ಹಾಸನ: ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಆಲೂಗಡ್ಡೆ ಮಾರಾಟ ಪ್ರಕ್ರಿಯೆಯನ್ನು ಶುಕ್ರವಾರ ಆರಂಭಿಸಲಾಗಿದೆ. ಕುಫ್ರಿ ಜ್ಯೋತಿ ತಳಿಗೆ ಕ್ವಿಂಟಲ್ಗೆ ₹1,200 ದರ ನಿಗದಿ ಪಡಿಸಿದ್ದು, ಗುಣಮಟ್ಟದ ಗಡ್ಡೆಗಳ ವಿತರಣೆಗೆ ತೋಟಗಾರಿಕೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಸಂಸದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್ ಉಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಆಲೂಗಡ್ಡೆ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಗಿದ್ದು, ಈ ಬಾರಿ ಜಿಲ್ಲೆಯಲ್ಲಿ ಆಲೂಗಡ್ಡೆ ಕ್ಷೇತ್ರ ವಿಸ್ತರಣೆ ಸಕಲ ಸಿದ್ಧತೆ ಮಾಡಲಾಗಿದೆ.

ತಾಲ್ಲೂಕುವಾರು ಜಾಗೃತಿ ಸಮಿತಿ: ಬಿತ್ತನೆ ಆಲೂಗಡ್ಡೆ ಅನಧಿಕೃತ ಮಾರಾಟ ನಿರ್ಬಂಧಿಸಲು ಹಾಗೂ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ತಾಲ್ಲೂಕು ಮಟ್ಟದಲ್ಲಿ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಾಲ್ಲೂಕು ಜಾಗೃತಿ ಸಮಿತಿ ರಚಿಸಲಾಗಿದೆ.

ಎಪಿಎಂಸಿಯಲ್ಲಿ ನೋಂದಣಿಯಾಗಿರದ ಆಲೂಗಡ್ಡೆ ವರ್ತಕರು, ದಲ್ಲಾಳಿಗಳು, ಮಾರಾಟಗಾರರು ತಮ್ಮ ತಾಲ್ಲೂಕು ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಆಲೂಗಡ್ಡೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದರೆ ಕೂಡಲೆ ತಾಲ್ಲೂಕು ಜಾಗೃತಿ ಸಮಿತಿ, ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ತಮ್ಮ ಹೋಬಳಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.

ಬಿತ್ತನೆಗೆ ಬಳಸುವ ಆಲೂಗಡ್ಡೆಯ ಕೆಲವು ಲಾಟ್ಗಳಲ್ಲಿ ನಂಜಾಣು ಸೋಂಕು ಪತ್ತೆಯಾಗಿದ್ದು, ಈ ಲಾಟ್ಗಳಿಂದ ಬಿತ್ತನೆ ಉದ್ದೇಶಕ್ಕೆ ಆಲೂಗಡ್ಡೆ ಮಾರಾಟ ಮಾಡದಂತೆ ವರ್ತಕರಿಗೆ ನಿರ್ಬಂಧ ಹೇರಲಾಗಿದೆ. ಅದಾಗ್ಯೂ ವರ್ತಕರು ನಂಜಾಣು ಸೋಂಕಿತ ಲಾಟ್ಗಳ ಆಲೂಗಡ್ಡೆ ಮಾರಾಟ ಮಾಡುತ್ತಿದ್ದಲ್ಲಿ ಜಾಗೃತಿ ಸಮಿತಿಯ ಗಮನಕ್ಕೆ ತರುವಂತೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಯೋಗೇಶ್ ತಿಳಿಸಿದ್ದಾರೆ.

ಕುಫ್ರಿ ಜ್ಯೋತಿ ತಳಿಗೆ ಜಿಲ್ಲಾಡಳಿತ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದನ್ನು ಗಮನಿಸಿದಲ್ಲಿ ಕೂಡಲೇ ಜಾಗೃತಿ ಸಮಿತಿಗೆ ಮಾಹಿತಿ ನೀಡಬೇಕು.

ತಾಲ್ಲೂಕುವಾರು ತಾಂತ್ರಿಕ ಸಮಿತಿ ರಚನೆ: ರೈತರಿಗೆ ಗ್ರಾಮ, ತಾಲ್ಲೂಕು ಮಟ್ಟದಲ್ಲಿ ಆಲೂಗಡ್ಡೆ ಬೇಸಾಯದ ಬಿತ್ತನೆ ಪೂರ್ವ ಹಾಗೂ ಬಿತ್ತನೆ ನಂತರದ ಚಟುವಟಿಕೆಗಳ ಬಗ್ಗೆ ತಾಂತ್ರಿಕ ಮಾಹಿತಿ ನೀಡಲು ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳನ್ನು ಒಳಗೊಂಡ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ. ರೈತರು ಅಧಿಕಾರಿಗಳಿಂದ ಮಾಹಿತಿ ಪಡೆದು, ಅವಶ್ಯಕ ಪರಿಕರಗಳನ್ನು ಮಾತ್ರ ಬಳಸಿ, ಆಲೂಗಡ್ಡೆ ಬೇಸಾಯ ವೆಚ್ಚವನ್ನು ಕಡಿಮೆಗೊಳಿಸಬಹುದು. ಈ ಬಗ್ಗೆ ಸಮಿತಿಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ರೈತರು ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಹೋಬಳಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಇಲಾಖೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-36-1108450598

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.