು ಗುರುತಿಸಿರುವುದು ಅವೈಜ್ಞಾನಿಕವಾಗಿದೆ ಎಂದು ದೂರಿದರು.

ಮಾದರಿ ಬಡಾವಣೆ ನಿರ್ಮಿಸುವುದಾಗಿ ಹೇಳಿ ರೈತರನ್ನು ಒಪ್ಪಿಸಲಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರನ್ನು ಬಡಾವಣೆಗೆ ಇಡುವುದು ನಮ್ಮ ಮೂಲ ಆಶಯವಾಗಿತ್ತು. ಆದರೆ ಬಡಾವಣೆ ನಿವೇಶನ ಹಂಚಿಕೆ ಕುರಿತು ನಾಲ್ಕು ಗ್ರಾಮಗಳ ರೈತರ ಸಭೆಯನ್ನೇ ಕರೆಯಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೂರ್ಣ ಪ್ರಮಾಣದ ಮೂಲ ಸೌಕರ್ಯ ಒದಗಿಸಿ ನಂತರ ನಿವೇಶನ ಹಂಚಿಕೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಇಲ್ಲವಾದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸ್ವಾಮಿಗೌಡ, ದಿನೇಶ್, ವಾಸುದೇವ್, ನಾಗಣ್ಣ, ಜಯರಾಂ, ರವಿ, ಕರಿಯಣ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-36-1704111761

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.