ಭಾನುವಾರ, ಡಿಸೆಂಬರ್ 5, 2021
27 °C
ಕಸಾಪ ಜಿಲ್ಲಾ ನೂತನ ಅಧ್ಯಕ್ಷ ಎಚ್‌.ಎಲ್‌. ಮಲ್ಲೇಶಗೌಡ

‘ಹೋಬಳಿವಾರು ಕನ್ನಡ ಭವನ ನಿರ್ಮಾಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಜಿಲ್ಲೆಯ ಇತಿಹಾಸ, ಹಿರಿಮೆ ಸಾರುವ ಹೊಯ್ಸಳ ಹಾಗೂ ಹಲ್ಮಿಡಿ ಮಹೋತ್ಸವ ನಡೆ ಯುವ ಅಗತ್ಯತೆ ಹೆಚ್ಚಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಎಚ್‌.ಎಲ್‌. ಮಲ್ಲೇಶಗೌಡ ಹೇಳಿದರು.

ಹೋಬಳಿಯಲ್ಲಿ ಕನಿಷ್ಠ 500ಕ್ಕೆ ಸದಸ್ಯರ ಸಂಖ್ಯೆ ಏರಿಕೆಯಾದರೆ ಅಲ್ಲಿಯೇ ಬೂತ್‌ ಸ್ಥಾಪನೆ ಮಾಡಬಹುದು. ಇದರಿಂದ ಮತದಾನವೂ ಸುಲಭವಾಗಿ ನಡೆಯುತ್ತದೆ. ಶಿಕ್ಷಕರು, ಸಾಹಿತ್ಯ ಚಟುವಟಿಕೆ ಆಸಕ್ತಿ ಇರುವರು, ಕನ್ನಡ ಬಗ್ಗೆ ಪ್ರೀತಿ ಅಭಿಮಾನ, ಅಕ್ಷರಸ್ಥರು, ಅನಕ್ಷರಸ್ಥರು ಪರಿಷತ್‌ ಸದಸ್ಯರಾಗಬಹುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೋಬಳಿಗಳಲ್ಲಿ ಕನ್ನಡ ಭವನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗು ವುದು. ಅದಕ್ಕಾಗಿ ನಿವೇಶನ ಸಿದ್ಧಪಡಿ ಸಬೇಕು, ನಿವೇಶನದ ತಕರಾರು ಮೊದಲು ಬಗೆಹರಿಸಿಕೊಳ್ಳಬೇಕು. ಆ ಕಾರಣ ಕ್ಕಾಗಿಯೇ ಈ ಹಿಂದೆ ಬಂದಿದ್ದ ಅನು ದಾನವೂ ವಾಪಸ್‌ ಹೋಗಿದೆ ಎಂದರು. 

ಕನ್ನಡ ಸಾಹಿತ್ಯ ಪರಿಷತ್‌ ಸಮಿತಿ ಬೈಲಾದಲ್ಲಿ ಇಲ್ಲದ ಹುದ್ದೆಗಳಿಗೆ ಅವಕಾಶವಿಲ್ಲ. ಚುನಾವಣೆ ಸಂದರ್ಭದಲ್ಲಿಯೂ ಯಾರಿಗೂ ಭರವಸೆ ನೀಡಿಲ್ಲ. ನನ್ನ ವಿರುದ್ಧ ಪ್ರಚಾರ ಮಾಡಿದ್ದರೂ ಸೂಕ್ತ ವ್ಯಕ್ತಿ ಇದ್ದರೆ, ಹಿರಿಯರ ಅಭಿಪ್ರಾಯದಂತೆ ಸ್ಥಾನ ನೀಡಲಾಗುವುದು. ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಾರ, ತುರಾಯಿ, ಶಾಲು, ಹೂಗುಚ್ಛಗಳನ್ನು ನೀಡಿ ಅಭಿನಂದಿಸುವ ಬದಲು ಕನ್ನಡ ಪುಸ್ತಕಗಳನ್ನು ನೀಡಬಹುದು. ಸಂಗ್ರಹವಾಗುವ ಪುಸ್ತಕಗಳನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನದ ಮೊದಲ ಮಹಡಿ ಯಲ್ಲಿರುವ ಗ್ರಂಥಾಲಯದಲ್ಲಿ ಇರಿಸಿ, ಸಾರ್ವಜನಿಕರ ಬಳಕೆಗೆ ಲಭ್ಯವಾಗು ವಂತೆ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಾನಪದ ವಿದ್ವಾಂಸ, ಡಾ. ಹಂಪನಹಳ್ಳಿ ತಿಮ್ಮೇಗೌಡ, ಎಚ್‌.ಎಸ್‌. ಅನಿಲ್‌ ಕುಮಾರ್‌, ಮಮತೇಶ್‌, ಜಯರಾಂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.