ಹೊಳೆನರಸೀಪುರ: ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ದೇವರ ದಾಸಿಮಯ್ಯ ಹಾಗೂ ಕೈವಾರ ತಾತಯ್ಯ ಜಯಂತ್ಯುತ್ಸವ ನಡೆಯಿತು.

‘ಮೊದಲ ವಚನಕಾರ ದೇವರ ದಾಸಿಮಯ್ಯ 11ನೇ ಶತಮಾನದಲ್ಲಿ ಸಮಾನತೆಯ ಸಂದೇಶ ಸಾರಿದರು. ಮುದನೂರಿನಲ್ಲಿ ಜನಿಸಿದ ಅವರು 176 ವಚನಗಳನ್ನು, ಕೀರ್ತನೆಗಳನ್ನು ರಚಿಸಿ ಸಮಾಜ ತಿದ್ದುವ ಕಾರ್ಯಮಾಡಿದರು’ ಎಂದು ನಿವೃತ್ತ ಪ್ರಾಂಶುಪಾಲ ಎಚ್.ಎಸ್. ಪ್ರಭುಶಂಕರ್ ತಿಳಿಸಿದರು.

‘ದಾಸಿಮಯ್ಯ ನೇಯ್ದಿದ್ದ ಬಟ್ಟೆಯೊಂದನ್ನು ಸಂತೆಯಲ್ಲಿ ಮಾರಾಟ ಮಾಡಲು ಹೋದಾಗ ಯಾರೂ ಖರೀದಿಸಲಿಲ್ಲ. ಬಳಿಕ ವ್ಯಕ್ತಿಯೊಬ್ಬರು ಬಟ್ಟೆ ಖರೀದಿಸಿದಾಗ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಸತ್ಕರಿಸಿದ್ದರು’ಎಂದರು.

ಕೈವಾರ ತಾತಯ್ಯ ರಚಿಸಿದ ಕಾಲಜ್ಞಾನ ಸಾಹಿತ್ಯ ಮತ್ತು ಭಕ್ತಿಗೀತೆ ಇಂದಿಗೂ ಪ್ರಸ್ತುತವಾಗಿವೆ. ಸಮಾಜದಲ್ಲಿ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯ ಜೀವನ ನಡೆಸುವ ಸಂದೇಶವನ್ನು ಅವರು ತಮ್ಮ ಕೀರ್ತನೆಗಳ ಮೂಲಕ ಸಾರಿದರು. ಸಮಾಜದ ಒಳಿತಿಗಾಗಿ ಶ್ರಮಿಸಿದ ಅವರ ಆದರ್ಶಗಳನ್ನು ಪಾಲಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದೇವಾಂಗ ಸಂಘದ ಅಧ್ಯಕ್ಷ ರಾಜೇಶ್, ಯುವಕ ಸಂಘದ ಅಧ್ಯಕ್ಷ ಎಚ್.ಆರ್. ಶಂಕರ್ ಹಾಗೂ ಬಲಿಜ ಜನಾಂಗದ ವಿ. ಗೋವಿಂದರಾಜು, ರೂಪಾ ಹರೀಶ್ ಅವರನ್ನು ಸನ್ಮಾನಿಸಲಾಯಿತು.

ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು, ಸುಜಾತ ಅಲಿ, ಪುರಸಭೆ ಮಾಜಿ ಅಧ್ಯಕ್ಷ ಎ.ಜಗನ್ನಾಥ್, ಸುರೇಶ್ ಕುಮಾರ್, ಮಂಜುನಾಥ, ಎಚ್.ಕೆ.ಮೋಹನ್, ಗಿರೀಶ್, ಕುಮಾರ್, ಬಲಿಜ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಜಿ.ವೆಂಕಟೇಶ್, ಧನ್ಯಕುಮಾರ್, ಜಯಶ್ರೀ ಜಗನ್ನಾಥ್, ಎಚ್.ಸಿ.ಅಶೋಕ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-36-1274731728

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.