ಹಾಸನ: ಶ್ರವಣಬೆಳಗೊಳದಲ್ಲಿ ಮದುವೆ ಮಾಡಿಸಲಿಲ್ಲ ಎಂಬ ಕಾರಣಕ್ಕೆ ಪುತ್ರನೇ ತಾಯಿಯನ್ನು ಕೊಲೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗಂಗಮ್ಮ (65) ಮೃತಪಟ್ಟಿ, ಪುತ್ರ ಉಮಾಶಂಕರ ಆರೋಪಿ. ವರ್ಷದ ಹಿಂದೆ ಕುಂಭಮೇಳಕ್ಕೆ ತೆರಳಿ ವಾಪಸ್ಸಾಗುವ ವೇಳೆ ಸಂಭವಿಸಿದ ಅಪಘಾತದಲ್ಲಿ ಉಮಾಶಂಕರ ತಲೆಗೆ ಗಾಯವಾಗಿತ್ತು. ಆ ಬಳಿಕ ಆತ ಕೆಲವೊಮ್ಮೆ ಮಾನಸಿಕ ಅಸ್ಥಿರತೆಯಿಂದ ವರ್ತಿಸುತ್ತಿದ್ದ ಎಂದು ತಿಳಿದುಬಂದಿದೆ.

ಮದುವೆ ಮಾಡಿಸುವಂತೆ ಉಮಾಶಂಕರ, ತಾಯಿಯೊಂದಿಗೆ ಪದೇಪದೇ ಜಗಳವಾಡುತ್ತಿದ್ದ. ಇದೇ ವಿಚಾರಕ್ಕೆ ಮಾ.26ರಂದು ಮನೆಯಲ್ಲಿ ತಾಯಿ-ಮಗನ ನಡುವೆ ವಾಗ್ವಾದ ಸಂಭವಿಸಿದೆ. ಆಕ್ರೋಶಗೊಂಡ ಉಮಾಶಂಕರ, ತಾಯಿಯ ತಲೆಗೆ ಕೈಯಿಂದ ಹೊಡೆದಿದ್ದಾನೆ. ಇದರಿಂದ ಗಂಗಮ್ಮ ನೆಲಕ್ಕುರುಳಿದ್ದು, ನಂತರ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದ ಎಂದು ಹೇಳಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಗಂಗಮ್ಮ ಅವರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಾ.30ರಂದು ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಈ ಕುರಿತು ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಹಾಸನ: ಇಲ್ಲಿನ ಹೇಮಾವತಿ ನಗರದ ಮನೆಯಲ್ಲಿದ್ದ 330 ಗ್ರಾಂ ಚಿನ್ನಾಭರಣ ಕಳವಾಗಿವೆ.

ಸಂಬಂಧಿಕರ ಮದುವೆ ಇದ್ದುದರಿಂದ ಧರಿಸಿಕೊಳ್ಳಲು ಶ್ವೇತಾ ಅವರು ಮಾ.15 ರಂದು ಅಡುಗೆ ಮನೆಯ ಕಾರ್ನರ್ ಹತ್ತಿರ ಇಟ್ಟಿದ್ದ ಒಡವೆಗಳನ್ನು ನೋಡಿದಾಗ, ಚಿನ್ನದ ಆಭರಣಗಳನ್ನಿಟ್ಟಿದ್ದ ಡಬ್ಬಿಯು ಕಾಣೆಯಾಗಿತ್ತು. ಒಟ್ಟು ₹33 ಲಕ್ಷ ಮೌಲ್ಯದ 330 ಗ್ರಾಂ ಚಿನ್ನಾಭರಣ ಕಳವಾಗಿದ್ದು, ನಗರದ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-36-15828199

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.