ಹಾಸನ: ಭಗವಾನ್ ಮಹಾವೀರ ತೀರ್ಥಂಕರರ 2625ನೇ ಜಯಂತಿ ಮಹೋತ್ಸವ ಹಾಗೂ ಮಹಾವೀರ ಜಿನ ಮಂದಿರ ಮತ್ತು ಮೂರ್ತಿ ಪ್ರತಿಷ್ಠಾಪನಾ 23ನೇ ವಾರ್ಷಿಕೋತ್ಸವ ಹಾಗೂ ಮಹಾವೀರ ಎಜುಕೇಶನಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ರವೀಂದ್ರನಗರದ ಮಹಾವೀರ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾ.30 ರಂದು ಹಮ್ಮಿಕೊಳ್ಳಲಾಗಿದೆ.

ಶ್ರೀಮದ್ದೇವೇಂದ್ರ ಕೀರ್ತಿ ಭಟ್ಟಾಕರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 5.30ರಿಂದ ಪಂಚಾಮೃತ ಅಭಿಷೇಕ, ಬೆಳಿಗ್ಗೆ 8ಕ್ಕೆ ಪುಷ್ಪಾಲಂಕೃತ ಪಲ್ಲಕ್ಕಿ ಉತ್ಸವ, 11.30ಕ್ಕೆ ವಿಶೇಷ ಅಭಿಷೇಕ ಹಾಗೂ ಮಧ್ಯಾಹ್ನ 3.30ಕ್ಕೆ ದಿವ್ಯ ರಥೋತ್ಸವ ನಡೆಯಲಿದೆ. ಸಂಜೆ ಮಹಾಮಂಗಳಾರತಿ ಮತ್ತು ಎಲ್ಇಡಿ ಪರದೆಯ ಮೇಲೆ ಮಹಾವೀರ ತೀರ್ಥಂಕರರ ದೃಶ್ಯಾವಳಿಗಳ ಪ್ರದರ್ಶನವೂ ಇರಲಿದೆ.

ಆರೋಗ್ಯ ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ರಕ್ತಗುಂಪು ಪರೀಕ್ಷೆ, ಹಿಮೋಗ್ಲೋಬಿನ್ ತಪಾಸಣೆ, ದಂತ ಹಾಗೂ ನೇತ್ರ ತಪಾಸಣೆ ಸೇರಿದಂತೆ ಪುರುಷ ಹಾಗೂ ಮಹಿಳಾ ವೈದ್ಯರಿಂದ ಸಾಮಾನ್ಯ ಕಾಯಿಲೆಗಳ ಪರಿಶೀಲನೆ ಮತ್ತು ಸಲಹೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಸಾರ್ವಜನಿಕರು ಹಾಗೂ ಜೈನ ಸಮಾಜದವರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮಹಾವೀರ ಎಜುಕೇಶನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಚ್.ಡಿ. ನಾಗೇಂದ್ರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-36-814216348

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.