ಹಾಸನ: ತಾನು ಮದುವೆ ಆಗಬೇಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗೆ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಬೇಲೂರು ತಾಲ್ಲೂಕಿನ ಪ್ರವೀಣ ಪಿ.ಕೆ. ಶಿಕ್ಷೆಗೆ ಗುರಿಯಾದ ಅಪರಾಧಿ. ಪ್ರವೀಣ ಹಾಗೂ ಅದೇ ಗ್ರಾಮದ ಶಶಿಕಲಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಮದುವೆ ಮಾಡುವುದಾಗಿ ಹಿರಿಯರು ನಿಶ್ಚಯಿಸಿದ್ದರು. ಆದರೆ, ನಿಶ್ಚಯವಾದಂತೆ 2018 ರ ಏಪ್ರಿಲ್ನಲ್ಲಿ, ತನಗಿಂತ ದೊಡ್ಡವಳಾದ ಶಶಿಕಲಾ ಜೊತೆ ಮದುವೆ ಮಾಡಿಕೊಳ್ಳಬೇಕಾಗುತ್ತದೆ. ಆಕೆಯನ್ನು ಕೊಲೆ ಮಾಡಿದರೆ, ಇಷ್ಟವಾಗುವ ಬೇರೆ ಹುಡುಗಿಯನ್ನು ಮದುವೆ ಆಗಬಹುದು ಎಂದು ಪ್ರವೀಣ ಸಂಚು ರೂಪಿಸಿದ್ದ.

2018 ರ ಮಾರ್ಚ್ 22 ರಂದು ಶಶಿಕಲಾಳನ್ನು ಬೈಕ್ನಲ್ಲಿ ತಮ್ಮ ಊರಾದ ಹಾಡ್ಲಗೆರೆ ಪರುಗೆ ಕರೆದೊಯ್ದ ಪ್ರವೀಣ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ‘ನನ್ನನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗು ಇಲ್ಲದಿದ್ದರೆ ನಿಮ್ಮ ಊರಿನವರಿಗೆ ತನ್ನ ಮೇಲೆ ಅತ್ಯಾಚಾರ ಮಾಡಿರುವ ವಿಷಯ ಹೇಳುತ್ತೇನೆ’ ಎಂದು ಶಶಿಕಲಾ ಹೇಳಿದ್ದಳು. ಈ ವೇಳೆ ಕೈಯಿಂದ ಶಶಿಕಲಾಳ ತಲೆಗೆ ಬಲವಾಗಿ ಹೊಡೆದ ಪ್ರವೀಣ, ಕುಸಿದು ಬಿದ್ದ ನಂತರ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ತಮ್ಮಣ್ಣಿ ಜೊತೆಗೆ ಸೇರಿ, ಶವವನ್ನು ಕಲ್ಕೆರೆ ಗಡಿಯಿಂದ ಲಕ್ಷ್ಮಿಪುರ ಗ್ರಾಮಕ್ಕೆ ಹೋಗುವ ಜಮೀನಿನಲ್ಲಿ ಎಸೆದಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ತನಿಖಾಧಿಕಾರಿ ಪಿ.ಕೆ. ರಾಜು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆನಂದ್, ಪ್ರವೀಣ ಮೇಲಿರುವ ದೋಷಾರೋಪಣೆ ಸಾಬೀತಾಗಿದೆ ಎಂದು ತೀರ್ಮಾನಿಸಿ, ಐಪಿಸಿ ಕಲಂ 302 ರಡಿ ಎಸಗಿದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ, ₹20ಸಾವಿರ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 1 ವರ್ಷ ಕಾರಾವಾಸ ಶಿಕ್ಷೆ, ಐಪಿಸಿ ಕಲಂ 376 ರಡಿ ಎಸಗಿದ ಅಪರಾಧಕ್ಕಾಗಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹10ಸಾವಿರ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳ ಸಾದಾ ಕಾರಾವಾಸ ಮತ್ತು ಐಪಿಸಿ ಕಲಂ 201 ರಡಿ ಎಸಗಿದ ಅಪರಾಧಕ್ಕಾಗಿ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹5ಸಾವಿರ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಕಾರಾವಾಸ ಶಿಕ್ಷೆ ವಿಧಿಸಿದ್ದಾರೆ. 2ನೇ ಆರೋಪಿ ತಮ್ಮಣ್ಣಿಗೆ ಐಪಿಸಿ ಕಲಂ 201 ರಡಿ ಎಸಗಿದ ಅಪರಾಧಕ್ಕಾಗಿ 2 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹5ಸಾವಿರ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 3 ತಿಂಗಳ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿ, ಏ. 29 ರಂದು ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಯು.ವಿನಯರಾಣಿ ಮತ್ತು ಇ.ಡಿ. ಶ್ರೀನಿವಾಸ ಹಾಗೂ ಕೃಷ್ಣ ಜಿ. ದೇಶಭಂಡಾರಿ ವಾದ ಮಂಡಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-36-887752380

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.