ಹಾಸನ: ನಗರದ ರಾಜೀವ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶಿಷ್ಟ ಹಾಗೂ ಭಾವನಾತ್ಮಕ ಕಾರ್ಯಕ್ರಮ ಮಾತೃ ದೇವೋ ಭವ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ತಮ್ಮ ತಾಯಂದಿರನ್ನು ಕಾಲೇಜಿಗೆ ಆಹ್ವಾನಿಸಿ, ಅವರ ಪಾದಪೂಜೆ ಮಾಡಿ, ಹೂವುಗಳನ್ನು ಅರ್ಪಿಸಿ ಗೌರವ ಸಲ್ಲಿಸಿದರು. ಹಲವಾರು ತಾಯಂದಿರು ತಮ್ಮ ಮಕ್ಕಳಿಂದ ದೊರೆತ ಗೌರವಕ್ಕೆ ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ತಾಯಂದಿರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವಿದ್ಯಾರ್ಥಿಗಳು ತಮ್ಮ ತಾಯಿಯ ಕುರಿತು ಮಾತನಾಡಿದರು.

‘ಕಾಲೇಜುಗಳು ಸಮಾಜದ ಭವಿಷ್ಯ ರೂಪಿಸುವ ಜ್ಞಾನ ಕೇಂದ್ರಗಳಾಗಿವೆ. ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶ. ಕಾಲೇಜುಗಳಲ್ಲಿ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವುದರಿಂದ ಯುವಜನರಲ್ಲಿ ಸಮಾನತೆ ಮತ್ತು ನ್ಯಾಯದ ಮನೋಭಾವ ಬೆಳೆದು, ಭವಿಷ್ಯದಲ್ಲಿ ಸಮಾನ ಮತ್ತು ಪ್ರಗತಿಶೀಲ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ’ ಎಂದು ವಿದ್ಯಾರ್ಥಿಯ ತಾಯಿ ಕನಕಾ ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಆರ್. ಶಂಕರೇಗೌಡ ಮಾತನಾಡಿ, ‘ನಮ್ಮೆಲ್ಲರನ್ನು ತನ್ನ ಒಡಲಿನಲ್ಲಿ ಹೊತ್ತುಕೊಂಡಿರುವವಳು ಭೂಮಿ ತಾಯಿ. ಜನ್ಮ ಕೊಟ್ಟವಳು ತಾಯಿ. ಇಡೀ ಮನೆ, ಕುಟುಂಬದ ನೆಲೆ, ಶಾಂತಿ ಮತ್ತು ಒಗ್ಗಟ್ಟು ಬಹುಪಾಲು ತಾಯಿಯ ಮೇಲೆ ಅವಲಂಬಿತವಾಗಿದೆ. ನಾವು ಮಾತೃ ದೇವೋಭವ ಅಂದರೆ ತಾಯಿ ದೇವರಿಗೆ ಸಮಾನ ಎನ್ನುತ್ತೇವೆ. ಸಹನಶೀಲತೆ, ತಾಳ್ಮೆ, ಕ್ಷಮೆ ಈ ಎಲ್ಲ ಗುಣಗಳನ್ನು ದೇವರು ಹೆಣ್ಣುಮಕ್ಕಳಿಗೆ ಮಾತ್ರ ನೀಡಿದ್ದಾನೆ. ದೇಶದ ಪ್ರಗತಿ ಅಲ್ಲಿನ ಹೆಣ್ಣುಮಕ್ಕಳಿಗೆ ನೀಡುವ ಗೌರವದ ಮೇಲೆ ಅವಲಂಬಿತವಾಗಿದೆ’ ಎಂದರು.

‘ಇಂದಿನ ಕಾಲದಲ್ಲಿ ಮಹಿಳೆಯರು ಶಿಕ್ಷಣ, ವಿಜ್ಞಾನ, ವೈದ್ಯಕೀಯ, ಕ್ರೀಡೆ, ರಾಜಕೀಯ, ಸೇನೆ, ಆಡಳಿತ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದಾರೆ. ಪಾದಪೂಜೆ ಮಾಡುವ ಉದ್ದೇಶ ಸಂಸ್ಕಾರ, ಸಂಸ್ಕೃತಿಯಷ್ಟೇ ಅಲ್ಲದೇ ವೈಜ್ಞಾನಿಕ ಕಾರಣವೂ ಇದೆ. ಮಾನವ ದೇಹದಲ್ಲಿ ಅನೇಕ ನರಗಳು ಪಾದಗಳಲ್ಲಿ ಅಂತ್ಯಗೊಳ್ಳುತ್ತವೆ. ಪಾದಗಳನ್ನು ಸ್ಪರ್ಷಿಸುವಾಗ ಆ ನರಗಳಿಗೆ ಪ್ರೇರಣೆ ಸಿಗುತ್ತದೆ. ಇದು ದೇಹದಲ್ಲಿ ಶಾಂತಿ ಮತ್ತು ಸಮತೋಲನ ಹೆಚ್ಚಿಸುತ್ತದೆ. ತಾಯಂದಿರು ಆರ್ಥಿಕ ಜ್ಞಾನವಷ್ಟೇ ಅಲ್ಲ, ಕುಟುಂಬದ ಆರ್ಥಿಕತೆಯನ್ನು ಭದ್ರಪಡಿಸಲು ಬೇಕಾಗಿರುವ ಜ್ಞಾನ ಪಡೆಯಬೇಕು’ ಎಂದು ಹೇಳಿದರು.

ಕಾಲೇಜಿನ ಉಪನ್ಯಾಸಕಿಯರು ಹಾಗೂ ಮಹಿಳಾ ಸಿಬ್ಬಂದಿಗೆ, ವಿದ್ಯಾರ್ಥಿಗಳ ತಾಯಂದಿರಿಗೆ ಉಡುಗೊರೆ ನೀಡಿ ಶುಭಾಶಯ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.