ಹೆಲ್ಮೆಟ್‌ ಜಾಗೃತಿಗೆ ಬಂದ ಯಮ ವೇಷಧಾರಿ

7

ಹೆಲ್ಮೆಟ್‌ ಜಾಗೃತಿಗೆ ಬಂದ ಯಮ ವೇಷಧಾರಿ

Published:
Updated:
Deccan Herald

ಹಾಸನ : ‘ಹೆಲ್ಮೆಟ್‌ ಧರಿಸಿ, ಇಲ್ಲವಾದರೆ ನನ್ನ ಜತೆ ಬನ್ನಿ’. ಹೀಗೆ ಹೇಳಿದ್ದು ಯಮಧರ್ಮರಾಯನ ವೇಷಧಾರಿ.

ವಾಹನ ಸವಾರರಿಗೆ ಹೆಲ್ಮೆಟ್‌ ಕುರಿತು ಅರಿವು ಮೂಡಿಸಲು ರೋಟರಿ ಮಿಡ್ ಟೌನ್, ರೋಟ್ರ್ಯಾಕ್ಟ್ ಕ್ಲಬ್ ಹಾಗೂ ರಾಜೀವ್ ಪಾಲಿಟೆಕ್ನಿಕ್ ಆಶ್ರಯದಲ್ಲಿ ಕೈಗೊಂಡಿರುವ ಹೊಸ ಮಾರ್ಗ.

ನಗರದ ಎನ್.ಆರ್. ವೃತ್ತ, ಹೇಮಾವತಿ ಪ್ರತಿಮೆ ವೃತ್ತದಲ್ಲಿ ಯಮಧರ್ಮರಾಯನ ವೇಷಧಾರಿ ಒಂದು ಕೈಯಲ್ಲಿ ಗದೆ ಹಿಡಿದು, ಮತ್ತೊಂದರಲ್ಲಿ ಹೆಲ್ಮೆಟ್‌ ಹಿಡಿದು ದ್ವಿಚಕ್ರ ವಾಹನ ಸವಾರರ ಬಳಿ ತೆರಳಿ ‘ಹೆಲ್ಮೆಟ್‌ ಧರಿಸಿ, ಇಲ್ಲವಾದರೆ ನನ್ನ ಜತೆ ಬನ್ನಿ’ ಎನ್ನುತ್ತಾ ಹೆಲ್ಮೆಟ್‌ ಪ್ರಾಮುಖ್ಯತೆ ತಿಳಿಸಿದರು.

ಈ ದೃಶ್ಯವನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು. ರಸ್ತೆ ಸುರಕ್ಷತೆ ಬಗ್ಗೆ ಕಾಲೇಜು ವಿದ್ಯಾರ್ಥಿಗಳು ಕಿರು ನಾಟಕ ಪ್ರದರ್ಶಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ಜಾಥ ನಡೆಸಿದರು. 

 

Tags: 

ಬರಹ ಇಷ್ಟವಾಯಿತೆ?

  • 0

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !