ಹಾಸನ: ನಗರದ ಹಾಸನಾಂಬ ದೇವಾಲಯ ಸಮೀಪದ ರಾಮಲಿಂಗ ಚೌಡೇಶ್ವರಿ ದೇವಾಲಯ ಪ್ರತಿಷ್ಠಾಪನೆಯ 100 ವರ್ಷಗಳನ್ನು ಪೂರೈಸುತ್ತಿರುವ ನಿಮಿತ್ತ ಏ.20 ಮತ್ತು 21ರಂದು ಪ್ರತಿಷ್ಠಾ ಶತಮಾನೋತ್ಸವ ಆಯೋಜಿಸಲಾಗಿದೆ. ದೇವಾಂಗ ಜಗದ್ಗುರು ಹಂಪಿ ಹೇಮಕೂಟದ ಗಾಯತ್ರಿ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಈ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಾಂಗ ಮಂಡಳಿಯವರು ತಿಳಿಸಿದ್ದಾರೆ.

20ರಂದು ಬೆಳಿಗ್ಗೆ 5ಕ್ಕೆ ಪಂಚಾಮೃತ ಅಭಿಷೇಕ, ಲಲಿತಾ ಸಹಸ್ರನಾಮ ಪಠಣ ಹಾಗೂ ವಿಶೇಷ ಅಲಂಕಾರ ನಡೆಯಲಿದೆ. ಬೆ.6ಕ್ಕೆ 108 ಕಳಸಗಳೊಂದಿಗೆ ಜಯಂತ್ಯುತ್ಸವದ ಮೆರವಣಿಗೆ ನಡೆಯಲಿದ್ದು, ಅಮ್ಮನವರ ಅಡ್ಡೆ ಉತ್ಸವ ಹಾಗೂ ಸ್ವಾಮಿಗಳ ಸಾನಿಧ್ಯದಲ್ಲಿ ಕುಂಭಾಭಿಷೇಕ ನೆರವೇರಿಸಲಾಗುತ್ತದೆ. ರಾಮಮಂದಿರದಲ್ಲಿ ಗಣಪತಿ, ನವಗ್ರಹ, ಸತ್ಯನಾರಾಯಣ, ರಾಮಲಿಂಗ ಹಾಗೂ ಚೌಡೇಶ್ವರಿ ಅಮ್ಮನವರ ಹೋಮಗಳು ನಡೆಯಲಿದ್ದು, ಪೂರ್ಣಾಹುತಿ ನಂತರ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ.

ಏ.21ರಂದು ಬೆಳಿಗ್ಗೆ 8ಕ್ಕೆ ಚಂಡಿಕಾ ಹೋಮ ಪ್ರಾರಂಭವಾಗಲಿದ್ದು, ಮಧ್ಯಾಹ್ನ ಪೂರ್ಣಾಹುತಿ ಬಳಿಕ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಈ ಎರಡು ದಿನ ಭಕ್ತರಿಗೆ ಬೆಳಿಗ್ಗೆ ಫಲಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾಸೋಹ ವ್ಯವಸ್ಥೆ ಇರಲಿದೆ.

ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ದೇವಾಂಗ ಮಂಡಳಿ, ದೇವಾಂಗ ಮಹಿಳಾ ಬಳಗ ಹಾಗೂ ವಿವಿಧ ದೇವಾಂಗ ಸಂಘಟನೆ ಸದಸ್ಯರು, ಮಂಡಳಿಯ ಅಧ್ಯಕ್ಷ ಎಚ್.ಡಿ. ಭಾಸ್ಕರ್ (7204889139), ಉಪಾಧ್ಯಕ್ಷ ಸಚಿನ್ ಎಚ್.ಪಿ. (9964006572) ಪದಾಧಿಕಾರಿಗಳಾದ ಎಚ್.ಎ. ಕಾಂತೇಶ್, ಎಚ್.ಆರ್. ರಂಗನಾಥ, ಎಚ್.ಎಚ್. ಪುರುಷೋತ್ತಮ್, ಎಚ್.ಜೆ. ಪ್ರಸಾದ್ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-36-1524830262

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.