ಹಾಸನ: ‘ನಮ್ಮ ನಾಡಿನ ಪ್ರಗತಿಗೆ ಪ್ರತಿಯೊಬ್ಬರ ನಿಸ್ವಾರ್ಥವಾದ ಸೇವೆ ಅಗತ್ಯ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ.ವೈ.ಎಸ್. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಏಕಲವ್ಯ ಜೀವ ಜಲ ಫೌಂಡೇಶನ್ ಹಾಗೂ ಏಕಲವ್ಯ ರೋವರ್ ಮುಕ್ತ ದಳದ ದಶಮಾನೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಏಕಲವ್ಯ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಸೇವೆ ಮಾಡುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ದೇವರು ಈ ಕಾರ್ಯಕ್ಕಾಗಿ ಕೆಲವರನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ನಮ್ಮ ಬದುಕಿನಲ್ಲಿ ಪ್ರತಿಫಲ ಬಯಸದೆ ಸಲ್ಲಿಸುವ ಸೇವೆ ಭಗವಂತನಿಗೆ ಸಮರ್ಪಿತವಾಗುತ್ತದೆ’ ಎಂದರು.

ಸರಸ್ವತಿ ಮಹಿಳಾ ಕಲಾ ಸಮಾಜದ ವತಿಯಿಂದ ಹಲವು ವರ್ಷಗಳಿಂದ ವಿವಿಧ ರೀತಿಯಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ ಸುಧಾ ರವಿಕುಮಾರ್ ಅವರ ಸೇವೆಯನ್ನು ಶ್ಲಾಘಿಸಿದರು.

ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವೈ.ಎಂ. ರಾಜೇಂದ್ರ, ವೀರ ಯೋಧ ವೈ.ಎನ್. ಮೋಹನ್ ಹಾಗೂ ರೋವರ್ ಮನು ವರ್ಷಿತ್ ಅವರಿಗೆ ‘ಏಕಲವ್ಯ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗೈಡ್ ಜಿಲ್ಲಾ ಆಯುಕ್ತೆ ಜಯಾ ರಮೇಶ್, ಲೀಡರ್ ಟ್ರೈನರ್ ಬಿ.ಎಲ್. ಮಮತಾ, ನಿಕಟಪೂರ್ವ ಜಿಲ್ಲಾ ಜಂಟಿ ಕಾರ್ಯದರ್ಶಿ ಎಚ್.ಜಿ. ಕಾಂಚನಮಾಲಾ, ಗೈಡ್ ಕ್ಯಾಪ್ಟನ್ ಕೆ.ಸಿ. ಗೀತಾ, ಎಎಸ್ಒಸಿ ಎಚ್.ಎಂ. ಪ್ರಿಯಾಂಕಾ, ಆರ್.ಜೆ.ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-36-1054951213

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.