ಹಾಸನ: ಬೋಳುವಾರು ಮಹಮ್ಮದ್ ಕುಂಞಿ ಅವರ ಕಾದಂಬರಿ ‘ಸ್ವಾತಂತ್ರ್ಯದ ಓಟ’ ಆಧಾರಿತ ನಾಟಕ ಪ್ರದರ್ಶನ ಭಾನುವಾರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯಿತು.

ದೇಶ ವಿಭಜನೆಯ ನೋವು ಹಾಗೂ ಆ ನಂತರದ ಮಾನವೀಯ ಸಂಘರ್ಷಗಳನ್ನು ಬಹಳ ಸೂಕ್ಷ್ಮವಾಗಿ, ಜನಪರವಾಗಿ ನಾಟಕ ನಿರೂಪಿಸಿತು. ದೇಶ ವಿಭಜನೆಯ ಹಾಗೂ ಆ ನಂತರದ ಸಂಗತಿಗಳನ್ನು ತಿಳಿಸಿ ಕೊಡುವ ಈ ನಾಟಕಗಳು ವಿದ್ಯಾರ್ಥಿಗಳಿಗೆ ತಲುಪಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಲಾಹೋರಿನ ನಿವಾಸಿ ಚಾಂದ್ ಅಲಿ, ಒಂದು ಸಿಖ್ ಕುಟುಂಬಕ್ಕೆ ಸಂಬಂಧಪಟ್ಟ ಕುಲುಮೆಯಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ಆ ಸಿಖ್ ಕುಟುಂಬಕ್ಕೂ ಮುಸಲ್ಮಾನನಾದ ಚಾಂದ್ ಅಲಿಗೂ ಅನ್ಯೋನ್ಯ ಸಂಬಂಧವಿರುತ್ತದೆ. ಹಠಾತ್ತನೇ ದೇಶ ಇಬ್ಭಾಗವಾಗಿ ಹಿಂದೂಗಳು, ಸಿಖ್ಖರು ಪಾಕಿಸ್ತಾನದ ಬಿಟ್ಟು ಹೊರಡಬೇಕಾಗುತ್ತದೆ.

ಆ ಸಿಖ್ ಸಮುದಾಯದ ಇಬ್ಬರು ಹೆಣ್ಣುಮಕ್ಕಳನ್ನು ಹಿಂದೂ ನಿರಾಶ್ರಿತರ ಶಿಬಿರಕ್ಕೆ ಸುರಕ್ಷಿತವಾಗಿ ತಲುಪಿಸಲು ಹೋಗಿ ಚಾಂದ್ ಅಲಿ ಭಾರತವನ್ನು ಸೇರಿಕೊಳ್ಳುತ್ತಾನೆ. ಮತ್ತೆಂದೂ ತನ್ನೂರು ಲಾಹೋರಿಗೆ ಹೋಗಲು ಸಾಧ್ಯವಾಗದೇ ದಕ್ಷಿಣ ಭಾರತದ ಮುತ್ತುಪ್ಪಾಡಿ ಎಂಬ ಊರಿನಲ್ಲಿ ನೆಲೆ ನಿಲ್ಲುತ್ತಾನೆ. ಇದರ ಸುತ್ತ ಮಾನವೀಯ ಅಂತಃಕರಣ ಮಿಡಿಯುವ ಕಥಾ ಹಂದರ ಪ್ರೇಕ್ಷಕರ ಗಮನ ಸೆಳೆಯಿತು. ನಿರ್ದೇಶಕ ನಟರಾಜ್ ಹೊನ್ನವಳ್ಳಿ ಅವರು, ಕಾದಂಬರಿಗೆ ಎಲ್ಲಿಯೂ ಲೋಪ ಬರದಂತೆ ಪರಿಣಾಮಕಾರಿಯಾಗಿ ರಂಗಕ್ಕೆ ಅಳವಡಿಸಿದ್ದಾರೆ. ಭಾನುವಾರ ಸಂಜೆ 5.30 ಕ್ಕೆ ಆರಂಭವಾಗಿದ್ದು, ನಾಟಕವನ್ನು ನೋಡಲು ಬಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಮೂರೂವರೆ ಗಂಟೆಯ ನಾಟಕದಲ್ಲಿ ಮಧ್ಯೆ ಹತ್ತು ನಿಮಿಷಗಳ ವಿರಾಮವಿತ್ತು. ಆಗ ರಂಗಕರ್ಮಿ ಪ್ರಸಾದ್ ರಕ್ಷಿದಿ ನಾಟಕದ ಕುರಿತಾಗಿ ಮಾತನಾಡಿ, ಇದೊಂದು ಆಧುನಿಕ ಮಹಾಭಾರತ ಎಂದು ಲಕ್ಷೀಶ ತೊಳ್ಪಾಡಿಯವರ ಮಾತನ್ನು ನೆನಪಿಸಿಕೊಂಡರು.

ಮಹಾನಗರ ಪಾಲಿಕೆಯ ಎಂಜಿನಿಯರ್ ಕವಿತಾ ಕೆ.ಆರ್. ಮಾತನಾಡಿ, ಸಾಮಾಜಿಕ ಜಾಲತಾಣಗಳನ್ನು ಕಡಿಮೆ ಮಾಡಿದರೆ ಇಂತಹ ಒಳ್ಳೆಯ ಅಭಿರುಚಿ ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಸರ್ಕಾರಿ ನೌಕರರ ಸಂಘದ ಶ್ರೀನಿವಾಸ್ ಮಾತನಾಡಿ ಉತ್ತಮ ನಾಟಕ ಪ್ರದರ್ಶನ ಪ್ರಶಂಸನೀಯ ದರು. ಕಸಾಪ ಜಿಲ್ಲಾ ಘಟಕದ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ದೇಶದ ಇತಿಹಾಸ ತಿಳಿಯಲು ಇಂತಹ ನಾಟಕ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ವಿಜಯ ಶಾಲೆಯ ತಾರಾ ಸುಬ್ಬಸ್ವಾಮಿ ಮಾತನಾಡಿ, ನಾಟಕ ಆಯೋಜನೆ ಮಾಡಿದ ಚಲಂ ಹಾಡ್ಲಹಳ್ಳಿ, ಶಾಡ್ರಾಕ್, ಪೂಜಾ ರಘುನಂದನ್ ಹಾಗು ಚಿನ್ನೇನಹಳ್ಳಿ ಸ್ವಾಮಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-36-1138176673

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.