ಭಾನುವಾರ, ಜೂನ್ 26, 2022
23 °C
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ಪಠ್ಯದಲ್ಲಿ ಬದಲಾವಣೆ: ಸತ್ಯಾಂಶ ತಿರುಚುವ ಕೆಲಸ– ಎಚ್.ಡಿ.ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಶಿಕ್ಷಣ ಕ್ಷೇತ್ರದಲ್ಲಿ ಹಲವು ರೀತಿಯ ಗೊಂದಲ, ಸಂಘರ್ಷಗಳನ್ನು ಉಂಟು ಮಾಡುವ ಕೆಲಸ ಆರಂಭವಾಗಿರುವುದು ಒಳ್ಳೆಯ ಬೆಳವಣಿಗೆ ‌ಅಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.‌

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರಂಭಿಕ ಹಂತದಲ್ಲಿ ಕರಾವಳಿ ಭಾಗದಲ್ಲಿ ಹಿಜಾಬ್ ಸಂಘರ್ಷ ಆರಂಭವಾಯಿತು. ಈಗ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಸಮಾಜದಲ್ಲಿ ಒಂದು ರೀತಿಯ ಭಾವೈಕ್ಯತೆ ಹಾಳಾಗುವ ಸನ್ನಿವೇಶವನ್ನು ಸರ್ಕಾರ ಹುಟ್ಟು ಹಾಕಿದೆ’ ಎಂದು ದೂರಿದರು.

‘ಪಠ್ಯ ಪುಸ್ತಕಗಳಲ್ಲಿ ಕೆಲವರ ವಿಷಯಗಳನ್ನು ವೈಭವೀಕರಿಸಲಾಗುತ್ತಿದೆ. ಹಲವಾರು ಮಹನೀಯರ ಸಂಗತಿಗಳನ್ನು ಕೈ ಬಿಡಲಾಗುತ್ತಿದೆ. ಸತ್ಯಾಂಶವನ್ನು ತಿರುಚುವ ಮೂಲಕ ಶಾಲಾ ಪಠ್ಯ ಪುಸ್ತಕದಲ್ಲಿ ಬದಲಾವಣೆ ತರಲು ಹೊರಟಿದ್ದಾರೆ’ ಎಂದು ಕಿಡಿ ಕಾರಿದರು.

‘ರಾಜಕಾರಣ, ಹಿಡನ್ ಅಜೆಂಡಾಗಳಿಂದ, ಶಿಕ್ಷಣ ಕ್ಷೇತ್ರ ಕಲುಷಿತಗೊಳಿಸಬೇಡಿ ಎಂದು ಸರ್ಕಾರಕ್ಕೆ, ಶಿಕ್ಷಣ ಸಚಿವರಿಗೆ ಮನವಿ ಮಾಡುತ್ತೇನೆ. ರಾಜಕಾರಣಿಗಳು, ಸರ್ಕಾರಗಳು ಮಕ್ಕಳ ಜ್ಞಾನವನ್ನು ಉತ್ತಮವಾದ ಕಡೆ ತೆಗೆದುಕೊಂಡು ಹೋಗುತ್ತಿಲ್ಲ. ಮಕ್ಕಳ ಬದುಕು, ನಡವಳಿಕೆ, ಶಿಸ್ತಿನ ಮೇಲೆ ಪರಿಣಾಮ, ದುಷ್ಪರಿಣಾಮ ಬೀರುವ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆತಂಕಗಳು ಪೋಷಕರಲ್ಲಿ ಬರಬಾರದು’ ಎಂದರು.

ಸಾಹಿತಿ ದೇವನೂರು ಮಹದೇವ ಅವರು ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ‘ಅದು ಅವರ ವೈಯಕ್ತಿಕ ವಿಚಾರ. ಅವರ ಭಾವನೆಗಳನ್ನು ಯಾವುದಕ್ಕೂ ಉಪಯೋಗ ಮಾಡಿಕೊಳ್ಳಬಾರದೆಂದು ಯಾರಾದರೂ ಲೇಖಕರು ಹೇಳಿದ್ದರೆ ಅದನ್ನು ಗೌರವಿಸಬೇಕು’ ಎಂದು ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು