ಹಾಸನ: ಅರಸೀಕೆರೆ ತಾಲ್ಲೂಕು ದೊಡ್ಡನಹಳ್ಳಿ ಕ್ಷೇತ್ರದಲ್ಲಿ ನೆಲೆಸಿರುವ ಗುರು ಸಿದ್ದರಾಮೇಶ್ವರ ಸ್ವಾಮಿಯ ಪ್ರಥಮ ವರ್ಷದ ಗುರು ಸಿದ್ದರಾಮೋತ್ಸವ ಮೇ 17ರಂದು ಹಾಸನದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿಯವರ ಅಪ್ಪಣೆಯ ಮೇರೆಗೆ ಉತ್ಸವ ಆಯೋಜಿಸಲಾಗಿದೆ. ಬೆಳಿಗ್ಗೆ 11 ಗಂಟೆಗೆ ಹಾಸನಾಂಬ ದೇವಾಲಯಕ್ಕೆ ಸ್ವಾಮಿಯವರ ಆಗಮನವಾಗಲಿದೆ. ಮಧ್ಯಾಹ್ನ 1 ಗಂಟೆಯಿಂದ ಸಿದ್ದೇಶ್ವರ ಸ್ವಾಮಿಯವರ ಸನ್ನಿಧಿಯಲ್ಲಿ ಸ್ವಾಮಿಗೆ ಮಹಾ ರುದ್ರಾಭಿಷೇಕ, ಶಿವಾಷ್ಟೋತ್ತರ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ನಡೆಯಲಿದೆ ಎಂದರು. ಸಂಜೆ 4.30ಕ್ಕೆ ದೊಡ್ಡನಹಳ್ಳಿ ವೀರಭದ್ರೇಶ್ವರ ಸ್ವಾಮಿಯ ಪೂಜಾ ಕುಣಿತ, ವೀರಗಾಸೆ, ನಂದಿ ಧ್ವಜ, ಮದ್ದು ಗುಂಡಿನ ಪ್ರದರ್ಶನದೊಂದಿಗೆ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದೆ. ಮಧ್ಯಾಹ್ನ 2 ಗಂಟೆಗೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.

ಹಾಸನಾಂಬ- ಸಿದ್ದೇಶ್ವರ ದೇವಾಲಯದ ಅರ್ಚಕರು ಹಾಗೂ ಭಕ್ತರ ಸಹಕಾರದೊಂದಿಗೆ ನಡೆಯಲಿರುವ ಉತ್ಸವವು ಹಾಸನಾಂಬ ದೇವಾಲಯದಿಂದ ಪ್ರಾರಂಭವಾಗಿ ಅರಳೇಪೇಟೆ, ಸಹ್ಯಾದ್ರಿ ರಸ್ತೆ ಮಾರ್ಗವಾಗಿ ಮಹಾವೀರ ವೃತ್ತ, ದೇವಿಗೆರೆ ಸರ್ಕಲ್ ತಲುಪಲಿದೆ ಎಂದು ವಿವರಿಸಿದರು. ನಾಗೇಶ್, ತ್ಯಾಗರಾಜು, ಸಚ್ಚಿನ್, ವಿನಯ್, ದಯಾನಂದ, ರೇವಣ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-36-921957158

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.