ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಬಡತನ ಮೆಟ್ಟಿನಿಂತ ಹಾಕಿಪಟು

ಮೇಘವತಿಗೆ ರಾಷ್ಟ್ರೀಯ ಹಾಕಿ ತಂಡ ಪ್ರತಿನಿಧಿಸುವ ಮಹದಾಸೆ
Last Updated 24 ಜನವರಿ 2022, 4:12 IST
ಅಕ್ಷರ ಗಾತ್ರ

ಹಾಸನ: ಮನೆಯಲ್ಲಿ ಬಡತನವಿದ್ದರೂ ಮೆಟ್ಟಿನಿಂತು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪದಕಗಳನ್ನು ಗಳಿಸಿರುವ ಹಾಕಿ ಆಟಗಾರ್ತಿ ಮೇಘವತಿ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುವ ಕನಸು ಹೊತ್ತಿದ್ದಾರೆ.

ಮೇಘವತಿ ಹಾಸನ ಹಾಕಿ ತಂಡದ ನಾಯಕಿಯಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. 2021ರಲ್ಲಿ ಹರಿಯಾಣಾದಲ್ಲಿ ನಡೆದ 11ನೇ ಮಹಿಳಾ ಸಬ್‌ ಜೂನಿಯರ್ ನ್ಯಾಷನಲ್‌ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸಿದ್ದಾರೆ. 2019ರಲ್ಲಿ ಜಾರ್ಖಂಡ್‌ನಲ್ಲಿ ನಡೆದ ನ್ಯಾಷನಲ್‌ ಸಬ್ ಜೂನಿಯರ್‌ ಚಾಂಪಿಯನ್‌ ಶಿಪ್‌ನಲ್ಲಿ ಆಟವಾಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಹಾಸನ ಹಾಕಿ ತಂಡವು ಸ್ಟೇಟ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 6 ಚಿನ್ನ, 3 ಬೆಳ್ಳಿ, 1 ಕಂಚಿನ ಪದಕವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಹಾಸನ ವಿದ್ಯಾನಗರದ ನಿವಾಸಿಯಾದ ಇವರ ತಂದೆ ಸೋಮಶೇಖರ್ ಗಾರೆ ಕೆಲಸ ಹಾಗೂ ತಾಯಿ ಗೀತಾ ಟೈಲರಿಂಗ್‌ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನವಿದ್ದರೂ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂಬ ಉತ್ಸಾಹಇವರನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ.

ನಗರದ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗಮಾಡುತ್ತಿರುವ ಮೇಘವತಿ 4ನೇ ತರಗತಿಯಿಂದಲೂ ಹಾಕಿ ಅಭ್ಯಾಸ ಮಾಡುತ್ತಿದ್ದು, ಈಗ ಜಿಲ್ಲಾ ತಂಡದ ನಾಯಕಿಯಾಗಿದ್ದಾರೆ. ತಂಡದ ತರಬೇತುದಾರ ಎಚ್‌.ಡಿ. ರವೀಶ್‌ ಇವರಿಗೆ ಮಾರ್ಗದರ್ಶಕರಾಗಿದ್ದಾರೆ.

‘ಹಾಕಿ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಬೇಕು. ಇನ್ನೂ ಹೆಚ್ಚು ಅಭ್ಯಾಸ ಮಾಡಿ ರಾಷ್ಟ್ರೀಯ ಹಾಕಿ ತಂಡವನ್ನು ಪ್ರತಿನಿಧಿಸಬೇಕು ಎಂಬ ಮಹದಾಸೆ ಇದೆ. ಕೋಚ್‌ ರವೀಶ್‌ ಅವರು ಚನ್ನಾಗಿ ಹೇಳಿ ಕೊಡುತ್ತಾರೆ. ಮನೆಯಲ್ಲಿಯೂ ಉತ್ತಮ ಪ್ರೋತ್ಸಾಹವಿದೆ. ಕ್ರೀಡೆಗೆ ಅಗತ್ಯವಾದ ಎಲ್ಲವನ್ನೂ ಕೊಡಿಸುತ್ತಾರೆ. ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ನಿತ್ಯ ಅಭ್ಯಾಸ ಮಾಡುತ್ತಿದ್ದೇನೆ. ಹಾಕಿಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರಬೇಕು ಎಂಬ ಬಯಕೆ ಇದೆ’ ಎಂದು ಮೇಘವತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT