ಹಿಂಬಾಗಿಲ ರಾಜಕಾರಣ ಬೇಡ: ಪ್ರೀತಂ

7

ಹಿಂಬಾಗಿಲ ರಾಜಕಾರಣ ಬೇಡ: ಪ್ರೀತಂ

Published:
Updated:
Deccan Herald

ಹಾಸನ: ‘ನಗರಸಭೆ ಚುನಾವಣೆಯಲ್ಲಿ 19 ಸ್ಥಾನ ಗೆಲ್ಲುತ್ತೇವೆ ಎಂಬ ನಿರೀಕ್ಷೆ ಇತ್ತು. ಈ ಫಲಿತಾಂಶ ವೈಯಕ್ತಿಕವಾಗಿ ಸಂತೋಷ ನೀಡಿಲ್ಲ’ ಎಂದು ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಗರಸಭೆಯಲ್ಲಿ ಅತಂತ್ರ ಪರಿಸ್ಥಿತಿ ಇದೆ. 25 ರಿಂದ 50 ಮತಗಳ ಅಂತರದಲ್ಲಿ 4 ಸ್ಥಾನ ಕಳೆದುಕೊಂಡಿದ್ದೇವೆ. ಉತ್ತಮ ಸ್ಪರ್ಧೆ ನೀಡುವ ಮೂಲಕ 13 ಸ್ಥಾನ ಪಡೆದಿದ್ದೇವೆ. ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಹಿಂಬಾಗಿಲ ರಾಜಕಾರಣ ಬೇಡ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ಇಲ್ಲಿಯೂ ಜೆಡಿಎಸ್‌ ಅಧಿಕಾರ ಗದ್ದುಗೇರಬಹುದು. ನಗರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೈ ಜೋಡಿಸಲಾಗುವುದು’ ಎಂದು ತಿಳಿಸಿದರು.

‘ಜನರು ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಆಯ್ಕೆಯಾಗಿದ್ದಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅಭಿವೃದ್ಧಿಗೆ ಸಹಕರಿಸಲಾಗುವುದು’ ಎಂದು ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !