ಹಿರೀಸಾವೆ: ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಕನ್ನಡದ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು ಎಂದು ಕಸಾಪ ಹೋಬಳಿಯ ಘಟಕದ ಅಧ್ಯಕ್ಷ ಎಚ್.ಎ. ಪ್ರಮೋದ್ ಭಾನುವಾರ ತಿಳಿಸಿದರು.

ಪರಿಷತ್ತಿನ ಹೋಬಳಿ ಘಟಕದ ಪದಾಧಿಕಾರಿಗಳು ಸಭೆಯಲ್ಲಿ ಅವರು ಮಾತನಾಡಿ, ಆದಿಚುಂಚನಗಿರಿ ಹಾಸನ ಮಠದ ಕಾರ್ಯದರ್ಶಿಗಳಾದ ಶಂಭುನಾಥ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ, ಕಬ್ಬಳಿಯ ಶ್ರೀಬಸವೇಶ್ವರ ಸ್ವಾಮಿ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.

2026-27ನೇ ಸಾಲಿನ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಹಿರೀಸಾವೆ ಹೋಬಳಿಯಲ್ಲಿನ ಸರ್ಕಾರಿ ಹಾಗೂ ಖಾಸಗಿ ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ 20 ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು. ಕನ್ನಡ ಭಾಷೆ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಿ, ಮಾತೃ ಭಾಷೆಯಲ್ಲಿ ಉನ್ನತ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುವಂತೆ ಪ್ರೋತ್ಸಾಹಿಸುವುದು ಕಸಾಪದ ಆಶಯ ಎಂದರು.

ಸಭೆಯಲ್ಲಿ ಮಾಜಿ ಅಧ್ಯಕ್ಷ ಡಾ. ಎಚ್.ಪಿ.ಶಂಕರ್, ಪದಾಧಿಕಾರಿಗಳಾದ ಎಚ್.ಸಿ. ತಮ್ಮಣ್ಣಗೌಡ, ಬೆಳಗೀಹಳ್ಳಿ ಗೋವಿಂದಯ್ಯ, ಜಿ.ವಿ. ಗೋವಿಂದರಾಜ್, ಮಾರುತಿ ಮಂಜುನಾಥ್, ಸೊಸೈಟಿ ಹರೀಶ್, ಮಾದಲಗೆರೆ ನಂಜೇಗೌಡ, ಎಚ್.ಜಿ. ಬೋರೇಗೌಡ, ಪುರುಷೋತ್ತಮ್, ದಾಸರಹಳ್ಳಿ ಕುಮಾರ್, ಜಿನ್ನೇನಹಳ್ಳಿ ಮಂಜಣ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-36-547992636

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.