ಹಾಸನ: ಮಧ್ಯ ಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧಗಳಿಂದ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದು, ಯುದ್ಧ ತಕ್ಷಣ ನಿಲ್ಲಬೇಕು ಹಾಗೂ ವಿಶ್ವದಲ್ಲಿ ಶಾಂತಿ ನೆಲೆಸಬೇಕು ಎಂಬ ಸಂದೇಶದೊಂದಿಗೆ ಹಾಸನದ ರೋಟರಿ ರಾಯಲ್ಸ್ ತಂಡ ಶನಿವಾರ ನಗರದಲ್ಲಿ ವಿಶಿಷ್ಟ ಜೀಪ್ ಜಾಥಾ ಆರಂಭಿಸಿತು.

ಜಾಥಾ 200 ಕಿ.ಮೀ. ವ್ಯಾಪ್ತಿಯಲ್ಲಿ ಸಾಗಲಿದ್ದು, 12 ಜೀಪ್ಗಳಲ್ಲಿ 30ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದಾರೆ. ಜಾಥಾ ವೇಳೆ ಯುದ್ಧದ ಭೀಕರ ಪರಿಣಾಮಗಳು, ಮಾನವಕುಲಕ್ಕೆ ಉಂಟಾಗುವ ಅಪಾಯಗಳು ಹಾಗೂ ಪರಿಸರದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಫಲಕಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಪಾಲಾಕ್ಷ, ಯುದ್ಧವು ಕೇವಲ ದೇಶಗಳ ನಡುವಿನ ಸಂಘರ್ಷವಲ್ಲ. ಅದು ಜೀವ ಸಂಕುಲದ ನಾಶಕ್ಕೆ ಕಾರಣವಾಗುವ ದುರಂತ. ಪ್ರಕೃತಿ ಸಂಪತ್ತು ಹಾನಿಯಾಗುವುದು, ಪರಿಸರ ಸಮತೋಲನ ಹದಗೆಡುವುದು ಹಾಗೂ ಮಾನವ ಜೀವನ ಸಂಕಷ್ಟಕ್ಕೆ ಸಿಲುಕುವುದು ಸೇರಿದಂತೆ ಅನೇಕ ಅನಾಹುತಗಳಿಗೆ ಯುದ್ಧ ಕಾರಣವಾಗುತ್ತದೆ ಎಂದು ತಿಳಿಸಿದರು.

ಸಹಾಯಕ ಗವರ್ನರ್ ಎ.ಜಿ. ಮಂಜುನಾಥ್ ಮಾತನಾಡಿ, ಪ್ರತಿ ವರ್ಷ ವಿಭಿನ್ನ ಸಾಮಾಜಿಕ ವಿಷಯಗಳ ಆಧಾರದ ಮೇಲೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ರೋಟರಿ ರಾಯಲ್ಸ್ ತಂಡ, ಈ ಬಾರಿ ಯುದ್ಧ ವಿರೋಧಿ ಸಂದೇಶವನ್ನು ಆಯ್ಕೆ ಮಾಡಿಕೊಂಡಿದೆ. ಯುದ್ಧ ಬೇಡ, ಶಾಂತಿ ಬೇಕು ಎಂಬ ಘೋಷಣೆಯೊಂದಿಗೆ ಈ ಜಾಥಾ ನಡೆಸಲಾಗುತ್ತಿದೆ ಎಂದರು.

ರೋಟರಿ ಹಿರಿಯ ಸದಸ್ಯ ಮೋಹನ್ ಮಾತನಾಡಿ, ಈ ಜೀಪ್ ಜಾಥಾ ಮೂಲಕ ಸಮಾಜದಲ್ಲಿ ಶಾಂತಿ, ಸಹಕಾರ ಹಾಗೂ ಮಾನವೀಯತೆ ಮೌಲ್ಯಗಳನ್ನು ಬಲಪಡಿಸುವ ಉದ್ದೇಶ ಹೊಂದಿದ್ದು, ಯುದ್ಧದಿಂದ ಉಂಟಾಗುವ ಅನಾಹುತಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ ಎಂದರು.

ಜಾಥಾದಲ್ಲಿ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಅಧ್ಯಕ್ಷ ಗಂಗಾಧರ್, ಸೇನಾನಿ ಮಮತಾ ಪಾಟೀಲ್, ಹರ್ಷ, ಯೋಗೇಶ್, ಸಚ್ಚಿನ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-36-925344781

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.