ಹೊಳೆನರಸೀಪುರ: ಸರ್ಕಾರದ ಕೆಲಸ ದೇವರ ಕೆಲಸ. ನಾವು ನಮ್ಮ ಕೆಲಸವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡಬೇಕು. ಸರ್ಕಾರ ಈಗ ಜನಗಣತಿ ಮಾಡುವ ಜವಾಬ್ದಾರಿಯನ್ನು ನೀಡಿದೆ. ಎಲ್ಲರೂ ಈ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿಭಾಯಿಸಿ ಎಂದು ಸಿವಿಲ್ ನ್ಯಾಯಾಧೀಶರಾದ ಚೇತನಾ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಆಡಳಿತ ಗುರುವಾರ ಆಯೋಜಿಸಿದ್ದ ಜನಗಣತಿಗೆ ಆಯ್ಕೆ ಆಗಿದ್ದ ಮೇಲ್ವಿಚಾರಕರು ಮತ್ತು ಗಣತಿದಾರರ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಗಣತಿ ಅತ್ಯಂತ ಜವಾಬ್ದಾರಿಯುತ ಕಾರ್ಯ. ಈ ತರಬೇತಿ ಕಾರ್ಯಗಾರದಲ್ಲಿ ಆಸಕ್ತಿಯಿಂದ ತರಬೇತಿ ಪಡೆದು ಅನುಮಾನಗಳನ್ನು ಇಲ್ಲಿಯೇ ಪರಿಹರಿಸಿಕೊಂಡು ಜನಗಣತಿ ಕಾರ್ಯವನ್ನು ಅಚುಕ್ಕಟ್ಟಾಗಿ ಮಾಡಿಕೊಡಿ ಎಂದರು.

ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, 2011ರಲ್ಲಿ ದೇಶದಾದ್ಯಂತ ಜನಗಣತಿ ನಡೆದಿತ್ತು. ಅನಿವಾರ್ಯ ಕಾರಣದಿಂದ ಮತ್ತೆ ನಡೆದಿರಲಿಲ್ಲ. ಈಗ ಮತ್ತೆ ಏಪ್ರಿಲ್ 16 ರಿಂದ ಮಾಡಲಾಗುತ್ತಿದೆ. ತಾಲ್ಲೂಕಿನ ಗ್ರಾಮೀಣ ಪ್ರದೇಶಕ್ಕೆ 55 ಮೇಲ್ವಿಚಾರಕರು ಹಾಗೂ 330 ಗಣತಿದಾರರು, ಪುರಸಭೆ ವ್ಯಾಪ್ತಿಯಲ್ಲಿ 13 ಮೇಲ್ವಿಚಾರಕರು, 72 ಗಣತಿದಾರರನ್ನು ಗಣತಿಗೆ ನಿಯೋಜಿಸಲಾಗಿದೆ. ಈಗಾಗಲೇ ತಾಲ್ಲೂಕಿನ ಶಿಕ್ಷಕರು ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಾಗೂ ಸಮಾಜ ಕಲ್ಯಾಣ ಇಲಾಖೆ ನಡೆಸಿದ ಜಾತಿ ಸಮೀಕ್ಷೆ ಎರಡನ್ನೂ ಯಶಸ್ವಿಯಾಗಿ ಮಾಡಿದ್ದೀರಿ. ಅದೇ ರೀತಿ ಜನಗಣತಿಯನ್ನೂ ಚೆನ್ನಾಗಿ ಮಾಡಿ ನಮ್ಮ ತಾಲ್ಲೂಕಿಗೆ ಒಳ್ಳೆಯ ಹೆಸರು ತನ್ನಿ ಎಂದರು.

ಸಂಸದ ಶ್ರೇಯಸ್ ಎಂ.ಪಟೇಲ್ ಮಾತನಾಡಿ, ಜನಗಣತಿಯ ಮುಖ್ಯ ಆಶಯ ದೇಶದಲ್ಲಿರುವ ಜನಸಂಖ್ಯೆಯ ಪ್ರಮಾಣ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಅವರ ಜೀವನ ಮಟ್ಟವನ್ನು ಗುರುತಿಸುವುದಾಗಿದೆ. ಅದಕ್ಕೆ ಅನುಗುಣವಾಗಿ ದೇಶದ ಆರ್ಥಿಕ ಯೋಜನೆಗಳ ರೂಪಿಸಲು ಮತ್ತು ದೇಶದಲ್ಲಿರುವ ಸಂಪತ್ತನ್ನು ಸಮಾನವಾಗಿ ಹಂಚಿಕೆಗೂ ಜನಗಣತಿಯೇ ಆಧಾರ. ಆರೋಗ್ಯ, ವಸತಿ, ಶಿಕ್ಷಣ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಲು ಜನಗಣತಿ ಅತಿ ಮುಖ್ಯ. ಆದ್ದರಿಂದ ಸರ್ಕಾರದ ಮಾರ್ಗಸೂಚಿ ಅನುಸಾರ ಗಣತಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಎಂದರು.

ಜನಗಣತಿ ಕಾರ್ಯದಲ್ಲಿ ಯೋಧರಂತೆ ಕರ್ತವ್ಯ ನಿರ್ವಹಿಸುತ್ತಿರುವ ನಿಮ್ಮ ಕಾರ್ಯ ಅಭಿನಂದನೀಯ. ಗಣತಿಗೆ ತೆರಳಿದ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾದಲ್ಲಿ ತಾಲ್ಲೂಕು ಆಡಳಿತದ ಗಮನಕ್ಕೆ ತನ್ನಿ, ಸಮಸ್ಯೆ ನಿವಾರಣೆಗೆ ನಾನೂ ಸೇರಿದಂತೆ ನಾವೆಲ್ಲರೂ ನಿಮ್ಮ ಜೊತೆಗಿರುತ್ತೇವೆ ಎಂದು ಭರವಸೆ ನೀಡಿದರು.

ಜನಗಣತಿ ಕಾರ್ಯಕ್ಕೆ ಸುಜತ್ಅಲಿ, ಪ್ರಸನ್ನ, ವಿಷ್ಣುಕುಮಾರ್, ರಾಜು, ಬೈರಯ್ಯ, ಶಿವಸ್ವಾಮಿ, ಪ್ರಶಾಂತ್, ರವಿ ಅವರನ್ನು ತರಬೇತಿ ಕಾರ್ಯದಲ್ಲಿ ಮಾಸ್ಟರ್ ಟ್ರೈನರ್ಗಳಾಗಿ ನೇಮಿಸಲಾಗಿದೆ. ಬಿಇಒ ಸೋಮಲಿಂಗೇಗೌಡ, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ಶಿರಸ್ತೇದಾರ್ ವೆಂಕಟೇಶ್ ಎಂ.ಎನ್, ಉದಯಕುಮಾರ್, ಚುನಾವಣೆ ವಿಭಾಗದ ಕೀರ್ತಿ, ರಾಕೇಶ್, ಭರತ್, ಇಸಿಒ ಆನಂದ್, ಕಾಂತರಾಜಪ್ಪ, ರಾಮಚಂದ್ರಪ್ಪ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-36-569867605

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.