ಹಿರೀಸಾವೆ: ಇಲ್ಲಿನ ಗ್ರಾಮ ದೇವತೆ ಚೌಡೇಶ್ವರಿ ದೇವತೆಗೆ ‘ನಮ್ಮ ಊರು ಹಬ್ಬ’ದ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ಏ.1ರಂದು ದೇವಿಯ ರಥೋತ್ಸವ ಮಧ್ಯಾಹ್ನ 1.30ಕ್ಕೆ ನಡೆಯಲಿದೆ.

ಗ್ರಾಮದ ಹೊರಗೆ, ಕೆರೆ ಏರಿಯಲ್ಲಿ ಇರುವ ದೇವರ ಮೂಲ ಸ್ಥಾನದಲ್ಲಿ, ದೇವಿಯ ಭಕ್ತರು ಮತ್ತು ಹಿರೀಸಾವೆಯ ದೊಡ್ಡ ಮನೆತನದವರು ಹಲವು ಪೂಜೆಗಳನ್ನು ಏರ್ಪಡಿಸಿದ್ದರು. ದೇವರ ಮನೆತನದವರು ದೇವಸ್ಥಾನದ ಆವರಣದಲ್ಲಿ ಮಡೆಯನ್ನು ತಯಾರಿಸಿದರು. ಗ್ರಾಮಸ್ಥರು ಮಂಗಳವಾರ ರಥಕ್ಕೆ ಕಳಸ ಹಾಕುವ ಮೂಲಕ ರಥೋತ್ಸವಕ್ಕೆ ಎಲ್ಲ ಸಿದ್ದತೆಗಳನ್ನು ಪೂರ್ಣಗೊಳಿಸಿದರು. ದೇವಿಯ ರಥೋತ್ಸವಕ್ಕೆ ಗ್ರಾಮದ ತುಂಬ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ರಾಜ್ಯದ ನಾನಾ ಭಾಗಗಳ ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆದರು. ಭಾನುವಾರ ಮತ್ತ ಸೋಮವಾರ ದೇವಿಯ ಚಿಕ್ಕ ರಥೋತ್ಸವ ನಡೆಯಿತು. ರಂಗ ಕುಣಿತ ಸ್ಪರ್ಧೆ: ಜಾಗರಣೆ ಪ್ರಯುಕ್ತ ಜನಪದ ಕಲೆಯಾದ ರಂಗ ಕುಣಿತ ಸ್ಪರ್ಧೆ ಏರ್ಪಡಿಸಿದ್ದು, ನಾಗಮಂಗಲ, ತುರುವೇಕೆರೆ, ಪಾಂಡವಪುರ ಮತ್ತು ಚನ್ನರಾಯುಪಟ್ಟಣ ತಾಲ್ಲೂಕುಗಳ ವಿವಿಧ ಹಳ್ಳಿಯ ರಂಗ ಕುಣಿಯುವ ತಂಡಗಳು ತಮ್ಮ ಗ್ರಾಮಗಳ ರಂಗ ಕುಣಿತ ಶೈಲಿಯನ್ನು ಪ್ರದರ್ಶಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-36-1750577162

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.