ಹಾಸನ: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ 94ನೇ ಜನ್ಮದಿನವನ್ನು ಜೆಡಿಎಸ್ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಗರದ ವಿವಿಧ ಭಾಗಗಳಲ್ಲಿ ಜಮಾಯಿಸಿ ಸಂಭ್ರಮಿಸಿದರು.

ನಗರದ ನೀರುಬಾಗಿಲಿನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅರ್ಚನೆ ನೆರವೇರಿಸಲಾಯಿತು. ಬಳಿಕ ಆಜಾದ್ ರಸ್ತೆಯಲ್ಲಿರುವ ಹಜರತ್ ಗುಜರಾತಿ ಬಾದ್ ಷಾ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

30 ಅಡಿ ಕಟೌಟ್ಗೆ ಕ್ಷೀರಾಭಿಷೇಕ: ನಂತರ ನಗರದ ಎನ್.ಆರ್ ವೃತ್ತದಲ್ಲಿ ಅಳವಡಿಸಲಾಗಿದ್ದ ದೇವೇಗೌಡರ 30 ಅಡಿ ಎತ್ತರದ ಕಟೌಟ್ಗೆ ಕ್ಷೀರಾಭಿಷೇಕ ಹಾಗೂ ಪುಷ್ಪಾಭಿಷೇಕ ನೆರವೇರಿಸಲಾಯಿತು. ಶಾಸಕ ಎಚ್.ಪಿ. ಸ್ವರೂಪ್, ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ ಭಾಗವಹಿಸಿದ್ದರು.

ಕಟೌಟ್ಗೆ ಹಾಲಿನ ಅಭಿಷೇಕ ಮಾಡುವ ವೇಳೆ ಕಾರ್ಯಕರ್ತರು, ದೇವೇಗೌಡರಿಗೆ ಜಯವಾಗಲಿ, ರೈತರ ನಾಯಕ ದೇವೇಗೌಡ ಎಂಬ ಘೋಷಣೆ ಕೂಗಿ ಸಂಭ್ರಮಿಸಿದರು.

ಬಳಿಕ ಜೆಡಿಎಸ್ ಮುಖಂಡರು ಗವೇನಹಳ್ಳಿ ಸಮೀಪದ ಕಾಮಧೇನು ಸಹಕಾರಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಕೇಕ್ ಕತ್ತರಿಸುವ ಮೂಲಕ ದೇವೇಗೌಡರ ಜನ್ಮದಿನ ಆಚರಿಸಿದರು. ವೃದ್ಧಾಶ್ರಮದಲ್ಲಿದ್ದ ಹಿರಿಯ ನಾಗರಿಕರಿಗೆ ಹಣ್ಣು-ಹಂಪಲು ಹಾಗೂ ಸಿಹಿ ವಿತರಿಸಿ ಆಶೀರ್ವಾದ ಪಡೆದರು. ದೇವೇಗೌಡರು ಸದಾ ಬಡವರು, ರೈತರು ಹಾಗೂ ಹಿರಿಯ ನಾಗರಿಕರ ಪರ ಕೆಲಸ ಮಾಡಿದ ನಾಯಕ ಎಂದು ಮುಖಂಡರು ಸ್ಮರಿಸಿದರು.

ಜೆಡಿಎಸ್ ಆಲೂರು ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ಬಿ.ಆರ್. ಸತ್ಯನಾರಾಯಣ್, ವಕೀಲ ಕೆ.ಆರ್. ಇಂದ್ರಕುಮಾರ್, ಶೇಷಾದ್ರಿ, ಪೂರ್ಣಚಂದ್ರ, ಸುಬ್ಬೇಗೌಡ, ಧರಣಿ, ಯತೀಶ್, ಲೋಕೇಶ್, ಮಾಧ್ಯಮ ವಕ್ತಾರ ಹೊಂಗೆರೆ ರಘು, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್, ಗಿರೀಶ್ ಚನ್ನವೀರಪ್ಪ, ಬಿದರಿಕೆರೆ ಜಯರಾಂ, ಮಹಂತೇಶ್, ಅಕ್ಮಲ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜು, ದುದ್ದ ಲಕ್ಷ್ಮಣ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್, ಸ್ವಾಮಿಗೌಡ, ಸಮೀರ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.

ಬಾಗೂರು (ನುಗ್ಗೇಹಳ್ಳಿ) ವರದಿ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ 94ನೇ ಹುಟ್ಟುಹಬ್ಬ ಅಂಗವಾಗಿ ಗ್ರಾಮದ ಗ್ರಾಮ ದೇವತೆ ಸಂತೆಕಾಳೇಶ್ವರಿ ಚಿಕ್ಕಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ಎಪಿಎಂಸಿ ಮಾಜಿ ಅಧ್ಯಕ್ಷ ಬಿಎಚ್ ಶಿವಣ್ಣ ಮಾತನಾಡಿ, ಮುಂಬರುವ ದಿನಗಳಲ್ಲಿ ಎನ್ ಡಿ ಎ ಮೈತ್ರಿಕೂಟದ ವತಿಯಿಂದ ಅವರನ್ನು ಮತ್ತೊಮ್ಮೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಜೆಡಿಎಸ್ ಕಾರ್ಯಕರ್ತರು ಮುಖಂಡರು ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಎಚ್ ಡಿ ದೇವೇಗೌಡರ ಪರ ಜೈಕಾರ ಕೂಗಿದರು. ಮುಖಂಡರಾದ ಓಬಳಾಪುರ ಬಸವರಾಜ್, ಬಾಗೂರು ಮನು, ಮಲ್ಲೇಶ್, ಎಲ್ಐಸಿ ಕಾಂತರಾಜ್, ಲಕ್ಷ್ಮಣ್, ಹರೀಶ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-36-653543318

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.