ಹಳೇಬೀಡು: ಇಲ್ಲಿನ ರಾಜನಶಿರಿಯೂರು ಹಾಗೂ ಆಸುಪಾಸಿನಲ್ಲಿ ಶನಿವಾರ ಬಿರುಗಾಳಿಯಿಂದ ಹಲವು ವಿದ್ಯುತ್ ಕಂಬ ಹಾಗೂ ಮರಗಳಿಗೆ ಹಾನಿಯಾಗಿದ್ದು, ಸುಮಾರು 10 ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ದಟ್ಟೈಸಿದ ಮೋಡಗಳು ಗಾಳಿಗೆ ಚದುರಿ ಹೋಗಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ರೈತರಲ್ಲಿ ಬೇಸರ ಮೂಡಿಸಿದೆ.

ರಾಜನಶಿರಿಯೂರಿನ ಹನಿಕೆ, ಚಿಕ್ಕಮಳೂರು ರಸ್ತೆಯಲ್ಲಿ ವಿದ್ಯುತ್ ಪರಿವರ್ತಕ ಜೋಡಿ ಕಂಬದೊಂದಿಗೆ ಬುಡಸಮೇತ ನೆಲಕ್ಕೆ ಬಿದ್ದಿದೆ. 27 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಫಸಲು ಬಿಡುತ್ತಿದ್ದ 30 ತೆಂಗಿನ ಮರಗಳು ಬುಡ ಸಮೇತ ಬಿದ್ದು ಹೋಗಿವೆ. ಕೆಲವು ಮರಗಳು ಗಾಳಿಯ ಹೊಡೆತಕ್ಕೆ ನುಜ್ಜುಗುಜ್ಜಾಗಿವೆ. ಹೊಂಬಾಳೆ, ಕಾಯಿ ಕಟ್ಟ ಬೇಕಾದ ಕುರುಬು, ಸೋಗೆಗಳು ಉದುರು ಹೋಗಿವೆ. ಇಂತಹ ಮರಗಳು ಫಸಲು ಕೊಡಲು ವರ್ಷಗಳೇ ಬೇಕಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡರು.

ಫಸಲು ಬಿಟ್ಟಿದ್ದ 4 ಮಾವಿನ ಮರಗಳು ಧರೆಗುರುಳಿವೆ. ಬಲಿತ ಮಾವಿನ ಕಾಯಿಗಳು ಉದುರಿ ಹೋಗಿವೆ. 5 ಹುಣಸೆ ಮರಗಳು ಬಿದ್ದು ಹೋಗಿವೆ. 10 ತೇಗ, 5 ಬೇವಿನ ಮರಗಳು ಸಹ ಬಿದ್ದು ಹೋಗಿವೆ. ಕಂದಾಯ ಇಲಾಖೆಯವರು ಮಹಜರ್ ನಡೆಸಿ ಸರ್ಕಾರದಿಂದ ಪರಿಹಾರ ಕೊಡಿಸಬೇಕು ಎಂದು ರೈತ ಕಲ್ಲೇಶಪ್ಪ ತಿಳಿಸಿದರು.

ಸುಮಾರು ಹತ್ತು ಎಕರೆ ಟೊಮೆಟೊ ಬೆಳೆ ನೆಲಕ್ಕೆ ಮುಗುಚಿದೆ. ಗಿಡಗಳನ್ನು ಎತ್ತಿಕಟ್ಟಲು ರೈತರು ಹರಸಾಹಸಪಟ್ಟ ದೃಶ್ಯ ಕಂಡು ಬಂತು.

ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ರೈತರು, ವಿದ್ಯುತ್ ಕಂಬಗಳನ್ನು ಸೆಸ್ಕ್ ಸಿಬ್ಬಂದಿ ತೆರವು ಮಾಡಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.

ಕಾರ್ಮಿಕರು ಪಾರು: ಗೌರಮ್ಮ ರಾಜಶೇಖರ್ ಅವರಿಗೆ ಸೇರಿದ ತೋಟದ ಮನೆಯ ಚಾವಣಿ ಬಿರುಗಾಳಿಗೆ ಹಾರಿ ಹೋಗಿದೆ. ಈ ವೇಳೆ 30 ಕಾರ್ಮಿಕರು ಮನೆಯಲ್ಲಿ ಆಶ್ರಯ ಪಡೆದಿದ್ದರು. ಚಾವಣಿ ದೂರಕ್ಕೆ ಹಾರಿ ಬಿದ್ದಿದ್ದರಿಂದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಬಂಡಿಲಕ್ಕನಕೊಪ್ಪಲು ಸುರೇಶ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-36-1760888926

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.