ಸೋಮವಾರ, ಮೇ 23, 2022
30 °C
ವಿವಿಧೆಡೆ ಧಾರಾಕಾರ ಮಳೆ

ಬಾಣಾವರದಲ್ಲಿ ಆಲಿಕಲ್ಲು ಸಹಿತ ಜೋರು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರ ಸೇರಿದಂತೆ ವಿವಿಧೆಡೆ ಬುಧವಾರ ಸಂಜೆ ಗುಡುಗು, ಸಿಡಿಲು, ಮಿಂಚು ಸಹಿತ ಜೋರು ಮಳೆಯಾಗಿದೆ.

ನಗರದಲ್ಲಿ ಸುಮಾರು 4 ಗಂಟೆಗೆ ಆರಂಭವಾದ ಮಳೆ ಒಂದು ತಾಸು ಸುರಿಯಿತು.

ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ರಸ್ತೆಬದಿ ವ್ಯಾಪಾರಿಗಳಿಗೂ ತೊಂದರೆ ಅನುಭವಿಸಿದರು.

 ಸ್ವಲ್ಪ ಬಿಡುವು ನೀಡಿ ರಾತ್ರಿ 7 ಗಂಟೆಗೆ ಜಿಟಿಜಿಟಿ ಮಳೆಯಾಯಿತು. ಪಾದಚಾರಿಗಳು ದ್ವಿಚಕ್ರ ವಾಹನ ಸವಾರರು ರಕ್ಷಣೆಗೆ ಪರದಾಡಿದರು.

ವಿವಿಧೆಡೆ ಮಧ್ಯಾಹ್ನ ಮೋಡ ಕವಿದ ವಾತಾವರಣ ಇತ್ತು. ಹೆತ್ತೂರು ಭಾಗದಲ್ಲಿ ಮಳೆ ಆರ್ಭಟಕ್ಕೆ ಚರಂಡಿಗಳು ಉಕ್ಕಿ ಹರಿದವು. ಗುಡುಗು, ಸಿಡಿಲಿನ ಆರ್ಭಟ ಜೋರಾಗಿತ್ತು. ಜೋರು ಗಾಳಿಗೆ ಕೆಲವೆಡೆ ಮರದ ರೆಂಬೆಗಳು ಮುರಿದು ಬಿದ್ದಿವೆ.

ಬೇಲೂರು, ಅರಸೀಕೆರೆ ಹಳೇಬೀಡು, ಹೊಳೆನರಸೀಪುರದಲ್ಲಿ ಅರ್ಧ ತಾಸು ರಭಸದ ಮಳೆಯಾದರೆ, ಶ್ರವಣಬೆಳಗೊಳ, ಕೊಣನೂರು, ನುಗ್ಗೇಹಳ್ಳಿಯ ಹಿರೀಸಾವೆಯಲ್ಲೂ ಉತ್ತಮ ಮಳೆಯಾಗಿದೆ. ಬಾಣಾವರದಲ್ಲಿ ಆಲಿಕಲ್ಲು ಸಹಿತ ಜೋರು ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು