ಹಾಸನ: ಜಿಲ್ಲೆಯಲ್ಲಿ ಈ ಬಾರಿ ಮಾವಿನ ಬೆಳೆ ಉತ್ತಮ ಇಳುವರಿ ನೀಡಿದ್ದು, ಮಾರುಕಟ್ಟೆಗಳಲ್ಲಿ ವಿವಿಧ ತಳಿಯ ಮಾವಿನ ಹಣ್ಣುಗಳ ರಂಗು ಹೆಚ್ಚಾಗಿದೆ. ಆದರೆ ಕಳೆದ ವರ್ಷದೊಂದಿಗೆ ಹೋಲಿಸಿದರೆ ದರ ಏರಿಕೆಯಾಗಿರುವುದು ಗ್ರಾಹಕರಿಗೆ ಬಿಸಿ ತಟ್ಟಿದೆ.

ನಗರದ ಸಾಲಗಾಮೆ ರಸ್ತೆ, ಸಹ್ಯಾದ್ರಿ ವೃತ್ತ, ಕಟ್ಟಿನಕೆರೆ ಮಾರುಕಟ್ಟೆ, ಕೃಷಿ ಉತ್ಪನ್ನ ಮಾರುಕಟ್ಟೆ ಸೇರಿದಂತೆ ಹೆದ್ದಾರಿ ಪಕ್ಕದಲ್ಲಿ ಅಲ್ಲಲ್ಲಿ ಮಾವಿನ ಮಾರಾಟ ಕಾಣಸಿಗುತ್ತಿದೆ. ಕೆಲವೆಡೆ ಮಾವು ಬೆಳೆಗಾರರೇ ನೇರವಾಗಿ ಮಾರಾಟ ಮಾಡುವ ದೃಶ್ಯ ಸಾಮಾನ್ಯ ವಾಗಿದೆ. ಅದರಲ್ಲೂ ವಾರದ ಸಂತೆ ಮತ್ತು ಮಾರುಕಟ್ಟೆ ಪ್ರದೇಶದಲ್ಲಿ ಮಾವಿನ ಹಣ್ಣು ಮಾಡಿ ತಂದು ಮಾರಾಟ ಮಾಡುವವರಿಂದ ಖರೀದಿಸಲು ಹೆಚ್ಚಿನ ಗ್ರಾಹಕರು ಇಚ್ಛಿಸುತ್ತಾರೆ.

ಮಾವು ಮೇಳಕ್ಕೆ ಅನುದಾನ ಕೊರತೆ: ನಗರದಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಮಾವು ಹಾಗೂ ಹಲಸಿನ ಮೇಳ ಕಳೆದ ಕೆಲವು ವರ್ಷಗಳಿಂದ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದೆ. ನಗರದ ಹಾಸನಾಂಬ ಕಲಾಕ್ಷೇತ್ರದ ಎದುರು ನಡೆಯುತ್ತಿದ್ದ ಮೇಳದಲ್ಲಿ 30ರಿಂದ 40ಕ್ಕೂ ಹೆಚ್ಚು ತಳಿಗಳ ಮಾವಿನ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಇರುತ್ತಿತ್ತು. ಸರ್ಕಾರದಿಂದ ಸಮರ್ಪಕ ಅನುದಾನ ದೊರೆಯದ ಕಾರಣ ಮೇಳ ಆಯೋಜನೆ ಸಾಧ್ಯವಾಗುತ್ತಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ಕೆಲವರು ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಗಿಸುತ್ತಿರುವ ಬಗ್ಗೆ ಜನರಿಂದ ಆತಂಕ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾರಾಟ ಕೇಂದ್ರಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

‘ಕಳೆದ 10 ವರ್ಷಗಳಿಂದ ಮಾವಿನ ಹಣ್ಣಿನ ವ್ಯಾಪಾರ ಮಾಡುತ್ತಿದ್ದೇನೆ. ಈ ಬಾರಿ ಹಣ್ಣಿನ ಸರಬರಾಜು ಉತ್ತಮವಾಗಿದೆ. ಆದರೆ ದರ ಏರಿಕೆಯಿಂದ ಖರೀದಿ ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷ ₹100ಕ್ಕೆ 3 ರಿಂದ 4 ಕೆ.ಜಿ. ರಸಪೂರಿ ಸಿಗುತ್ತಿತ್ತು. ಈ ಬಾರಿ ಅದೇ ದರಕ್ಕೆ 1.5ರಿಂದ 2 ಕೆ.ಜಿ. ಮಾತ್ರ ದೊರೆಯುತ್ತಿದೆ’ ಎಂದು ಹೇಳುತ್ತಾರೆ ಆದರ್ಶನಗರದ ಮಾವು ವರ್ತಕ ಅಸ್ಲಾಂಪಾಷಾ.

‘ಚನ್ನರಾಯಪಟ್ಟಣ, ಬೇಲೂರು, ಹಾಸನ ಹಾಗೂ ಅರಸೀಕೆರೆ ಭಾಗಗಳಲ್ಲಿ ಬೆಳೆಯುವ ಸ್ಥಳೀಯ ಮಾವಿಗೆ ಹೆಚ್ಚಿನ ಬೇಡಿಕೆ ಇದೆ. ಉತ್ತಮ ಗುಣಮಟ್ಟ ಈ ಬಾರಿ ಹಣ್ಣಿನ ಉತ್ತಮ ಸವಿಯನ್ನು ಗ್ರಾಹಕರು ಅನುಭವಿಸುತ್ತಿದ್ದಾರೆ’ ಎನ್ನುತ್ತಾರೆ ಕೆ.ಆರ್. ಪುರಂ ನಿವಾಸಿ ದಿವಾಕರ್.

ಈ ಬಾರಿ ಉತ್ತಮ ಇಳುವರಿ ದೊರೆತಿರುವುದರಿಂದ ರೈತರಲ್ಲಿ ಸಂತಸ ಮೂಡಿದ್ದರೂ, ದರ ಏರಿಕೆಯಿಂದ ಗ್ರಾಹಕರು ಅಳೆದು ತೂಗಿ ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ.

ಬೆಳೆಗಾರರಿಗೆ ಉತ್ತಮ ಲಾಭದ ನಿರೀಕ್ಷೆಯಿದೆ. ಹೆಚ್ಚಿದ ದರದಿಂದ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಅರಸೀಕೆರೆ, ಕಡೂರು, ಜಾವಗಲ್, ಅಡಗೂರು ಹೆಚ್ಚಿನ ಮಾವು ಬರುತ್ತಿದೆ
ವಸಂತಕುಮಾರ್, ಅಡ್ಡಿಮನೆ ಮಾವು ವರ್ತಕ

ಈ ಬಾರಿ ಉತ್ತಮ ಇಳುವರಿ

ಈ ಬಾರಿ ಹವಾಮಾನ ಅನುಕೂಲಕರ ಆಗಿದ್ದರಿಂದ ಉತ್ತಮ ಇಳುವರಿ ಬಂದಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಯೋಗೇಶ್ ತಿಳಿಸಿದ್ದಾರೆ

ಜಿಲ್ಲೆಯಲ್ಲಿ ಸುಮಾರು 2,500 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಪ್ರಮುಖವಾಗಿ ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು ಹಾ” ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.