ಹೆತ್ತೂರು: ಮಲೆನಾಡಿನ ಸಂಸ್ಕೃತಿಯಲ್ಲಿ ಸುಗ್ಗಿ ಹಬ್ಬವು ಕೇವಲ ಆಚರಣೆ ಮಾತ್ರವಲ್ಲ, ಅದು ನಮ್ಮ ಪರಂಪರೆ ಹಾಗೂ ಅಸ್ತಿತ್ವದ ಪ್ರತೀಕವಾಗಿದೆ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನದ ಸಮಿತಿ ಅಧ್ಯಕ್ಷ ಮುರುಳಿ ಮೋಹನ್ ಹೇಳಿದರು.

ಸಮೀಪದ ಕರಡಿಗಾಲ ಗ್ರಾಮದಲ್ಲಿ ದೇವಿರಮ್ಮ ಕ್ರೀಡಾ ಸಮಿತಿಯ ವತಿಯಿಂದ ದೇವಿರಮ್ಮನವರ ಸುಗ್ಗಿ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ, ಮಹಿಳೆಯರ ಥ್ರೋಬಾಲ್ ಹಾಗೂ 16 ವರ್ಷದೊಳಗಿನ ಬಾಲಕರ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ನಮ್ಮ ಊರಿನ ಯುವಕರು ಸುಗ್ಗಿಯಂತಹ ಸಂದರ್ಭದಲ್ಲಿ ಸ್ವಗ್ರಾಮಕ್ಕೆ ಮರಳಿ ಒಂದೇ ವೇದಿಕೆಯಲ್ಲಿ ಸೇರುವುದರಿಂದ, ತಮ್ಮ ಬೇರುಗಳನ್ನು ಮತ್ತೆ ಅರಿತುಕೊಳ್ಳುವ ಅವಕಾಶ ಸಿಗುತ್ತದೆ. ಈ ಹಬ್ಬವು ನಮ್ಮೊಳಗಿನ ಬಾಂಧವ್ಯವನ್ನು ಗಟ್ಟಿಗೊಳಿಸಿ ‘ನಮ್ಮ ಊರು – ನಮ್ಮ ಮನೆ’ ಎಂಬ ಹೆಮ್ಮೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು.

ಥ್ರೋಬಾಲ್ ಟೂರ್ನಿ ಮಧ್ಯಾಹ್ನ 2.30ಕ್ಕೆ, 16 ವರ್ಷದೊಳಗಿನ ಬಾಲಕರ ಕಬಡ್ಡಿ ಪಂದ್ಯಗಳು ಸಂಜೆ 4ಕ್ಕೆ ಹಾಗೂ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಗಳು ಸಂಜೆ 6 ಗಂಟೆಯಿಂದ ಆರಂಭಗೊಂಡು ರಾತ್ರಿ 11 ಗಂಟೆಯವರೆಗೆ ನಡೆದವು.

ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಪಿ. ಕೃಷ್ಣೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಭಾಗ್ಯಮ್ಮ, ಆನಂದ್, ಸುದರ್ಶನ್, ಮಾಜಿ ಸೈನಿಕರಾದ ಧರ್ಮರಾಜು, ಹರೀಶ್ ಕರಡಿಗಾಲ, ಗ್ರಾಮಸ್ಥರಾದ ಸುರೇಶ್, ರವಿ ಕೀರ್ತಿ, ಗಿರೀಶ್ ಗೌಡ, ಚಂದ್ರೆಗೌಡ, ಟಿಎಟಿಎಂಸಿ ನಾಮನಿರ್ದೇಶಿತ ಸದಸ್ಯ ಕೆ.ಡಿ. ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-36-1944248454

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.